ಬಿಜಿಎಸ್‌ ಮೇಲ್ಸೇತುವೆ ದುರಸ್ತಿ ಕಾಮಗಾರಿ ಶೀಘ್ರ ಆರಂಭ

ಬೆಂಗಳೂರು, ಜೂನ್‌ 28: ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯ ದುರಸ್ತಿ ಕಾರ್ಯವನ್ನು ಶೀಘ್ರವೇ ಆರಂಭಿಸಲು ಬಿಬಿಎಂಪಿ ನಿರ್ಧರಿಸಿದೆ. ಮರು ಡಾಂಬರೀಕರಣಕ್ಕೆ ಕೌನ್ಸಿಲ್‌ ಸಭೆಯು ಅನುಮೋದನೆ ನೀಡಿದ ತಕ್ಷಣವೇ ಕಾಮಗಾರಿಯನ್ನು ಆರಂಭಿಸಲಿದೆ.

ಟೌನ್‌ಹಾಲ್‌ನಿಂದ ಗೋರಿಪಾಳ್ಯದವರೆಗಿನ 2.8ಕಿ.ಮೀ ಉದ್ದದ ಮೇಲ್ಸೇತುವೆಯ ದುರಸ್ತಿಗೆ 4.30 ಕೋಟಿ ರೂ. ವೆಚ್ಚವಾಗಲಿದೆ. ನಾಗೇಶ್‌ ಮಾಯಣ್ಣ ಸಾರಿ ತ್ರಿಷಾ ಇನ್‌ಫ್ರಾ ಎಂನಿಜಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಕಾಮಗಾರಿಯ ಗುತ್ತಿಗೆ ಪಡೆದಿದೆ. ಟೆಂಡರ್‌ ಪ್ರಕ್ರಿಯೆಗೆ ಒಪ್ಪಿಗೆ ಕೋರಿ ಕೌನ್ಸಿಲ್‌ ಸಭೆಯಲ್ಲಿ ಪ್ರಸ್ತಾವ ತಿಳಿಸಲಾಗುತ್ತದೆ.

2014ರಲ್ಲಿ ಮೇಲ್ಸೇತುವೆ ದುರಸ್ತಿ ಕಾಮಗಾರಿಯನ್ನು ಬೇರೊಂದು ಕಂಪನಿಗೆ ನೀಡಲಾಗಿತ್ತು. ಆ ಕಂಪನಿಯ ಐದು ವರ್ಷಗಳ ಕಾಲ ನಿರ್ವಹಣೆ ಮಾಡಬೇಕಿತ್ತು. ಆದರೆ ಟೆಂಡ್‌ ಷರತ್ತುಗಳನ್ನು ಉಲ್ಲಂಘಿಸಿ ಕೇವಲ 3 ವರ್ಷಕ್ಕೆ ನಿರ್ವಹಣೆಯನ್ನು ಸ್ಥಗಿತಗೊಳಿಸಿದೆ. ಆದ ಕಾರಣ ಕಂಪನಿಯು 11.13 ಲಕ್ಷ ರೂ. ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಎಂಜಿನಿಯರ್‌ ಒಬ್ಬರು ತಿಳಿಸಿದ್ದಾರೆ.

Apathy in BGS fly over: Repair work resume soon

ಮೇಲ್ಸೇತುವೆಗೆ ಹಾಕಳಾಗಿರುವ ಡಾಂಬರ್‌ನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಹೊಸದಾಗಿ ಹಾಕಲಾಗುತ್ತದೆ. ಟೆಂಡರ್‌ಗೆ ಕೌನ್ಸಿಲ್‌ ಸಭೆಯ ಒಪ್ಪಿಗೆ ದೊರೆತ ತಕ್ಷಣ ಸಂಚಾರ ಪೊಲೀಸರಿಗೆ ಪತ್ರ ಬರೆದು ಕಾಮಗಾರಿಗೆ ಅನುವು ಮಾಡಿಕೊಡುವಂತೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+