ಚಿದಾನಂದಮೂರ್ತಿ, ಸಿದ್ದಲಿಂಗಯ್ಯರ ಭೇಟಿ ಮಾಡಿದ ಅಮಿತ್ ಶಾ
ಬೆಂಗಳೂರು, ಏಪ್ರಿಲ್ 18: ಬಸವ ಜಯಂತಿಯಂದು ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಿಜೆಪಿಯ ಅಮಿತ್ ಶಾ ಅವರು ಸಂಶೋಧಕ ಚಿದಾನಂದ ಮೂರ್ತಿ ಮತ್ತು ಬಂಡಾಯ ಸಾಹಿತಿ ಸಿದ್ದಲಿಂಗಯ್ಯ ಅವರನ್ನು ಭೇಟಿ ಮಾಡಿದರು.
ಇಬ್ಬರೂ ಹಿರಿಯ ಚಿಂತಕರ ಸ್ವಗೃಹಕ್ಕೆ ತೆರಳಿ ಭೇಟಿ ಮಾಡಿದ ಅಮಿತ್ ಶಾ, ಯಡಿಯೂರಪ್ಪ ಹಾಗೂ ಇತರ ಬಿಜೆಪಿ ಮುಖಂಡರು ಕೆಲ ಕಾಲ ಅವರೊಂದಿಗೆ ಚರ್ಚೆ ನಡೆಸಿ ಉಪಯುಕ್ತ ಸಲಹೆಗಳನ್ನು ಪಡೆದರು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ಅವರು, 'ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವುದಕ್ಕೆ ಬಿಡಬೇಡಿ' ಎಂದು ಅಮಿತ್ ಶಾ ಅವರಲ್ಲಿ ಮನವಿ ಮಾಡಿದರು. ಆದರೆ ಇದಕ್ಕೆ ಶಾ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎನ್ನಲಾಗಿದೆ. ಜೊತೆಗೆ ಗೋ ರಕ್ಷಣೆ ಕುರಿತು ವಿಶೇಷ ಕಾನೂನು ರಚಿಸುವಂತೆಯೂ ಚಿದಾನಂದಮೂರ್ತಿ ಅವರು ಶಾ ಅವರಲ್ಲಿ ಮನವಿ ಮಾಡಿದ್ದಾರೆ.
In Pics: ಬಿಜೆಪಿಯ ಬಸವ ಜಯಂತಿ, ಚಿಂತಕರೊಂದಿಗೆ ಚರ್ಚೆ ಮಾಡಿದ ಶಾ
ನಂತರ ದಲಿತ ಸಾಹಿತಿ ಸಿದ್ದಲಿಂಗಯ್ಯ ಅವರ ಮನೆಗೆ ತೆರಳಿದ ಬಿಜೆಪಿ ಪಟಾಲಂ ಅಲ್ಲಿಯೂ ಕೆಲ ಕಾಲ ಚರ್ಚೆ ನಡೆಸಿದರು. ಈ ಸಮಯ ಮಾತನಾಡಿದ ಸಿದ್ದಲಿಂಗಯ್ಯ ಅವರು ಅನಂತ್ಕುಮಾರ್ ಹಗಡೆ ಅವರ ದಲಿತ ವಿರೋಧಿ ಹಾಗೂ ಜಾತ್ಯಾತೀತವಾದಿ ವಿರೋಧಿ ಹೇಳಿಕೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿ, ಅನಂತ್ಕುಮಾರ್ ಹೆಗಡೆ ವಿರುದ್ಧ ಸೂಕ್ತ ಕ್ರಮ ಕೂಗೊಳ್ಳಲು ಮನವಿ ಮಾಡಿದರು ಮತ್ತು ದಲಿತರ ಹಕ್ಕುಗಳನ್ನು ಮೊಟಕುಗೊಳಿಸುವ ಯಾವುದೇ ತಿದ್ದುಪಡಿಯನ್ನು ತರದಂತೆ ಹಾಗೂ ಸುಪ್ರಿಂ ತೀರ್ಪಿನ ವಿರುದ್ಧ ಕೇಂದ್ರ ಹೋರಾಡುವಂತೆ ಮನವಿ ಮಾಡಿದರು.
ಸಿದ್ದಲಿಂಗಯ್ಯ ಅವರು ಅಂಬೇಡ್ಕರ್ ಅವರ ಚಿತ್ರಪಟ ಹಾಗೂ ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಪುಸ್ತಕವನ್ನು ಅಮಿತ್ ಶಾ ಅವರಿಗೆ ಉಡುಗೊರೆಯಾಗಿ ನೀಡಿದರು.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ? -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ














Click it and Unblock the Notifications