ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಮನೆ ಮೈದಾನದಲ್ಲಿ ಅಮಿತ್ ಶಾ ಕಾರ್ಯಕ್ರಮ: ಬೆಂಗಳೂರಲ್ಲಿ ವಾಹನ ಸಂಚಾರ ದಟ್ಟಣೆ

|
Google Oneindia Kannada News

ಬೆಂಗಳೂರು, ಏ. 1: ಅರಮನೆ ಮೈದಾನದಲ್ಲಿ ಸಹಕಾರ ಇಲಾಖೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಲಿದ್ದು, ರಾಜಧಾನಿಯ ಸಂಚಾರ ಪಥಗಳನ್ನು ಬದಲಿಸಲಾಗಿದೆ. ಯುಗಾದಿ ಹಬ್ಬಕ್ಕೆ ಊರುಗಳಿಗೆ ತೆರಳುತ್ತಿದ್ದ ಜನ ಸಾಮಾನ್ಯರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ.

ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವ ಕಾರಣ ಸಂಚಾರ ದಟ್ಟಣೆ ಉಂಟಾಗಲಿದೆ. ಹೀಗಾಗಿ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.

ಮೈಸೂರು ರಸ್ತೆ ಕಡೆಯಿಂದ ಬರುವ ಬಸ್, ಟೆಂಪೋಗಳು ಮೈಸೂರು ರಸ್ತೆ, ನಾಯಂಡಹಳ್ಳಿ ಮಾರ್ಗದಲ್ಲಿ ಎಡ ತಿರುವು ಪಡೆದು ರಾಜಕುಮಾರ ಸಮಾಧಿ ರಸ್ತೆ ಮೂಲಕ ತುಮಕೂರು ರಸ್ತೆ ತಲುಪುವುದು. ಬಿಇಎಲ್ ವೃತ್ತದ ಮೂಲಕ ಹೆಬ್ಬಾಳ ಮೇಲ್ಸೇತುವೆ ಸಂಪರ್ಕಿಸಿ ಮೇಖ್ರಿ ವೃತ್ತದ ಮೂಲಕ ಜಯ ಮಹಲ್ ಮೂಲಕ ಅರಮನೆ ಮೈದಾನ ತಲುಪಲು ಅವಕಾಶ ಮಾಡಿಕೊಡಲಾಗಿದೆ.

Amit Shah in Karnataka: Traffic Routes Diverted in Bengaluru as Amit Shah Program in Palace Grounds

ತುಮಕೂರು ರಸ್ತೆಯಿಂದ ಬರುವ ವಾಹನಗಳು ಗೊರಗುಂಟೆ ಪಾಳ್ಯ ಜಂಕ್ಷನ್ ಮೂಲಕ ಬಿಇಎಲ್ ರಸ್ತೆ, ಹೆಬ್ಬಾಳ ಮೇಲ್ಸೇತುವೆ, ಮೇಖ್ರಿ ವೃತ್ತ ಸರ್ವೀಸ್ ರಸ್ತೆ ಮೂಲಕ ಜಯ ಮಹಲ್ ರಸ್ತೆ ತಲುಪಿ ಅರಮನೆ ಮೈದಾನ ತಲುಪಲು ವ್ಯವಸ್ಥೆ ಮಾಡಲಾಗಿದೆ.

ಕನಕಪುರ ರಸ್ತೆಯಿಂದ ಬರುವ ವಾಹನಗಳು ಬನಶಂಕರಿ ದೇವಸ್ತಾನ ನಿಲ್ದಾಣ ಮೂಲಕ ಜಯನಗರ ನಾಲ್ಕನೇ ಬ್ಲಾಕ್, ಜೆ.ಸಿ. ರಸ್ತೆ, ಟೌನ್ ಹಾಲ್, ಕೆ.ಜಿ. ರಸ್ತೆ, ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಲ ತಿರುವು ಪಡೆದು ಬಿಡಿಎ ಮೇಲ್ಸೇತುವೆ ರಸ್ತೆ ಮಾರ್ಗವಾಗಿ ಸಂಚರಿಸಿ ಮೇಖ್ರಿ ಸರ್ಕಲ್ ಸರ್ವೀಸ್ ರಸ್ತೆ ಮೂಲಕ ಅರಮನೆ ಮೈದಾನ ತಲುಪುವುದು.

Amit Shah in Karnataka: Traffic Routes Diverted in Bengaluru as Amit Shah Program in Palace Grounds

ಬನ್ನೇರುಘಟ್ಟ ಮತ್ತು ಹೊಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ಮಡಿವಾಳ ಚೆಕ್ ಪೋಸ್ಟ್, ಡೈರಿ ವೃತ್ತ ಲಾಲ್ ಬಾಗ್ ಮುಖ್ಯ ದ್ವಾರ, ಪ್ಯಾಲೇಸ್ ರಸ್ತೆ, ಆರ್‌.ಪಿ. ರಸ್ತೆ ಮೂಲಕ ಬಿಡಿಎ ಮೇಲ್ಸೇತುವೆ ಮಾರ್ಗದಲ್ಲಿ ಅರಮನೆ ಮೈದಾನ ತಲುಪುವುದು.

ಹಳೇ ಮದ್ರಾಸು ರಸ್ತೆಯಿಂದ ಬರುವ ವಾಹನಗಳು ಹೆಣ್ಣೂರು ಜಂಕ್ಷನ್, ನಾಗವಾರ, ಹೆಬ್ಬಾಳ ಮೇಲ್ಸೇತವೆ ಮೂಲಕ. ಸರ್ಕಸ್ ಮೈದಾನದ ಆವರಣ ತಲುಪಲು ಸೂಚಿಸಲಾಗಿದೆ. ಬಳ್ಳಾರಿ ರಸ್ತೆಯಿಂದ ಬರುವ ವಾಹನಗಳಿಗೂ ಚಿಕ್ಕಜಾಲ, ಕೊಡಿಗೇಹಳ್ಳಿ, ಹೆಬ್ಬಾಳ ಮೇಲು ಸೇತುವೆ, ಜಯಮಹಲ್ ಸರ್ಕಸ್ ರಸ್ತೆ ಆವರಣ ತಲುಪಲು ಅವಕಾಶ ಮಾಡಿಕೊಡಲಾಗಿದೆ.

Amit Shah in Karnataka: Traffic Routes Diverted in Bengaluru as Amit Shah Program in Palace Grounds

ಪಾರ್ಕಿಂಗ್ ವ್ಯವಸ್ಥೆ: ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಆಗಮಿಸುವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಕಾರ್ ಮತ್ತು ದ್ವಿಚಕ್ರ ವಾಹನ: ದ್ವಿಚಕ್ರ ಮತ್ತು ಕಾರ್ ನಲ್ಲಿ ಬರುವರು ಜಯ ಮಹಲ್ ರಸ್ತೆ ಮೂಲಕ ಪ್ರವೇಶಿಸಿ ಮಾವಿನ ಕಾಯಿ ಮಂಡಿಯಲ್ಲಿ ವಾಃನ ನಿಲುಗಡೆ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಗಣ್ಯ ಮತ್ತು ಅತಿ ಗಣ್ಯರ ವಾಹನ: ಗಣ್ಯ ಮತ್ತು ಅತಿ ಗಣ್ಯ ವ್ಯಕ್ತಿಗಳ ವಾಹನಗಳು ಪ್ಯಾಲೇಸ್ ಮೈದಾನದ ಶಾರೂಖ್ ಖಾನ್ ಮೈದಾನದಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ.

Amit Shah Visit to Siddaganga Mutt : ಸಿದ್ದಗಂಗಾ ಮಠದಲ್ಲಿ ಅಮಿತ್‌ ಶಾ: ಅಪ್‌ಡೇಟ್ಸ್‌‌Amit Shah Visit to Siddaganga Mutt : ಸಿದ್ದಗಂಗಾ ಮಠದಲ್ಲಿ ಅಮಿತ್‌ ಶಾ: ಅಪ್‌ಡೇಟ್ಸ್‌‌

ಪಾರ್ಕಿಂಗ್ ನಿಷೇಧ: ಅರಮನೆ ಮೈದಾನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಇಂದು ಈ ಕೆಳಗಿನ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ. ರಮಣ ಮಹರ್ಷಿ ರಸ್ತೆ, ಸರ್. ಸಿವಿ. ರಾಮನ್ ರಸ್ತೆ, ಬಳ್ಳಾರಿ ರಸ್ತೆ, ಹೆಬ್ಬಾಳ ಮೇಲು ಸೇತುವೆ, ಮೇಖ್ರಿ ವೃತ್ತ, ಜಯಮಹಲ್ ರಸ್ತೆ, ತರಳಬಾಳು ರಸ್ತೆ, ಜಯಮಹಲ್ ರಸ್ತೆ, ಎಂ.ವಿ. ಜಯರಾಮನ್ ರಸ್ತೆ, ಪ್ಯಾಲೇಸ್ ರಸ್ತೆ, ಪ್ಯಾಲೇಸ್ ಕ್ರಾಸ್, ಟಿ. ಚೌಡಯ್ಯ ರಸ್ತೆ, ರೇಸ್ ಕೋರ್ಸ್, ಟೆಂಪಲ್ ಸ್ಟ್ರೀಟ್ ನಲ್ಲಿ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ.

ಪರ್ಯಾಯ ಮಾರ್ಗ: ಬೆಂಗಳೂರು ದಕ್ಷಿಣ ಮತ್ತು ಪಶ್ಚಿಮ ಭಾಗದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು ಬಸವೇಶ್ವರ ವೃತ್ತ, ಎಡ ತಿರುವು, ಚೌಡಯ್ಯ ರಸ್ತೆ, ವಿಂಡ್ಸರ್ ಮ್ಯಾನರ್ ರಸ್ತೆ, ಕಾವೇರಿ ಜಂಕ್ಷನ್ ಎಡ ತಿರುವು, ಭಾಷ್ಯಂ ವೃತ್ತ, ಜೀವ ರಾಜ್ ಆಳ್ವಾ ರಸ್ತೆ, ಸದಾಶಿವನಗರ ಪಿಎಸ್ ಜಂಕ್ಷನ್, ನ್ಯೂ ಬಿಇಎಲ್ ರಸ್ತೆ , ದೇವಸಂದ್ರ - ಹೆಬ್ಬಾಳ ರಸ್ತೆ ಮೂಲಕ ಸಾಗಲು ಅವಕಾಶ ಮಾಡಿಕೊಡಲಾಗಿದೆ.

Recommended Video

Petrol ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಧಮ್ಕಿ ಹಾಕಿದ Baba Ramdev | Oneindia Kannada

ಬೆಂಗಳೂರು ಪೂರ್ವ ಭಾಗದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಹನಗಳು ಎಂ.ಜಿ. ರಸ್ತೆ, ಥಾಮಸ್ ಕೆಫೆ, ವೀಲರ್ಸ್ ರಸ್ತೆ, ಬಾಣಸವಾಡಿ ಮುಖ್ಯ ರಸ್ತೆ, ಹೊರ ವರ್ತುಲ ರಸ್ತೆ, ಥಣಿಸಂದ್ರ ಮುಖ್ಯ ರಸ್ತೆ, ಹೆಗಡೆ ನಗರ, ಕಟ್ಟಿಗೆಹಳ್ಳಿ ಯಲ್ಲಿ ಎಡ ತಿರುವು ಪಡೆದು ಬಾಗಲೂರು ಕ್ರಾಸ್ ಮೂಲಕ ವಿಮಾನ ನಿಲ್ದಾಣಕ್ಕೆ ಸಾಗಬಹುದು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೂರ್ವ ವಿಭಾಗದ ಕಡೆ ಹೋಗುವ ವಾಹನಗಳೀಗೆ ಹೆಬ್ಬಾಳ ಮೇಲ್ಸೇತುವೆ ಕೆಳ ಭಾಗದಲ್ಲಿ ಎರಡ ತಿರುವು ಪಡೆದು ನಾಗವಾರ ಜಂಕ್ಷನ್, ಟ್ಯಾನರಿ ರಸ್ತೆ ಮೂಲಕ ಸಾಗಲು ಅವಕಾಶ ಮಾಡಿಕೊಡಲಾಗಿದೆ.

English summary
Amit Shah in Karnataka: Traffic Routes Diverted in Bengaluru as Amit Shah Program in Palace Grounds to avoid traffic congestion. Here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X