ಬೆಸ್ಕಾಂನಲ್ಲಿ 228 ಹುದ್ದೆಗಳು ಖಾಲಿ ಇವೆ, ಅರ್ಜಿ ಹಾಕಿ
ಬೆಂಗಳೂರು, ಮಾ. 23 : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು ಕಿರಿಯ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 9.
ಕಿರಿಯ ಸಹಾಯಕ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಬೆವಿಕಂ ವ್ಯಾಪ್ತಿಯಲ್ಲಿನ ಯಾವುದೇ ಸ್ಥಳಕ್ಕೆ ನಿಯೋಜನೆ ಮಾಡಲಾಗುತ್ತದೆ. ಖಾಲಿ ಇರುವ ಸ್ಥಳಗಳಿಗೆ ಸಮಾಲೋಚನೆ ಮುಖಾಂತರ ಮೆರಿಟ್ ಆಧಾರದ ಮೇಲೆ ಸ್ಥಳ ನಿಯುಕ್ತಿ ಮಾಡಲಾಗುತ್ತದೆ. [ಕನ್ನಡದಲ್ಲಿ ನೇಮಕಾತಿ ಆದೇಶ ಓದಿ]

ವಿದ್ಯಾರ್ಹತೆ : ಪಿಯುಸಿ ವಿದ್ಯಾರ್ಹತೆ ಅಥವ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವ ಕರ್ನಾಟಕ ರಾಜ್ಯ ವೃತ್ತಿಪರ ಶಿಕ್ಷಣ ಪರಿಷತ್ತಿನಿಂದ ನೀಡಲಾದ ಅಕೌಂಟೆನ್ಸಿ ಮತ್ತು ಆಡಿಟಿಂಗ್ ಅಥವ ಅಕೌಂಟೆನ್ಸಿ ಮತ್ತು ಕಾಸ್ಟಿಂಗ್‌ನಲ್ಲಿ ಡಿಪ್ಲೋಮಾ ಹೊಂದಿರತಕ್ಕದ್ದು. [ಅರ್ಜಿ ಸಲ್ಲಿಸಲು ವಿಳಾಸ]
ಅಭ್ಯರ್ಥಿಗಳು ಅಂತಿಮ ಪರೀಕ್ಷೆಯಲ್ಲಿಗಳಿಸಿದ ಅಂಕಗಳನ್ನು ಶೇಕಡಾವಾರು ಅಂಕಗಳನ್ನು ಪರಿಗಣಿಸಲಾಗುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ 60, ಪ್ರವರ್ಗ 1/2ಎ/2ಬಿ/3ಎ/3ಬಿಗೆ ಸೇರಿದ ಅಭ್ಯರ್ಥಿಗಳು ಶೇ 50, ಪ.ಜಾ/ಪ.ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ತೇರ್ಗಡೆ ಹೊಂದಿರಬೇಕು.
ವಯೋಮಿತಿ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಪ್ರವರ್ಗ 2ಎ/2ಬಿ/3ಎ/3ಬಿಗೆ ಸೇರಿದ ಅಭ್ಯರ್ಥಿಗಳಿಗೆ 38 ವರ್ಷ. ಪ.ಜಾ/ಪ.ಪಂ/ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 40 ವರ್ಷಗಳು.
ಅರ್ಜಿ ಶುಲ್ಕ : ಸಾಮಾನ್ಯ/ಪ್ರವರ್ಗ 1/2ಎ/2ಬಿ/3ಎ/3ಬಿಗೆ ಸೇರಿದ ಅಭ್ಯರ್ಥಿಗಳಿಗೆ 500 ರೂ., ಪ.ಜಾ/ಪ.ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ 250 ರೂ.ಗಳು. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಲಭ್ಯವಿರುವ ಇ-ಚಲನ್ ಮೂಲಕ ಗಣಕೀಕೃತ ಅಂಚೆಕಚೇರಿಯಲ್ಲಿ ಶುಲ್ಕವನ್ನು ಪಾವತಿ ಮಾಡಬೇಕು.
ಅರ್ಜಿಯನ್ನು www.bescom.org ವೆಬ್‌ಸೈಟ್ ಮೂಲಕ ಸಲ್ಲಿಸಬೇಕಾಗಿದೆ. ಖುದ್ದಾಗಿ ಅಥವ ಅಂಚೆ ಮೂಲಕ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.












Click it and Unblock the Notifications