ಶಾಸಕ ಗೂಳಿಹಟ್ಟಿ ಶೇಖರ್ ವಿರುದ್ಧ ಕೊಲೆ ಬೆದರಿಕೆ ಆರೋಪ

ಬೆಂಗಳೂರು, ಜುಲೈ 23: ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರ ವಿರುದ್ಧ ಕೊಲೆ ಬೆದರಿಕೆಯ ಆರೋಪ ಮಾಡಲಾಗಿದೆ.

ಹೊಸಕೆರೆಯ ನಿವಾಸಿ ಮಣಿ ಎನ್ನುವರು ಈ ಆರೋಪ ಮಾಡಿದ್ದರು, ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಗೂಳಿಹಟ್ಟಿ ಶೇಖರ್ ಅವರಿಗೆ ಕೊಟ್ಟಿರುವ ಸಾಲವನ್ನು ತಿರುಗಿ ಕೇಳಿದ್ದಕ್ಕೆ ತಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

'ಗೂಳಿಹಟ್ಟಿ ಶೇಖರ್ ಅವರಿಗೆ ಮೊದಲು 3 ಲಕ್ಷ ಹಣ, ಆ ನಂತರ 5 ಲಕ್ಷ ಹಣವನ್ನು ಸಾಲವಾಗಿ ನೀಡಿದ್ದೆ, ಆದರೆ ಅದನ್ನು ವಾಪಾಸ್ ಕೇಳಲು ಹೋದಾಗ ಅವರು ಹಾಗೂ ಅವರ ಕುಟುಂಬದವರು ನನಗೆ ಪ್ರಾಣ ಬೆದರಿಕೆ ಒಡ್ಡಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.

Alleged that MLA Goolihatti Shekhar gave threatens to a Bengaluru resident

ಶೇಖರ್ ಅವರು ಎರಡು ಚೆಕ್‌ಗಳನ್ನು ನೀಡಿದ್ದರು, ಅದನ್ನು ಬ್ಯಾಂಕ್‌ಗೆ ಹಾಕಿದಾಗ ಎರಡೂ ಚೆಕ್ ಬೌನ್ಸ್ ಆಗಿವೆ. ಚೆಕ್ ಬೌನ್ಸ್ ಕೇಸು ಹಾಕಲಾಗಿದ್ದು, ಶಾಸಕರಿಗೆ ನೋಟಿಸ್ ಸಹ ಕಳುಹಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

Alleged that MLA Goolihatti Shekhar gave threatens to a Bengaluru resident

ಹೊಸದುರ್ಗ ಕ್ಷೇತ್ರದಿಂದ ಗೆದ್ದಿರುವ ಗೂಳಿಹಟ್ಟಿ ಶೇಖರ್ ಅವರು, ಬಿಜೆಪಿ ಅಧಿಕಾರಾವಧಿಯಲ್ಲಿ ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿ ಸದನದಲ್ಲಿ ಅಂಗಿ ಹರಿದುಕೊಂಡು ಭಾರೀ ಸುದ್ದಿ ಮಾಡಿದ್ದರು. ಅಲ್ಲದೆ ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಶಾಸರಿಗೆ ನೀಡಿದ್ದ ಔತಣಕೂಟದಲ್ಲಿ ಕಾಣಿಸಿಕೊಂಡದ್ದು ಸಹ ಸುದ್ದಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+