ಯಾವುದೇ ಹೊಸ ಯೋಜನೆ ಕೈಗೆತ್ತಿಕೊಳ್ಳದಿರಲು ಬಿಬಿಎಂಪಿ ನಿರ್ಧಾರ

ಬೆಂಗಳೂರು, ಏಪ್ರಿಲ್ 6: ಯಾವುದೇ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳದಿರಲು ಬಿಬಿಎಂಪಿ ನಿರ್ಧರಿಸಿದೆ. ಈಗಾಗಲೇ ಕೈತುಂಬಾ ಯೋಜನೆಗಳಿವೆ, ಇವುಗಳನ್ನು ಮುಗಿಸಬೇಕಿದೆ ಹಾಗಾಗಿ ಯಾವುದೇ ಹೊಸ ಯೋಜನೆಗಳನ್ನು ತೆಗೆದುಕೊಳ್ಳದಿರಲು ನಿರ್ಧಾರ ಮಾಡಿದೆ.

ಬಿಬಿಎಂಪಿ ಕೈಯ್ಯಲ್ಲಿ ಸದ್ಯ ಹಲವು ಯೋಜನೆಗಳಿವೆ, ಇದರಲ್ಲಿ ರಸ್ತೆ ಕಾಮಗಾರಿಗಳೇ ಬಹುತೇಕ ಪ್ರಮಾಣದಲ್ಲಿವೆ, ಅಗೆದ ರಸ್ತೆಗಳ ಕಾಮಗಾರಿಯನ್ನು ಪೂರ್ಣಗೊಳಿಸದ ಹೊರತು, ಯಾವುದೇ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಳ್ಳದಿರಲು ಪಾಲಿಕೆ ನಿರ್ಧಾರ ಮಾಡಿದೆ.

ರಸ್ತೆಗಳನ್ನು ನವೀಕರಿಸಲು ಬಿಬಿಎಂಪಿ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಜೊತೆ ಪಾಲುದಾರಿಕೆ ಹೊಂದಿದೆ. ಇತರ ರಸ್ತೆ ಕಾಮಗಾರಿಗಳ ನಡುವೆ ರಾಷ್ಟ್ರೀಯ ಹೆದ್ದಾರಿ ದರ್ಜೆಯ ಅಧಿಕ ಸಾಮರ್ಥ್ಯದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಇದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್ (ಕೆಆರ್‌ಡಿಸಿಎಲ್) ನೊಂದಿಗೆ ಕೆಲಸ ಮಾಡುತ್ತಿದೆ.

Alreay Have Hands Full Of Projects, No New Projects For Now: BBMP

ಹಳೆಯ ಕೆಲಸಗಳನ್ನು ಪೂರ್ಣಗೊಳಿಸದೇ ಯಾವುದೇ ಹೊಸ ಕಾಮಗಾರಿ ತೆಗೆದುಕೊಳ್ಳುವುದಿಲ್ಲ, ಮೊದಲು ಉತ್ತಮ ದರ್ಜೆಯಲ್ಲಿ ನಿಗದಿತ ಸಮಯದಲ್ಲಿ ಮುಗಿಯುವ ಅವಶ್ಯಕತೆಯಿದೆ, ಹೀಗಾಗಿ ಮುಂದಿನ 10ರಿಂದ 20 ವರ್ಷ ಯಾವುದೇ ರಿಪೇರಿ ಕೆಲಸ ಕೈಗೊಳ್ಳುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಚ್ಚಿನ ರಸ್ತೆಗಳನ್ನು ಅಗೆದು ಹಾಕಲಾಗಿದೆ ಮತ್ತು ಏಕಮುಖ ಸಂಚಾರ ಮಾಡಲಾಗಿದೆ. ನಾಗರಿಕರು ಈಗಾಗಲೇ ದೂರು ನೀಡುತ್ತಿದ್ದು, ನಮ್ಮ ಮೇಲೆ ಒತ್ತಡವೂ ಹೆಚ್ಚುತ್ತಿದೆ.

ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ, ನಾವು ಯೋಜನೆಗಳನ್ನು ತೆಗೆದುಕೊಳ್ಳಲು ಬಯಸುವುದಿಲ್ಲ ಮತ್ತು ಲಾಕ್ ಡೌನ್ ಅಥವಾ ಕೆಲವು ನಿರ್ಬಂಧಗಳಿದ್ದರೆ, ಕಾರ್ಮಿಕ ಸಮಸ್ಯೆಗಳು ಉಂಟಾಗುತ್ತವೆ ಎಂದು ತಿಳಿಸಿದ್ದಾರೆ.

ಬಿಬಿಎಂಪಿ ನಗರದ ಹೆಚ್ಚಿನ ಭಾಗಗಳಲ್ಲಿ ವೈಟ್ ಟಾಪಿಂಗ್ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹೆಣಗಾಡುತ್ತಿದೆ. ಟೆಂಡರ್ ಶ್ಯೂರ್ ಯೋಜನೆಗಳಿಗೆ ರಾಜ್ಯ ಸರ್ಕಾರ ನಿಗದಿಪಡಿಸಿದ ಗಡುವನ್ನು ಪೂರೈಸುವ ಕೆಲಸವೂ ಇದೆ.

ಮುಖ್ಯಮಂತ್ರಿ ಘೋಷಿಸಿದ ಮಿಷನ್ -2022 ರ ಅಡಿಯಲ್ಲಿ ಪಟ್ಟಿ ಮಾಡಲಾದ ಯೋಜನೆಗಳನ್ನು ನಿಗದಿತ ಗಡುವಿನೊಳಗೆ ಕಾರ್ಯಗತಗೊಳಿಸುವುದು ಪಾಲಿಕೆಗೆ ದೊಡ್ಡ ಕಾರ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+