ಬೆಂಗಳೂರು; ಕ್ವಾರಂಟೈನ್‌ನಲ್ಲಿದ್ದ 59 ಜನರಿಗೆ ಕೊರೊನಾ ಸೋಂಕು

ಬೆಂಗಳೂರು, ಏಪ್ರಿಲ್ 07 : ಬೆಂಗಳೂರು ನಗರದಲ್ಲಿ ಕ್ವಾರಂಟೈನ್‌ನಲ್ಲಿದ್ದ 59 ಜನರಿಗೆ ಮಾತ್ರ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ವಿದೇಶದಿಂದ ಬೆಂಗಳೂರು ನಗರಕ್ಕೆ ಆಗಮಿಸಿದವರಿಗೆ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಸೂಚನೆ ನೀಡಲಾಗಿತ್ತು.

Recommended Video

      RCB ಸ್ಪಿನ್ನರ್ ಚಾಹಲ್ ಈಗ ಮನೆಯಲ್ಲಿ ಏನು ಮಾಡುತ್ತಿದ್ದಾರೆ ? | Oneindia Kannada

      ಹೌದು, ಬೆಂಗಳೂರು ನಗರಕ್ಕೆ ಮಾರ್ಚ್ 24 ರಿಂದ ಏಪ್ರಿಲ್ 6ರ ತನಕ 14,910 ಜನರು ಆಗಮಿಸಿದ್ದರು. ಎಲ್ಲರಿಗೂ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರಲು ಸೂಚನೆ ನೀಡಲಾಗಿತ್ತು. ಇವರಲ್ಲಿ 59 ಜನರಿಗೆ ಮಾತ್ರ ಸೋಂಕು ತಗುಲಿದೆ ಎಂಬ ವರದಿ ಈಗ ಸಿಕ್ಕಿದೆ.

      ಕರ್ನಾಟಕದಲ್ಲಿಯೇ ಬೆಂಗಳೂರು ನಗರದಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಇವರೆಲ್ಲರೂ ಬೇರೆ ದೇಶಗಳಿಂದ ನಗರಕ್ಕೆ ಬಂದವರು. ನಗರದಲ್ಲಿ 2ನೇ ಹಂತಕ್ಕೆ ಸೋಂಕು ಹರಡದಂತೆ ತಡೆಯುವ ಮಹತ್ವದ ಜವಾಬ್ದಾರಿ ಜನರು, ಸರ್ಕಾರದ ಮೇಲಿದೆ.

      After Quarantine 59 Tested Positive for COVID 19

      ಮಾರ್ಚ್ 22ರಂದು ಭಾರತ ಅಂತರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿತು. ಅಂದು ಸುಮಾರು 145 ಜನರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಹೀಗೆ ಆಗಮಿಸಿದ ಎಲ್ಲರ ಕ್ವಾರಂಟೈನ್ ಅವಧಿ ಏಪ್ರಿಲ್ 6ಕ್ಕೆ ಅಂತ್ಯಗೊಂಡಿದೆ.

      ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೀಡುವ ಮಾಹಿತಿಯಂತೆ ಮಾರ್ಚ್ 8 ರಿಂದ 23ರ ತನಕ ನಗರಕ್ಕೆ ಆಗಮಿಸಿದ್ದ ಎಲ್ಲರಿಗೂ ಕ್ವಾರಂಟೈನ್‌ಗೆ ಸೂಚನೆ ನೀಡಲಾಗಿತ್ತು. ಇವರಲ್ಲಿ 59 ಜನರಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದ್ದು, ನಗರದ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

      59 ಜನರು ಅಮೆರಿಕ, ಬ್ರಿಟನ್, ದುಬೈ, ಸ್ಪೇನ್ ಮುಂತಾದ ದೇಶಗಳಿಂದ ಬಂದವರು. ಕೆಲಸ ಮತ್ತು ವಿದ್ಯಾಭ್ಯಾಸಕ್ಕಾಗಿ ಎಲ್ಲರೂ ವಿದೇಶದಲ್ಲಿದ್ದರು. ಯಾವುದೇ ವಿದೇಶ ಪ್ರವಾಸ ಮಾಡದಿದ್ದರೂ ನಗರದಲ್ಲಿ 10 ಜನರಿಗೆ ಸೋಂಕು ತಗುಲಿದೆ. ಸೋಂಕು ಇರುವ ವ್ಯಕ್ತಿಗಳ ಸಂಪರ್ಕಕ್ಕೆ ಇವರು ಬಂದಿದ್ದರು.

      "ನಾವು ಸಂಭ್ರಮ ಪಡುವ ಸಮಯ ಇದಲ್ಲ. ರೋಗ ಸಮುದಾಯದಲ್ಲಿ ಹಬ್ಬದಂತೆ ತಡೆಯಬೇಕಿದೆ. ಹೋಂ ಕ್ವಾರಂಟೈನ್ ಪೂರ್ಣಗೊಳಿಸಿದವರಿಗೆ ಮುಂದಿನ ಕೆಲವು ಪರೀಕ್ಷೆಗಳು ಆಗುವ ತನಕ ಸ್ವಯಂ ಐಸೋಲೇಷನ್‌ನಲ್ಲಿ ಇರಿ ಎಂದು ಸೂಚಿಸಿದ್ದೇವೆ" ಎಂದು ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಹೇಳಿದ್ದಾರೆ.

      ಬೆಂಗಳೂರು ನಗರದಲ್ಲಿ ಮಾರ್ಚ್ 8ರಂದು ಮೊದಲ ಕೊರೊನಾ ಪ್ರಕರಣ ದಾಖಲಾಗಿತ್ತು. ಮಾರ್ಚ್ 24ರಂದು ಹೆಚ್ಚಿನ ಅಂದರೆ 8 ಜನರಿಗೆ ಕೊರೊನಾ ಸೋಂಕು ತಗುಲಿದ ವರದಿ ಬಂದಿತ್ತು. 59 ಪ್ರಕರಣಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 15 ಜನರು ಸೇರಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+