ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ವಿದ್ಯಾರ್ಥಿ ಪಾಸ್‌ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

|
Google Oneindia Kannada News

ಬೆಂಗಳೂರು, ಮೇ 15 : ಬೆಂಗಳೂರು ನಗರ ಸಾರಿಗೆ ಸಂಸ್ಥೆ ವಿದ್ಯಾರ್ಥಿ ರಿಯಾಯಿತಿ ಪಾಸಿನ ಸೌಲಭ್ಯ ಪಡೆಯಲು ಪ್ರಕಟಣೆ ಹೊರಡಿಸಿದೆ. ವಿದ್ಯಾರ್ಥಿಗಳು ಪಾಸುಗಳನ್ನು ಪಡೆಯಲು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು.

2018-19ನೇ ಸಾಲಿನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗಿತ್ತು. 2019-20 ನೇ ಸಾಲಿನಲ್ಲಿ ಸಹ ವಿದ್ಯಾರ್ಥಿ ಪಾಸಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಿ, ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.

ಹೇಳ್ಕೊಳ್ಳೋಕೆ ಬೆಂಗ್ಳೂರಲ್ಲಿ 80 ಲಕ್ಷ ವಾಹನ, ಬಿಎಂಟಿಸಿ ಮಾತ್ರ ಕೆಲವೇ ಸಾವಿರಹೇಳ್ಕೊಳ್ಳೋಕೆ ಬೆಂಗ್ಳೂರಲ್ಲಿ 80 ಲಕ್ಷ ವಾಹನ, ಬಿಎಂಟಿಸಿ ಮಾತ್ರ ಕೆಲವೇ ಸಾವಿರ

ವಿದ್ಯಾರ್ಥಿ ಪಾಸು ವಿತರಣೆಯ ಸಂಬಂಧ ಶಿಕ್ಷಣ ಸಂಸ್ಥೆಯು ಓರ್ವ ನೋಡೆಲ್ ಅಧಿಕಾರಿಯನ್ನು ನೇಮಿಸಬೇಕು ಎಂದು ಬಿಎಂಟಿಸಿ ಹೇಳಿದೆ. ವಿದ್ಯಾರ್ಥಿಗಳು ಪಾಸಿಗಾಗಿ ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯನ್ನು ಶಿಕ್ಷಣ ಸಂಸ್ಥೆಯ ನೋಡೆಲ್ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸುವುದು ಕಡ್ಡಾಯವಾಗಿರುತ್ತದೆ.

BMTC student pass

ವಿದ್ಯಾರ್ಥಿ ಪಾಸಿನ ಅರ್ಜಿಯನ್ನು ನೋಡೆಲ್ ಅಧಿಕಾರಿಗಳು ಪರಿಶೀಲಿಸಲು ಅನುವಾಗುಂತೆ ಶಿಕ್ಷಣ ಸಂಸ್ಥೆ ಹಾಗೂ ನೋಡೆಲ್ ಅಧಿಕಾರಿಗಳ ಮಾಹಿತಿಯನ್ನು ಬೆಂಗಳೂರು ನಗರ ಸಾರಿಗೆ ಸಂಸ್ಥೆಗೆ ನೀಡಬೇಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಸ್ ಚಾಲಕನ ಪರಿಸರ ಪ್ರೇಮ, ಜನರಿಗೆ ಹಸಿರು ಬಳ್ಳಿಯ ಸ್ವಾಗತಬಸ್ ಚಾಲಕನ ಪರಿಸರ ಪ್ರೇಮ, ಜನರಿಗೆ ಹಸಿರು ಬಳ್ಳಿಯ ಸ್ವಾಗತ

ಎಲ್ಲಾ ಶಿಕ್ಷಣ ಸಂಸ್ಥೆಯವರು (1 ರಿಂದ 10ನೇ ತರಗತಿಯವರೆಗೆ ರಾಜ್ಯ ಪಠ್ಯಕ್ರಮ ಹೊಂದಿದ ಶಾಲೆಗಳನ್ನು ಹೊರತುಪಡಿಸಿ) ಬೆಂಗಳೂರು ನಗರ ಸಾರಿಗೆ ಸಂಸ್ಥೆ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿ ಪಾಸನ್ನು ಆಯ್ಕೆ ಮಾಡಿಕೊಂಡು ನಂತರ ಸಂಸ್ಥೆಯ ಮಾಹಿತಿಯನ್ನು ಭರ್ತಿ ಮಾಡುವಂತೆ ಕೋರಲಾಗಿದೆ.

ಬಿಎಂಟಿಸಿಯಲ್ಲಿ ಇಟಿಎಸ್ ಬದಲು ಆಂಡ್ರಾಯ್ಡ್ ಟಿಕೆಟ್ ಯಂತ್ರಬಿಎಂಟಿಸಿಯಲ್ಲಿ ಇಟಿಎಸ್ ಬದಲು ಆಂಡ್ರಾಯ್ಡ್ ಟಿಕೆಟ್ ಯಂತ್ರ

ಶಿಕ್ಷಣ ಸಂಸ್ಥೆಗಳು ಅನುಮೋದನೆ ಮಾಡಿದ ಅರ್ಜಿಯನ್ನು ಮಾತ್ರ ಸ್ವೀಕಾರ ಮಾಡಲಾಗುತ್ತದೆ ಎಂದು ಬಿಎಂಟಿಸಿ ಹೇಳಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ 15/5/2019ರಿಂದ ಆರಂಭವಾಗಿದೆ.

English summary
Bangalore Metropolitan Transport Corporation (BMTC) invited application from student for student pass for the year 2019-20. Interested students can apply through online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X