• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿ.ಕೆ.ಶಿವಕುಮಾರ್ ಬಗ್ಗೆ ಸಂಸದ ಅನಂತ್‌ಕುಮಾರ್ ಹೆಗಡೆ ವ್ಯಂಗ್ಯ

|

ಬೆಂಗಳೂರು, ಡಿಸೆಂಬರ್ 27: ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಗ್ಗೆ ಬಿಜೆಪಿ ಸಂಸದ ಅನಂತ್‌ಕುಮಾರ್ ಹೆಗಡೆ ಟ್ವಿಟ್ಟರ್‌ ನಲ್ಲಿ ವ್ಯಂಗ್ಯ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಏಸು ಪ್ರತಿಮೆಗೆ ಶಿಲಾನ್ಯಾಸ ಮಾಡಿದ ಬಗ್ಗೆ ಟ್ವೀಟ್‌ ಮಾಡಿರುವ ಅನಂತ್‌ಕುಮಾರ್ ಹೆಗ್ಡೆ, ಡಿ.ಕೆ.ಶಿವಕುಮಾರ್ ಅವರನ್ನು ಪರೋಕ್ಷವಾಗಿ 'ಗುಲಾಮ' ಎಂದು ಕರೆದಿದ್ದಾರೆ.

'ಇಲ್ಲೊಬ್ಬ Tihar Returned (ತಿಹಾರ್‌ ಜೈಲಿನಿಂದ ವಾಪಸ್ ಬಂದ) ಮಹನೀಯರೊಬ್ಬರು, ಯಾವುದೋ ಹುದ್ದೆಯ ಆಸೆಯೊಂದಿಗೆ, ಅವರ ಇಟಲಿಯಮ್ಮನನ್ನು ಪ್ರಸನ್ನಗೊಳಿಸಲು, ಅತಿ ದೊಡ್ಡ ಯೇಸುವಿನ ಪ್ರತಿಮೆ ಸ್ಥಾಪಿಸಿ ತಮ್ಮ ಪೌರುಷವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.

'ಓಲೈಕೆ ರಾಜಕೀಯಕ್ಕೆ ಪೈಪೋಟಿ ನೀಡಲು ಕಾಂಗ್ರೆಸ್‌ನಲ್ಲಿ ದಲ್ಲಿ ಇನ್ನು ಹೆಚ್ಚಿನ ಗುಲಾಮರು ಅಖಾಡಕ್ಕೆ ಇಳಿದರು ಅಚ್ಚರಿಯಿಲ್ಲ' ಎಂದು ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಏಸು ಪ್ರತಿಮೆ ಅನಾವರಣ ಮಾಡಿದ ಬಗ್ಗೆ ಸಚಿವ ಈಶ್ವರಪ್ಪ ಸಹ ಟೀಕಿಸಿದ್ದು, 'ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ವಿರೋಧಿಸಿದ್ದ ಕಾಂಗ್ರೆಸ್, ವ್ಯಾಟಿಕನ್‌ ನಲ್ಲಿ ಹುಟ್ಟಿದ ಏಸುವಿನ ಪ್ರತಿಮೆ ನಿರ್ಮಿಸಲು ಹೊರಟಿದೆ' ಎಂದಿದ್ದಾರೆ.

English summary
BJP MP Ananthkumar Hegde mocks DK Shivakumar for inaugurating Jesus statue. He said congress leader trying to impress Italian Sonia Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X