ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ : ಜುಲೈ 1ರಿಂದ ಮತ್ತೊಂದು ಟೋಲ್‌ ಕೇಂದ್ರ ಆರಂಭಕ್ಕೆ ಸಿದ್ಧತೆ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಮತ್ತೊಂದು ಟೋಲ್ ವಸೂಲಿ ಕೇಂದ್ರ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸವಾರರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಇತ್ತೀಚೆಗೆ ತಾನೆ ಟೋಲ್ ದರ ಹೆಚ್ಚಳ ಮಾಡಿದ್ದು ಜನಾಕ್ರೋಶಕ್ಕೆ ಕಾರಣವಾಗಿತ್ತು, ಈಗ ಮತ್ತೊಂದು ಟೋಲ್‌ ಕೇಂದ್ರ ಆರಂಭವಾಗಲಿದ್ದು ಟೋಲ್ ದರ ದುಪ್ಪಟ್ಟಾಗಲಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಬಳಿಯಿರುವ ಗಣಂಗೂರುನಲ್ಲಿ ಟೋಲ್ ಕೇಂದ್ರ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆಯ 55-134 ಕಿಮೀ ವ್ಯಾಪ್ತಿಗೆ ಟೋಲ್ ಸಂಗ್ರಹ ಮಾಡಲಿದ್ದಾರೆ. ಇದುವರೆಗೂ ಬೆಂಗಳೂರು-ನಿಡಘಟ್ಟದ ವ್ಯಾಪ್ತಿಯವರೆಗೆ ಮಾತ್ರ ಟೋಲ್ ಸಂಗ್ರಹ ಮಾಡಲಾಗುತ್ತಿತ್ತು. ಈಗ ಮತ್ತೊಂದು ಟೋಲ್ ಕೇಂದ್ರ ಆರಂಭವಾಗಲಿದ್ದು, ಮೈಸೂರು-ಬೆಂಗಳೂರು ಪ್ರಯಾಣ ಮತ್ತಷ್ಟು ದುಬಾರಿಯಾಗಲಿದೆ.

 Another Toll In Bengaluru-Mysuru Expressway Start From July 1st : Know The Toll fare

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾರ್ಯಾರಂಭ ಮಾಡಿದಾಗಿನಿಂದಲೂ ಅಪಘಾತಗಳ ಕಾರಣಕ್ಕೆ ಭಾರಿ ಸುದ್ದಿಯಾಗುತ್ತಿದೆ. ಸಾವಿನ ಹೆದ್ದಾರಿಯಾಗಿ ಮಾರ್ಪಟ್ಟಿದ್ದು 6 ತಿಂಗಳ ಅವಧಿಯಲ್ಲೇ ಅಪಘಾತದಿಂದ 58ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈಗ ಮತ್ತೊಂದು ಟೋಲ್ ವಸೂಲಿ ಕೇಂದ್ರ ಆರಂಭಿಸುತ್ತಿರುವುದು ಜನರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಲಿದೆ.

ಬೆಂಗಳೂರು-ನಿಡಘಟ್ಟ ಟೋಲ್ ದರ ವಿವರ

ಕಾರ್, ವ್ಯಾನ್‌, ಜೀಪ್‌ಗಳ ಏಕಮುಖ ಸಂಚಾರ - 165 ರೂಪಾಯಿ
ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಸಂಚಾರ: 270 ರೂಪಾಯಿ
ಟ್ರಕ್‌, ಬಸ್, 2 ಆಕ್ಸೆಲ್‌ ವಾಹನಗಳ ಏಕಮುಖ ಸಂಚಾರ: 565 ರೂಪಾಯಿ
3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ : 615 ರೂಪಾಯಿ
ಭಾರಿ ವಾಹನಗಳ ಏಕಮುಖ ಸಂಚಾರ : 885 ರೂಪಾಯಿ
7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್‌ ವಾಹನಗಳ ಏಕಮುಖ ಸಂಚಾರ : 1080 ರೂಪಾಯಿ

ಗಣಂಗೂರುನಲ್ಲಿ ಟೋಲ್ ಕೇಂದ್ರದ ದರ

ಏಕಮುಕ ಸಂಚಾರಕ್ಕೆ ನಿಗದಿ ಮಾಡಿರುವ ದರ

ಕಾರು, ಜೀಪು, ವ್ಯಾನು : 155 ರುಪಾಯಿ
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ, ಮಿನಿ ಬಸ್ : 250 ರುಪಾಯಿ
ಎರಡು ಆಕ್ಸಲ್‌ಗಳ ಟ್ರಕ್, ಬಸ್ : 525 ರುಪಾಯಿ
ಮೂರು ಆಕ್ಸಲ್‌ಗಳ ವಾಣಿಜ್ಯ ವಾಹನ: 575 ರೂಪಾಯಿ
4-6 ಆಕ್ಸಲ್‌ಗಳ ಭಾರಿ ಗಾತ್ರದ ವಾಹನ, ಜೆಸಿಬಿ: 825 ರೂಪಾಯಿ
7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್‌ ವಾಹನಗಳು: 1005 ರೂಪಾಯಿ

ಒಂದೇ ದಿನ ಹೋಗಿ ಬರಲು ಟೋಲ್‌ ದರ

ಕಾರು, ಜೀಪು, ವ್ಯಾನು : 235 ರುಪಾಯಿ
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ, ಮಿನಿ ಬಸ್ : 375 ರುಪಾಯಿ
ಎರಡು ಆಕ್ಸಲ್‌ಗಳ ಟ್ರಕ್, ಬಸ್ : 790 ರುಪಾಯಿ
ಮೂರು ಆಕ್ಸಲ್‌ಗಳ ವಾಣಿಜ್ಯ ವಾಹನ: 860 ರೂಪಾಯಿ
4-6 ಆಕ್ಸಲ್‌ಗಳ ಭಾರಿ ಗಾತ್ರದ ವಾಹನ, ಜೆಸಿಬಿ: 1240 ರೂಪಾಯಿ
7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್‌ ವಾಹನಗಳು: 1510 ರೂಪಾಯಿ

ಮಂಡ್ಯ ಜಿಲ್ಲೆಯ ಒಳಗಿನ ವಾಹನಗಳಿಗೆ ದರ

ಕಾರು, ಜೀಪು, ವ್ಯಾನು : 80 ರುಪಾಯಿ
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ, ಮಿನಿ ಬಸ್ :125 ರುಪಾಯಿ
ಎರಡು ಆಕ್ಸಲ್‌ಗಳ ಟ್ರಕ್, ಬಸ್ : 265 ರುಪಾಯಿ
ಮೂರು ಆಕ್ಸಲ್‌ಗಳ ವಾಣಿಜ್ಯ ವಾಹನ: 285 ರೂಪಾಯಿ
4-6 ಆಕ್ಸಲ್‌ಗಳ ಭಾರಿ ಗಾತ್ರದ ವಾಹನ, ಜೆಸಿಬಿ: 415 ರೂಪಾಯಿ
7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್‌ ವಾಹನಗಳು: 505 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+