Amrit Bharat Station ಯೋಜನೆ ಅಡಿಯಲ್ಲಿ ಬೆಂಗಳೂರಿನ 15 ರೈಲು ನಿಲ್ದಾಣಗಳ ನವೀಕರಣ- ಯಾವುವು? ಅಂಕಿಅಂಶ, ಮಾಹಿತಿ, ವಿವರ
ಬೆಂಗಳೂರು, ಏಪ್ರಿಲ್ 11: ಕೇಂದ್ರ ಸರ್ಕಾರವು ಇತ್ತೀಚೆಗೆ ಪ್ರಾರಂಭಿಸಿರುವ ಅಮೃತ್ ಭಾರತ್ ಸ್ಟೇಷನ್ ( Amrit Bharat Station ) ಯೋಜನೆಯಡಿ, ಪೂರ್ವ ಬೆಂಗಳೂರಿನ ( Bengaluru ) ರೈಲ್ವೆ ಮೂಲ ಸೌಕರ್ಯವನ್ನು ಸಹ ನವೀಕರಿಸಲಾಗುವುದು ಎಂದು ಭಾರತೀಯ ರೈಲ್ವೆ ( Indian Railways ) ಇಲಾಖೆ ಮಾಹಿತಿ ನೀಡಿದೆ. ದೇಶದಾದ್ಯಂತ 1275 ರೈಲು ನಿಲ್ದಾಣಗಳ ಉನ್ನತೀಕರಣ ಮತ್ತು ಆಧುನೀಕರಣಕ್ಕಾಗಿ ಕೇಂದ್ರವು ಈ ಯೋಜನೆಯನ್ನು ಪ್ರಾರಂಭಿಸಿದೆ.
ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ, ಸೌತ್ ವೆಸ್ಟರ್ನ್ ರೈಲ್ವೇ (SWR) ಮೊದಲು ಎರಡು ಪ್ರಮುಖ ರೈಲು ನಿಲ್ದಾಣಗಳ ನವೀಕರಣಕ್ಕೆ ಕಾರ್ಯ ಯೋಜನೆ ರೂಪಿಸಿದೆ. ತೀವ್ರ ಜನನಿಬಿಡ ರೈಲು ನಿಲ್ದಾಣಗಳಾದ ಬೆಂಗಳೂರಿನ ಕೃಷ್ಣರಾಜಪುರಂ ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳನ್ನು ಅಪ್‌ಗ್ರೆಡ್ ಮಾಡಲು ನಿರ್ಧರಿಸಿದೆ.

ಬೆಂಗಳೂರು-ಜೋಲಾರಪೇಟೆ ಜಂಕ್ಷನ್ ಲೈನ್‌ನಲ್ಲಿರುವ ಈ ಎರಡು ನಿಲ್ದಾಣಗಳು ಸೇರಿದಂತೆ ಬೆಂಗಳೂರು ವಿಭಾಗದ ಅಡಿಯಲ್ಲಿ ಒಟ್ಟು 15 ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಎಸ್‌ಡಬ್ಲ್ಯೂಆರ್ ಅಧಿಕಾರಿಗಳು ಮಾಹಿತಿ ನೀಡಿದರು.
ಪುನರಾಭಿವೃದ್ಧಿ ಯೋಜನೆಯ ಅಡಿಯಲ್ಲಿ ರೈಲ್ವೆ ನಿಲ್ದಾಣಗಳ ಪ್ಲಾಟ್‌ಫಾರ್ಮ್‌ಗಳನ್ನು ನವೀಕರಿಸುವುದು, ಎಸ್ಕಲೇಟರ್‌ಗಳು, ಲಿಫ್ಟ್‌ಗಳನ್ನು ಒದಗಿಸಲಾಗುವುದು. ರೈಲ್ವೆ ನಿಲ್ದಾಣಗಳ ಬಳಿಯ ಪಾರ್ಕಿಂಗ್ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದು, ವಿಶ್ರಾಂತಿ ಕೊಠಡಿಗಳು, ನಿಲ್ದಾಣಗಳ ಸುಂದರೀಕರಣ ಮತ್ತು ರೈಲ್ವೆ ಪ್ರಯಾಣಿಕರಿಗೆ ಸಹಾಯ ಮಾಡುವ ಹೆಚ್ಚಿನ ಸೌಕರ್ಯಗಳನ್ನು ಒದಗಿಸಲು ಕಾರ್ಯ ಯೋಜನೆ ರೂಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ನಿಲ್ದಾಣಗಳಲ್ಲಿ ಇರುವ ಸ್ಕೈವಾಕ್‌ಗಳು ಹಾಗೂ ಪ್ಲಾಟ್‌ಫಾರ್ಮ್‌ಗಳನ್ನು ಬದಲಾಯಿಸಲು ಈ ಯೋಜನೆಯು ಸಹಾಯ ಮಾಡುತ್ತದೆ. ಆದರೆ ಎಸ್ಕಲೇಟರ್‌ಗಳು ಮತ್ತು ಲಿಫ್ಟ್‌ಗಳನ್ನು ಅಭಿವೃದ್ದಿಪಡಿಸುವುದು ಈ ಯೋಜನೆಯ ಭಾಗವಾಗಿಲ್ಲ ಎಂದು ತಿಳಿದುಬಂದಿದೆ. ನವೀಕರಣದ ನಂತರ, ಇಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಸಹಾಯ ಮಾಡುವ ಎಸ್ಕಲೇಟರ್‌ಗಳು ಮತ್ತು ಲಿಫ್ಟ್‌ಗಳನ್ನು ಪಡೆಯಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಕೃಷ್ಣರಾಜ ಪುರಂ ರೈಲು ನಿಲ್ದಾಣದಲ್ಲಿ ಪ್ರತಿ ದಿನ ಸುಮಾರು 25, 000 ಪ್ರಯಾಣಿಕರು ಬಂದಿಳಿಯುತ್ತಾರೆ. ವೈಟ್‌ಫೀಲ್ಡ್ ನಿಲ್ದಾಣವು 8,000 ಪ್ರಯಾಣಿಕರನ್ನು ಪ್ರತಿ ದಿನ ಹೊಂದಿರುತ್ತದೆ. ಇದಲ್ಲದೆ, ಬೆಂಗಳೂರು ನಗರದಿಂದ ವೈಟ್‌ಫೀಲ್ಡ್‌ಗೆ ಪ್ರಯಾಣಿಸುವ ಪ್ರಯಾಣಿಕರ ಸರಾಸರಿ ಸಂಖ್ಯೆ 20,000 ಆಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಕೇಂದ್ರದ ಅಮೃತ್ ಭಾರತ್ ಸ್ಟೇಷನ್ ಯೋಜನೆಯು ಉತ್ತಮ ನಿಲ್ದಾಣದ ಪ್ರವೇಶ, ಸಂಚಾರ ಪ್ರದೇಶಗಳು, ವೇಟಿಂಗ್ ಹಾಲ್‌ಗಳು, ಶೌಚಾಲಯಗಳು, ಅಗತ್ಯಕ್ಕೆ ತಕ್ಕಂತೆ ಲಿಫ್ಟ್ / ಎಸ್ಕಲೇಟರ್‌ಗಳು, ಸ್ವಚ್ಛತೆ, ಉಚಿತ ವೈ - ಫೈ, ಸ್ಥಳೀಯ ಉತ್ಪನ್ನಗಳಿಗೆ ಕಿಯೋಸ್ಕ್‌ಗಳು, ಉತ್ತಮ ಪ್ರಯಾಣಿಕರ ಮಾಹಿತಿಯಂತಹ ಸುಧಾರಿತ ಸೌಕರ್ಯಗಳೊಂದಿಗೆ ನಿಲ್ದಾಣಗಳ ಅಭಿವೃದ್ಧಿಯ ಗುರಿಯನ್ನು ಹೊಂದಿದೆ. ವ್ಯವಸ್ಥೆಗಳು, ಕಾರ್ಯನಿರ್ವಾಹಕ ವಿಶ್ರಾಂತಿ ಕೊಠಡಿಗಳು, ವ್ಯಾಪಾರ ಸಭೆಗಳಿಗೆ ನಾಮನಿರ್ದೇಶಿತ ಸ್ಥಳಗಳು, ಭೂದೃಶ್ಯ ಇತ್ಯಾದಿಗಳನ್ನು ಅಭಿವೃದ್ಧಿ ಪಡಿಸುವುದು ಈ ಯೋಜನೆಯ ಭಾಗವಾಗಿದೆ.
ಈ ಯೋಜನೆಯು ರೈಲ್ವೇ ಕಟ್ಟಡಗಳ ಸುಧಾರಣೆ, ಮಲ್ಟಿಮೋಡಲ್ ಏಕೀಕರಣ, ದಿವ್ಯಾಂಗರಿಗೆ ಸೌಕರ್ಯಗಳು, ಸುಸ್ಥಿರ ಮತ್ತು ಪರಿಸರ ಸ್ನೇಹಿ ಪರಿಹಾರಗಳನ್ನು ಒಳಗೊಂಡಿದೆ. ನಿಲುಭಾರದ ಟ್ರ್ಯಾಕ್‌ಗಳನ್ನು ಒದಗಿಸುವುದು, ಕಾರ್ಯಸಾಧ್ಯತೆ ಮತ್ತು ದೀರ್ಘಾವಧಿಯಲ್ಲಿ ನಿಲ್ದಾಣದ ಬಳಿ ನಗರ ಕೇಂದ್ರಗಳನ್ನು ರಚಿಸುವ ಗುರಿಯನ್ನೂ ಈ ಯೋಜನೆ ಹೊಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.












Click it and Unblock the Notifications