ಬೆಂಗಳೂರು: ರೇಡಿಯೋ ಜಾಕಿ ಆಗುವ ಕನಸು ಉಳ್ಳವರಿಗೆ ಸುವರ್ಣಾವಕಾಶ
ಬೆಂಗಳೂರು, ಫೆಬ್ರವರಿ 18: ರೇಡಿಯೋ ಜಾಕಿ ಆಗುವ ಕನಸು ಕಾಣುತ್ತಿದ್ದೀರಾ, ಟಿವಿ ಮತ್ತು ರೇಡಿಯೋ ಮಾಧ್ಯಮಗಳಲ್ಲಿ ಮಿಂಚುವ ಅಭಿಲಾಷೆ ಹೊಂದಿದ್ದೀರಾ, ಮಾಧ್ಯಮ ರಂಗದಲ್ಲಿ ಸಾಧಿಸುವ ಛಲ ಉಳ್ಳವರಿಗೆ ಇಲ್ಲೊಂದು ಸುವರ್ಣಾವಕಾಶ ತೆರೆದುಕೊಂಡಿದೆ.
ಬೆಂಗಳೂರಿನ ಆಲ್ಮಾ ಮೀಡಿಯಾ ಸ್ಕೂಲ್ ಮತ್ತು ಗೌರೀಶ್ ಅಕ್ಕಿ ಸ್ಟುಡಿಯೋ ಸಹಯೋಗದಲ್ಲಿ ಐದು ದಿನಗಳ ಆರ್ ಜೆ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ಫೆಬ್ರವರಿ 23ರಿಂದ ಫೆಬ್ರವರಿ 27ರವರೆಗೂ ಈ ಕಾರ್ಯಾಗಾರ ನಡೆಯಲಿದೆ.
ಪ್ರಸಿದ್ಧ ರೇಡಿಯೋ ಜಾಕಿಗಳಾದ ವಿಕ್ಕಿ, ಪ್ರದೀಪ್, ಅವನೀಧರ್ ಸೇರಿದಂತೆ ಪ್ರಮುಖ ರೇಡಿಯೋ ಜಾಕಿಗಳು ಹಾಗೂ ರೇಡಿಯೋ ತಜ್ಞರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ರೇಡಿಯೋ ಜಾರಿ ಆಗುವ ನಿಮ್ಮ ಕನಸಿನ ಸಸಿಗೆ ಪರಿಣಿತರು ಮತ್ತು ರೇಡಿಯೋ ತಜ್ಞರು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.

ಎಲ್ಲಿ ನಡೆಯಲಿದೆ ಆರ್ ಜೆ ಕಾರ್ಯಾಗಾರ?:
ಬೆಂಗಳೂರು ಜಯ ನಗರದ 33ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆಯ 7ನೇ ಹಂತದಲ್ಲಿ ಇರುವ ಆಲ್ಮಾ ಮೀಡಿಯಾ ಸ್ಕೂಲ್, ಎಎಂಸಿ ಸಿಟಿ ಕಾಲೇಜು ಕ್ಯಾಂಪಸ್ ನಲ್ಲಿ ಐದು ದಿನಗಳ ಆರ್ ಜೆ ಕಾರ್ಯಾಗಾರ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಆರಂಭವಾಗಲಿರುವ ಕಾರ್ಯಾಗಾರವು ಸಂಜೆ 5.30ರವರೆಗೂ ನಡೆಯಲಿದೆ.












Click it and Unblock the Notifications