ಬಿಡಿಎ ಫ್ಲಾಟ್ ಹಂಚಿಕೆ; ಕೋನದಾಸಪುರ, 2 ಬಿಎಚ್‌ಕೆಗೆ ಅರ್ಜಿ ಹಾಕಿ
ಬೆಂಗಳೂರು ನಗರದ ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿ, ಕೋನದಾಸಪುರ ನಿರ್ಮಾಣ ಮಾಡಿರುವ 2 ಬಿಎಚ್‌ಕೆ ಫ್ಲಾಟ್‌ಗಳನ್ನು ಹಂಚಿಕೆ ಮಾಡಲು ಬಿಡಿಎ ಅರ್ಜಿ ಕರೆದಿದೆ.
ಬೆಂಗಳೂರು, ಮಾರ್ಚ್ 19; ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಲವು ಕಡೆ ನಿವೇಶನಗಳನ್ನು ಅಭಿವೃದ್ಧಿ ಮಾಡುತ್ತದೆ, ಕೆಲವು ಕಡೆ ಫ್ಲಾಟ್‌ಗಳನ್ನು ನಿರ್ಮಾಣ ಮಾಡಿ ಬಳಿಕ ಜನರಿಗೆ ಹಂಚಿಕೆ ಮಾಡುತ್ತದೆ. ಬೆಂಗಳೂರು ನಗರದಲ್ಲಿ ಸ್ವಂತ ಮನೆ ಮಾಡಬೇಕು ಎಂಬ ಆಕಾಂಕ್ಷೆಯುಳ್ಳ ಜನರಿಗೆ ಈಗ ಸಿಹಿಸುದ್ದಿಯನ್ನು ಬಿಡಿಎ ನೀಡಿದೆ. ಕೋನದಾಸಪುರದಲ್ಲಿ ಬಿಡಿಎ ಫ್ಲಾಟ್‌ಗಳು ಸಾರ್ವಜನಿಕರಿಗೆ ಲಭ್ಯವಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ಬೆಂಗಳೂರು ನಗರದ ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿ, ಕೋನದಾಸಪುರ ಗ್ರಾಮದ ಸರ್ವೆ ನಂ: 22 & 23ರಲ್ಲಿ ನಿರ್ಮಿಸಲಾದ ವಸತಿ ಯೋಜನೆಯಲ್ಲಿ ಫ್ಲಾಟ್‌ಗಳು ಈಗ ಸಾರ್ವಜನಿಕರಿಗೆ ಲಭ್ಯವಿದೆ. ಒಟ್ಟು 672 ಫ್ಲಾಟ್‌ಗಳಿದ್ದು ಎಲ್ಲವೂ 2 ಬಿಎಚ್‌ಕೆ ಆಗಿದೆ. ಈ ಫ್ಲಾಟ್‌ಗಳ ದರ, ಅವುಗಳನ್ನು ಪಡೆಯಲು ಷರತ್ತು ಸೇರಿದಂತೆ ವಿವಿಧ ವಿವರಗಳನ್ನು ಬಿಡಿಎ ತನ್ನ ಜಾಹೀರಾತಿನಲ್ಲಿ ನೀಡಿದೆ. ಆಸಕ್ತರು ಫ್ಲಾಟ್‌ಗಳನ್ನು ಪಡೆಯಬಹುದಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಯ ಈ ಯೋಜನೆ ಹೆಸರು ಕೋನದಾಸಪುರ ವಸತಿ ಯೋಜನೆ (ಹಂತ-2). 2 ಬಿಎಚ್‌ಕೆ ಮನೆಗಳಿಗೆ ಮೂಲ ಬೆಲೆ ರೂ. 4800000. ಈ ಫ್ಲಾಟ್‌ಗಳ ನೋಂದಣಿಗಾಗಿ ಮತ್ತು ಅರ್ಜಿ ನಮೂನೆಗೆ ನಿಗದಿಪಡಿಸಿರುವ ಶುಲ್ಕ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದವರಿಗೆ ಅರ್ಜಿ ಶುಲ್ಕ ರೂ. 400 ಸಾಮಾನ್ಯ ಹಾಗೂ ಇತರೆ ಪ್ರವರ್ಗಗಳಿಗೆ ಅರ್ಜಿ ಶುಲ್ಕ ರೂ. 600. ನೋಂದಣಿ ಶುಲ್ಕ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದವರಿಗೆ ರೂ. 200, ಸಾಮಾನ್ಯ ಹಾಗೂ ಇತರೆ ಪ್ರವರ್ಗಗಳಿಗೆ ರ. 400. ಆಗಿದೆ ಎಂದು ಬಿಡಿಎ ಹೇಳಿದೆ.
ಸೂಚನೆಗಳು; ಪ್ರತಿ ಫ್ಲಾಟ್ ಬೆಲೆಯನ್ನು ಪ್ರತ್ಯೇಕವಾಗಿ ಬಿಡಿಎ ವೆಬ್‌ಸೈಟ್‌ನಲ್ಲಿ ನಮೂದಿಸಲಾಗಿದೆ. ಅದರಂತೆ ಫ್ಲಾಟ್‌ನ ಮೌಲ್ಯವನ್ನು ಪಾವತಿ ಮಾಡಬೇಕಾಗುತ್ತದೆ. ನೀರಿನ ವ್ಯವಸ್ಥೆಗಾಗಿ ಹಾಗೂ ವಿದ್ಯುತ್ ವ್ಯವಸ್ಥೆಗಾಗಿ ಪಾವತಿಸಬೇಕಾದ ಮೊತ್ತವು ಫ್ಲಾಟ್ ಬೆಲೆಯಲ್ಲಿ ಸೇರಿರುವುದಿಲ್ಲ. ನಿರ್ಮಾಣವಾಗುತ್ತಿರುವ ಫ್ಲಾಟ್‌ಗಳ ವಲಯಕ್ಕೆ ಅನುಗುಣವಾಗಿ ಪಾವತಿಸಬೇಕಾದ ಮೊತ್ತವನ್ನು ಪ್ರತ್ಯೇಕವಾಗಿ ನೋಂದಣಿಗೆ ಮೊದಲು ಪಾವತಿಸಬೇಕು. ಆ ಕಾಲಕ್ಕೆ ಅನ್ವಯವಾಗುವ ಕೇಂದ್ರ ಸರಕು ಮತ್ತು ಸೇವಾ ತೆರಿಗೆಯನ್ನು ಪ್ರತ್ಯೇಕವಾಗಿ ಹಂಚಿಕೆದಾರರು ಪಾವತಿಸಬೇಕು.

ಲಭ್ಯವಿರುವ ಕವರ್ಡ್ ಪಾರ್ಕಿಂಗ್ ಸ್ಥಳವನ್ನು ಪ್ರತ್ಯೇಕವಾಗಿ ಹಂಚಿಕೆದಾರರು ರೂ. 2.50 ಲಕ್ಷಗಳನ್ನು ಹೆಚ್ಚುವರಿಯಾಗಿ ಪಾವತಿಸಿ ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಆಧಾರದಲ್ಲಿ ಅವರು ಬಯಸುವ ಪಾರ್ಕಿಂಗ್ ಜಾಗವನ್ನು ಹಂಚಿಕೆ ಮಾಡಲಾಗುವುದು. ಹಂಚಿಕೆದಾರರು ಪ್ರತ್ಯೇಕವಾಗಿ 24 ತಿಂಗಳ ನಿರ್ವಹಣೆ ವೆಚ್ಚವನ್ನು ಫ್ಲಾಟ್ ನೋಂದಣಿ ಮಾಡುವ ಮೊದಲು ಮುಂಗಡವಾಗಿ ಪಾವತಿಸಬೇಕು, ಪಾವತಿಸಿದ ನಂತರ ನೋಂದಣಿ ಮಾಡಿಕೊಡಲಾಗುವುದು ಎಂದು ಬಿಡಿಎ ಹೇಳಿದೆ.
ಅರ್ಹತೆಗಳು ಏನು?; ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆಯ ಆಧಾರದಲ್ಲಿ ಫ್ಲಾಟ್‌ಗಳನ್ನು ಹಂಚಿಕೆ ಮಾಡಲಾಗುವುದು. ವಿಶೇಷ ಚೇತನರಿಗೆ ಹಂಚಿಕೆ ದರಗಳಲ್ಲಿ ಶೇ 5ರಷ್ಟು ಅಥವಾ ಒಂದು ಲಕ್ಷ ಇವುಗಳಲ್ಲಿ ಯಾರು ಕಡಿಮೆಯೋ ಅಷ್ಟು ರಿಯಾಯಿತಿ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ದಿನಾಂಕದಂದು 18 ವರ್ಷ ವಯಸ್ಸು ಪೂರ್ಣಗೊಂಡವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಫ್ಲಾಟ್ ಖರೀದಿಸಲು ಬಯಸುವ ಅರ್ಜಿದಾರರು ನೋಂದಣಿ ದಿನಾಂಕಕ್ಕೂ ಮೊದಲು ಕರ್ನಾಟಕದಲ್ಲಿ ಕನಿಷ್ಟ 2 ವರ್ಷಗಳ ಕಾಲ ವಾಸವಿರಬೇಕು.
ಕರ್ನಾಟಕ ರಾಜ್ಯಕ್ಕೆ ಯಾರ ಸೇವೆಯನ್ನು ನಿಯೋಜಿಸಲಾಗಿರುವುದೋ ಮತ್ತು ನೋಂದಣಿಯ ದಿನಾಂಕದ ತಕ್ಷಣದ ಹಿಂದಿನ 2 ವರ್ಷಗಳಿಗಿಂತ ಕಡಿಮೆ ಇಲ್ಲದೆ ಅವಧಿವರೆಗೆ ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಅಖಿಲ ಭಾರತ ಸೇವೆಗಳಿಗೆ ಸೇರಿದ ಅಧಿಕಾರಿಗಳ ಸಂಬಂಧದಲ್ಲಿ ಮತ್ತು ಕರ್ನಾಟಕ ರಾಜ್ಯದಲ್ಲಿ ಅಥವ ರಾಜ್ಯದ ಹೊರಗೆ ಸೇವೆ ಸಲ್ಲಿಸುತ್ತಿರುವ ಸೇವಾ ನಿರತ ಯೋಧರ ಸಂಬಂಧದಲ್ಲಿ ವಾಸದ ಸದರಿ ಆಗತ್ಯತೆಯನ್ನು ಸಡಿಲಿಸಲಾಗಿದೆ. ಅರ್ಜಿದಾರರು ತನ್ನ ಹೆಂಡತಿ/ ಗಂಡ ಅಥವಾ ತನ್ನ ಅವಲಂಬಿತ ಮಕ್ಕಳಾಗಲಿ, ತಮ್ಮನ್ನು ಅವಲಂಬಿಸಿರುವ ತಂದೆ ತಾಯುಗಳಾಗಲಿ ಅಥವಾ ಅವಲಂಬಿತ ಸಹೋದರರು, ಸಹೋದರಿಯರಾಗಲಿ ಹಿಂದಿನ ನಗರ ಅಭಿವೃದ್ಧಿ ಮಂಡಳಿ (ಸಿ.ಐ.ಟಿ.ಬಿ), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಥವಾ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ, 1959ರ (ಕರ್ನಾಟಕ ಕಾಯ್ದೆ 195911)ರ ಅನ್ವಯ ನೋಂದಣಿಯಾಗಿರುವ ಸಹಕಾರಿ ಸಂಘದಿಂದ ಅಥವಾ ಮೆಟ್ರೋ ಪಾಲಿಟಿನ್ ಏರಿಯಾ ವ್ಯಾಪ್ತಿಯಲ್ಲಿನ ಇನ್ಯಾವುದಾದರೂ ಪ್ರಾಧಿಕಾರದಿಂದ ನಿವೇಶನ ಅಥವಾ ಮನೆ ಹಂಚಿಕೆ ಪಡೆದಿದ್ದರೆ ಈ ಯೋಜನೆಯಡಿ ಫ್ಲಾಟ್‌ಗಾಗಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಬಿಡಿಎ ಕೇಂದ್ರ ಕಛೇರಿಯಲ್ಲಿ ನೋಂದಣಿ ನಮೂನೆ ಮತ್ತು ಅರ್ಜಿ ನಮೂನೆಯನ್ನು ನಿರ್ದಿಷ್ಟಪಡಿಸಿದ ಶುಲ್ಕವನ್ನು ಕೆನರಾ ಬ್ಯಾಂಕ್, ಬಿಡಿಎ ಶಾಖೆಯಲ್ಲಿ ಪಾವತಿಸಿ ಚಲನ್ ಸಲ್ಲಿಸಿ ಪಡೆಯಬಹದು ಅಥವಾ Onlineನಲ್ಲೂ ಶುಲ್ಕವನ್ನು ಸಲ್ಲಿಸಿ ಶುಲ್ಕದ ವಿವರವನ್ನು ಪ್ರಾಧಿಕಾರದ ಫ್ಲಾಟ್ ಹಂಚಿಕೆ ವಿಭಾಗದಲ್ಲಿ ಪ್ರಾರಂಭಿಕ ಠೇವಣಿಯನ್ನು ಫ್ಲಾಟ್‌ನ ಒಟ್ಟು ಮೌಲ್ಯದ ಶೇ.12 ರಷ್ಟು ಅರ್ಜಿಯ ಜೊತೆ ಪಾವತಿಸಿ ಚಲನ್ ಸಲ್ಲಿಸಿದ್ದಲ್ಲಿ ಅರ್ಜಿ ನಮೂನೆಗಳನ್ನು ವಿತರಿಸಲಾಗುವುದು. ಅರ್ಹ ಅರ್ಜಿದಾರರು, ನೋಂದಣಿ ಚೀಟಿಯನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದು, ಹಂಚಿಕೆಯಾದಲ್ಲಿ ಅದನ್ನು ಪ್ರಾಧಿಕಾರಕ್ಕೆ ಹಿಂದಿರುಗಿಸತಕ್ಕದ್ದು, ಈಗಾಗಲೇ ಫ್ಲಾಟ್‌ಗಳ ಖರೀದಿಗೆ ತಮ್ಮ ಹೆಸರನ್ನು ನೋಂದಾಯಿಸಲಾಗಿರುವ ಅರ್ಜಿದಾರರು ಮತ್ತೆ ನೋಂದಾಯಿಸುವ ಅಗತ್ಯವಿಲ್ಲ. ಹಳೆಯ ನೋಂದಣಿ ಕಾರ್ಡ್ ಅನ್ನು ಈ ಬಾರಿ ಅರ್ಜಿ ಸಲ್ಲಿಸಲು ಉಪಯೋಗಿಸತಕ್ಕದ್ದು.
ನಿಗದಿಪಡಿಸಿದ ಆರಂಭಿಕ ಠೇವಣಿಯೊಂದಿಗೆ ನಿಗದಿತ ಅವಧಿಯೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಪ್ರಾಧಿಕಾರದ ಫ್ಲಾಟ್ ಹಂಚಿಕೆ ವಿಭಾಗಕ್ಕೆ ಸಲ್ಲಿಸಬೇಕು. ಆರಂಭಿಕ ಠೇವಣಿಯು ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಅವರ ಪರವಾಗಿ ನಡೆದ ಕ್ರಾಸ್ ಮಾಡಲ್ಪಟ್ಟ ಸಿಸಿ ಬ್ಯಾಂಕರ್ಸ್ ಟೆಕ್ ಅಥವಾ ಪೇ ಅರ್ಡರ್ ಅಥವಾ ಆನ್‌ಲೈನ್/ ಆರ್. ಟಿ. ಜಿ. ಎಸ್/ NEFT ರೂಪದಲ್ಲಿರಬೇಕು. ಆರಂಭಿಕ ಠೇವಣಿ ಇಲ್ಲದ ಮತ್ತು ಅಪೂರ್ಣ ಅರ್ಜಿಗಳನ್ನು ಹಂಚಿಕೆಗೆ ಪರಿಗಣಿಸಲಾಗುವುದಿಲ್ಲ. ದಾಖಲಾತಿಗಳನ್ನು ಅರ್ಜಿಯಲ್ಲಿ ನಮೂದಿಸಿರುವ ಆಯಾ ಅಧಿಕಾರಿ/ ಅರ್ಜಿದಾರರು ಸಂಸ್ಥೆಗಳಿಂದ ಮಾತ್ರ ದೃಢೀಕರಿಸಿ ಸಲ್ಲಿಸತಕ್ಕದ್ದು. ಅರ್ಜಿದಾರರು ಪಾವತಿಸಿದ ಆರಂಭಿಕ ಠೇವಣಿಗೆ ಬಡ್ಡಿ ನೀಡಲಾಗುವುದಿಲ್ಲ. ಆರಂಭಿಕ ಠೇವಣಿಯನ್ನು ಯಶಸ್ವಿಯಾದ ಅರ್ಜಿದಾರರ ಫ್ಲಾಟ್ನ ಒಟ್ಟು ಮೊತ್ತಕ್ಕೆ ಹೊಂದಿಸಲಾಗುವುದು ಮತ್ತು ಯಶಸ್ವಿಯಾಗದ ಅರ್ಜಿದಾರರಿಗೆ ಸಂಬಂಧಿಸಿದ ಆರಂಭಿಕ ಠೇವಣಿಯನ್ನು ಬಡ್ಡಿ ರಹಿತವಾಗಿ ಹಿಂತಿರುಗಿಸಲಾಗುವುದು. ಯಾವುದೇ ಕಾರಣ ನೀಡದೆ ಫ್ಲಾಟ್ ಸಂಖ್ಯೆಗಳನ್ನು ಹೆಚ್ಚು ಅಥವಾ ಕಡಿಮೆಗೊಳಿಸುವ ಅಧಿಕಾರವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದಿರಿಸಿಕೊಂಡಿದೆ.
ಆಸಕ್ತರು ಮತ್ತು ಅರ್ಜಿದಾರರು ಹೆಚ್ಚಿನ ಮಾಹಿತಿಗಾಗಿ ಬಿಡಿಎ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.












Click it and Unblock the Notifications