ಏರ್ ಪೆಗಾಸಸ್‌ನಿಂದ ಬೆಂಗಳೂರು-ಮಧುರೈ ವಿಮಾನ ಸೇವೆ
ಬೆಂಗಳೂರು, ಜೂ. 17 : ಏರ್ ಪೆಗಾಸಸ್ ಬೆಂಗಳೂರು-ಮಧುರೈ ನಡುವೆ ವಿಮಾನ ಸಂಚಾರ ಆರಂಭಿಸಲಿದೆ. 1,234 ರೂ.ಗಳಲ್ಲಿ ಮಧುರೈ ತಲುಪಬಹುದಾಗಿದ್ದು, ಬುಕ್ಕಿಂಗ್ ಆರಂಭಗೊಂಡಿದೆ. ಜೂನ್ 26ರಿಂದ ವಿಮಾನ ಹಾರಾಟ ಆರಂಭವಾಗಲಿದೆ.
2015ರ ಏಪ್ರಿಲ್‌ನಲ್ಲಿ ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ತಿರುವನಂತಪುರಂ ನಡುವೆ ವಿಮಾನ ಸೇವೆ ಆರಂಭಿಸಿದ್ದ ಏರ್ ಪೆಗಾಸಸ್ ಈಗ ಬೆಂಗಳೂರು-ಮಧುರೈ ವಿಮಾನ ಸೇವೆಯನ್ನು ಆರಂಭಿಸಲಿದೆ. ಸೋಮವಾರ, ಬುಧವಾರ ಮತ್ತು ಶುಕ್ರವಾರ ಈ ಸೇವೆ ಲಭ್ಯವಿರಲಿದೆ. [ಹುಬ್ಬಳ್ಳಿಗೆ ವಿಮಾನ ಸೇವೆ ಆರಂಭಿಸಿದ ಏರ್ ಪೆಗಾಸಸ್]

ವೇಳಾಪಟ್ಟಿ : ಬೆಂಗಳೂರು-ಮಧುರೈ ನಡುವಿನ ವಿಮಾನ ಬೆಂಗಳೂರಿನಿಂದ ಬೆಳಗ್ಗೆ 10.40ಕ್ಕೆ ಹೊರಡಲಿದ್ದು 12 ಗಂಟೆಗೆ ಮಧುರೈ ತಲುಪಲಿದೆ. ಮಧುರೈನಿಂದ 12.30ಕ್ಕೆ ಹೊರಟು, ಮಧ್ಯಾಹ್ನ 1.50ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದೆ. [ದೆಹಲಿ, ಮುಂಬೈಗೆ 'ವಿಸ್ತಾರ' ವಿಮಾನ ಸೇವೆ ಆರಂಭ]
ಏರ್ ಪೆಗಾಸಸ್ ವ್ಯವಸ್ಥಾಪಕ ನಿರ್ದೇಶಕ ಶೈಸನ್ ಥಾಮಸ್ ಈ ಕುರಿತು ಮಾತನಾಡಿದ್ದು, ಜೂನ್ 26ರಿಂದ ಬೆಂಗಳೂರು-ಮಧುರೈ ಸಂಚಾರ ಆರಂಭವಾಗಲಿದೆ. ಮುಂಗಡ ಬುಕ್ಕಿಂಗ್ ಅನ್ನು ಆರಂಭಿಸಲಾಗಿದೆ. 1,234 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ. [ಟಿಕೆಟ್ ಬುಕ್ ಮಾಡಲು ವಿಳಾಸ]
ಏಪ್ರಿಲ್‌ನಲ್ಲಿ ಏರ್ ಪೆಗಾಸಸ್ ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ತಿರುವನಂತಪುರಂ ನಡುವಿನ ಸಂಚಾರಕ್ಕೆ ಚಾಲನೆ ನೀಡಿತ್ತು. ಮಂದಿನ ದಿನಗಳಲ್ಲಿ ಬೆಳಗಾವಿ, ರಾಜಮಂಡ್ರಿ, ಚೆನ್ನೈ, ಪುದುಚೇರಿ, ಮಧುರೈ ನಗರಗಳಿಗೆ ಸೇವೆಯನ್ನು ವಿಸ್ತರಿಸಲಾಗುತ್ತದೆ ಎಂದು ತಿಳಿಸಿತ್ತು.












Click it and Unblock the Notifications