ಸುದ್ದಿ ವಾಹಿನಿಗಳ TRP ರೇಟಿಂಗ್‌ಗೆ ಬ್ರೇಕ್: ಕೇಂದ್ರ ಸರ್ಕಾರದಿಂದ ದಿಢೀರ್ ಆದೇಶ ಹೊರಬಿದ್ದಿದ್ದೇಕೆ?
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡಿದೆ. ಯುಎಸ್ ಮತ್ತು ಇಸ್ರೇಲ್-ಇರಾನ್ ಮಧ್ಯೆ ಸಂಘರ್ಷ ನಡೆಯುತ್ತಿರುವ ನಡುವೆ ಕೆಲವು ಸುದ್ದಿ ವಾಹಿನಿಗಳು ಅನಗತ್ಯ ಸಂವೇದನೆ ಮತ್ತು ಊಹಾತ್ಮಕ ವಿಷಯವನ್ನು ಪ್ರಸಾರ ಮಾಡುತ್ತಿರುವೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿರುವ ಭಾರತದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮುಂದಿನ 4 ವಾರಗಳ ಕಾಲ ಟಿವಿ ರೇಟಿಂಗ್‌ಗಳನ್ನು ಸ್ಥಗಿತಗೊಳಿಸಲು ಖಾಸಗಿ ಸಂಸ್ಥೆ ಬಾರ್ಕ್‌ಗೆ ನಿರ್ದೇಶಿಸಿದೆ.
ಮೂರು ದೇಶಗಳ ಮಧ್ಯೆ ಯುದ್ಧ ನಡೆಯುತ್ತಿರುವ ಸನ್ನಿವೇಶದಲ್ಲಿ ಹಲವೆಡೆ ಭಾರತೀಯರು ಸಿಲುಕಿಕೊಂಡಿದ್ದಾರೆ. ಈ ವೇಳೆ ಅನಗತ್ಯ ಸಂವೇದನಾತ್ಮಕ ಸುದ್ದಿಗಳನ್ನು ಪ್ರಕಟಿಸುವುದರಿಂದ ವಿಶೇಷವಾಗಿ ಯುದ್ಧ ಪೀಡಿತ ಪ್ರದೇಶಗಳಲ್ಲಿ ಸ್ನೇಹಿತರು ಮತ್ತು ಕುಟುಂಬವನ್ನು ಹೊಂದಿರುವವರು ಅಥವಾ ಪೀಡಿತ ಪ್ರದೇಶಗಳಲ್ಲಿ ವಾಸಿಸುವವರಲ್ಲಿ ಮತ್ತಷ್ಟು ಭಯ ಉಂಟು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅಂತಹ ಸುದ್ದಿಗಳ ಪ್ರಸಾರಕ್ಕೆ ನಿರ್ಬಂಧ ವಿಧಿಸಿದೆ. ನಾಲ್ಕು ವಾರಗಳ ಅವಧಿಗೆ ಅಥವಾ ಮುಂದಿನ ನಿರ್ದೇಶನಗಳವರೆಗೆ ಸುದ್ದಿ ಟಿವಿ ಚಾನೆಲ್‌ಗಳಿಗೆ ಟೆಲಿವಿಷನ್ ರೇಟಿಂಗ್ ಪಾಯಿಂಟ್‌ಗಳನ್ನು (ಟಿಆರ್‌ಪಿಗಳು) ವರದಿ ಮಾಡುವುದನ್ನು ತಕ್ಷಣವೇ ತಡೆ ಹಿಡಿಯಲು ಖಾಸಗಿ ಸಂಸ್ಥೆ ಬಾರ್ಕ್‌ಗೆ (M/s BARC) ನಿರ್ದೇಶನ ನೀಡಿದೆ.

ಕೇಂದ್ರ ಸರ್ಕಾರವು 16.01.2014 ರಂದು ಟೆಲಿವಿಷನ್ ರೇಟಿಂಗ್‌ಗಾಗಿ 'ಭಾರತದಲ್ಲಿ ಟೆಲಿವಿಷನ್ ರೇಟಿಂಗ್ ಏಜೆನ್ಸಿಗಳಿಗೆ ನೀತಿ ಮಾರ್ಗಸೂಚಿಗಳು' ಅನ್ನು ಬಿಡುಗಡೆ ಮಾಡಿತ್ತು. M/s ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಮೇಲೆ ತಿಳಿಸಿದ ನೀತಿ ಮಾರ್ಗಸೂಚಿಗಳ ಅಡಿಯಲ್ಲಿ ನೋಂದಾಯಿಸಲಾದ ಟೆಲಿವಿಷನ್ ರೇಟಿಂಗ್ ಏಜೆನ್ಸಿಯಾಗಿದೆ. ಈ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಕುಲ್ ಚೋಪ್ರಾ ಅವರಿಗೆ ಸಚಿವಾಲಯ ಮಹತ್ವದ ಸೂಚನೆ ನೀಡಲಾಗಿದೆ.
ಸಚಿವಾಲಯವು ಕಾಲಕಾಲಕ್ಕೆ ಹೊರಡಿಸುವ ಯಾವುದೇ ಆದೇಶಗಳು, ನಿಯಮಗಳು, ಮಾರ್ಗಸೂಚಿಗಳು, ನಿರ್ದೇಶನಗಳು ಇತ್ಯಾದಿಗಳನ್ನು ಪಾಲಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ದೇಶದ ಎಲ್ಲ ಟಿವಿ ಸುದ್ದಿ ಮಾಧ್ಯಮಗಳ ಟೆಲಿವಿಷನ್ ರೇಟಿಂಗ್ ಪಾಯಿಂಟ್‌ಗಳ (TRP ಗಳು)ವರದಿ ಮಾಡುವುದನ್ನು ಬಾರ್ಕ್ ಸಂಸ್ಥೆ ತಕ್ಷಣದಿಂದಲೇ ತಡೆ ಹಿಡಿಯಲಿದೆ.












Click it and Unblock the Notifications