Bengaluru Rent: ಬೆಂಗಳೂರಲ್ಲಿ ಕೈಗೆಟುಕುವ ದರಕ್ಕೆ ಬಾಡಿಗೆ ಅಪಾರ್ಟ್‌ಮೆಂಟ್‌ ಸಿಗುವ ಏರಿಯಾಗಳಿವು

ಐಟಿ ಸಿಟಿ ಬೆಂಗಳೂರಿನಲ್ಲಿ ಬಾಡಿಗೆ ದರ ಗಗನಕ್ಕೇರಿದೆ. ಪ್ರತಿನಿತ್ಯವೂ ಬದುಕು ಕಟ್ಟಿಕೊಳ್ಳಲು ಬೆಂಗಳೂರಿನತ್ತ ಬರುತ್ತಿರುವ ಜನರಿಗೆ ಇಲ್ಲಿ ಒಂದೊಳ್ಳೆ ಬಾಡಿಗೆ ಮನೆ ಪಡೆಯುವುದು, ಅದರಲ್ಲೂ ಕೈಗೆಟುಕುವ ದರ ಬಾಡಿಗೆ ಮನೆ ಹುಡುಕುವುದು ದೊಡ್ಡ ಸವಾಲಿನ ಕೆಲಸ. ಆದರೆ, ನಗರದ ದುಬಾರಿ ಜೀವನದ ನಡುವೆಯೂ ಕೈಗೆಟುಕುವ ದರದಲ್ಲಿ ಬಾಡಿಗೆಗೆ ಅಪಾರ್ಟ್‌ಮೆಂಟ್‌ಗಳು ಸಿಗುತ್ತಿವೆ. ಬೆಂಗಳೂರಿನಲ್ಲಿ ಇಂತಹ ಕೆಲವು ಏರಿಯಾಗಳನ್ನು ಪಟ್ಟಿ ಮಾಡಲಾಗಿದೆ.

ಈಗೆಲ್ಲ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಲು ಒದ್ದಾಡಬೇಕು. ಮನೆ ಸಿಕ್ಕರೂ ಒಳ್ಳೆಯ ಸೌಕರ್ಯಗಳು ಅಷ್ಟಕ್ಕಷ್ಟೇ. ಹಾಗಾಗಿ ಸ್ವಲ್ಪ ಹಣ ಬಾಡಿಗೆ ಜಾಸ್ತಿಯಾದರೂ ಪರವಾಗಿಲ್ಲ, ಮನೆ ಚೆನ್ನಾಗಿರಬೇಕು ಎನ್ನುತ್ತಾ ಅಪಾರ್ಟ್‌ಮೆಂಟ್‌ಗಳಿಗೆ ಜನ ಶಿಫ್ಟ್‌ ಆಗುತ್ತಿದ್ದಾರೆ. ಮೊದಲು ಅಪಾರ್ಟ್‌ಮೆಂಟ್‌ಗಳಲ್ಲಿ ದೊಡ್ಡ ಫ್ಲ್ಯಾಟ್‌ಗಳು ಇರುತ್ತಿದ್ದವು. ಈಗೀಗ ಅಪಾರ್ಟ್‌ಮೆಂಟ್‌ನಲ್ಲೂ ಬೆಡ್‌ರೂಮ್‌, ಹಾಲ್‌, ಕಿಚನ್‌ ಇರುವ ಸಣ್ಣ ಮನೆಗಳು ಕೂಡ ಲಭ್ಯ ಇವೆ. ಹಾಗಾಗಿ ಅಪಾರ್ಟ್‌ಮೆಂಟ್‌ಗಳಿಗೆ ಜನ ಗಂಟುಮೂಟೆ ಕಟ್ಟುತ್ತಿದ್ದಾರೆ.

Affordable Apartments For Rent In These Areas Of Bengaluru

ಬಾಡಿಗೆ ಮನೆಗಳಿಗೆ ಡಿಮ್ಯಾಂಡ್‌ ಹೆಚ್ಚಿದ ಕಅರಣ ಬೆಂಗಳೂರಿನ ಭೂ ಮಾಲೀಕರು ಕೂಡ ದರವನ್ನು ಶೇ 30ರಿಂದ ಶೇ 40ರವರೆಗೆ ಏರಿಸಿದ್ದಾರೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಕಳೆದ ವರ್ಷಕ್ಕಿಂತ ಶೇ 50ರಷ್ಟು ಬಾಡಿಗೆ ಹೆಚ್ಚಳ ಕಂಡಿದೆ. ಆದರೂ ಬೆಂಗಳೂರಿನ ಕೆಲವು ಪ್ರದೇಶದಲ್ಲಿ ಕೈಗೆಟುಕುವ ದರದಲ್ಲಿ ಬಾಡಿಗೆಗೆ ಅಪಾರ್ಟ್‌ಮೆಂಟ್‌ಗಳು ಸಿಗುತ್ತಿವೆ. ಇಂತಹ ಕೆಲ ಏರಿಯಾಗಳನ್ನು ಪಟ್ಟಿ ಮಾಡಲಾಗಿದ್ದು, ಬೆಂಗಳೂರಿನ ಟಾಪ್‌ ಐದು ಸ್ಥಳಗಳು ಹೀಗಿವೆ.

ಬೆಂಗಳೂರು ದಕ್ಷಿಣ: ಬೆಂಗಳೂರು ದಕ್ಷಿಣ ಭಾಗವು ಇತ್ತೀಚೆಗೆ ಹೆಚ್ಚು ಅಭಿವೃದ್ಧಿ ಹೊಂದಿರುವ ಪ್ರದೇಶವಾಗಿದೆ. ಈ ಭಾಗದ ಜೆಪಿ ನಗರ ಮತ್ತು ಕನಕಪುರ ರಸ್ತೆ ಏರಿಯಾಗಳಲ್ಲಿ ಬಾಡಿಗೆ ಮನೆಗಳು ಎಲ್ಲೆಂದರಲ್ಲಿ ತಲೆಎತ್ತಿವೆ. ಜೆಪಿ ನಗರದ ಹೊರವಲಯದಲ್ಲಿ 2 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳ ಮಾಸಿಕ ಬಾಡಿಗೆ 25,000 ರೂಪಾಯಿಗಿಂತ ಕಡಿಮೆ ಇದೆ. 3 ಬಿಎಚ್‌ಕೆ ಮನೆಗಳು 30,000-35,000 ರೂಪಾಯಿ ಆಸುಪಾಸಿನಲ್ಲಿವೆ ಎನ್ನಲಾಗಿದೆ.

Affordable Apartments For Rent In These Areas Of Bengaluru

ಬೆಂಗಳೂರು ಕೇಂದ್ರ: ಸೆಂಟ್ರಲ್‌ ಬಿಸಿನೆಸ್‌ ಡಿಸ್ಟ್ರಿಕ್ಟ್‌ (ಸಿಬಿಡಿ) ಎಂದು ಕರೆಯಲ್ಪಡುವ ಬೆಂಗಳೂರು ಕೇಂದ್ರ ಭಾಗದಲ್ಲೂ ಬಾಡಿಗೆ ದರ ಕೈಗೆಟುಕುವಂತಿದೆ. ಇಲ್ಲಿನ ಫ್ರೇಜರ್ ಟೌನ್, ಬಾಣಸವಾಡಿ, ಲಿಂಗರಾಜಪುರ, ಕಾಕ್ಸ್ ಟೌನ್ ಪ್ರದೇಶಗಳಲ್ಲಿ 2 ಬಿಎಚ್‌ಕೆ ಅಪಾರ್ಟ್‌ಮೆಂಟ್‌ ಸಾಮಾನ್ಯವಾಗಿ ತಿಂಗಳಿಗೆ 20,000ರಿಂದ 35,000 ರೂಪಾಯಿವರೆಗೆ ಇದೆ ಎಂದು ವರದಿಯಾಗಿದೆ.

ಬೆಂಗಳೂರು ಉತ್ತರ: ಉತ್ತರ ಬೆಂಗಳೂರು ಪ್ರದೇಶವು ಇದೀಗ ತುಂಬಾ ಅಭಿವೃದ್ಧಿಯಲ್ಲಿ ಸಾಗುತ್ತಿರುವ ಏರಿಯಾಗಳಲ್ಲಿ ಒಂದಾಗಿದೆ. ಹಾಗಾಗಿ ಬೆಂಗಳೂರಿನ ಜನ ಹೆಚ್ಚಾಗಿ ಇಲ್ಲಿ ಬಾಡಿಗೆಗೆ ಮನೆ ಪಡೆಯುತ್ತಿದ್ದಾರೆ. ಇಲ್ಲಿನ ಕಮ್ಮನಹಳ್ಳಿ, ಹೆಣ್ಣೂರು, ಕೊತ್ತನೂರು, ಮಾನ್ಯತಾ ಟೆಕ್ ಪಾರ್ಕ್‌ನ ಸುತ್ತಮುತ್ತಲಿನ ಪ್ರದೇಶಗಳು, ಜಕ್ಕೂರು ಭಾಗದಲ್ಲಿ 2 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳು 25,000ರಿಂದ 30,000 ರೂಪಾಯಿಗೆ ಬಾಡಿಗೆಗೆ ಸಿಗುತ್ತಿವೆ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 25,000 ರೂ.ಗೆ ಬಾಡಿಗೆ ಅಪಾರ್ಟ್‌ಮೆಂಟ್‌ಗಳು ಸಿಗುತ್ತಿವೆ.

ಪೂರ್ವ ಬೆಂಗಳೂರಿನ ಕೆ.ಆರ್.ಪುರ, ವೈಟ್‌ಫೀಲ್ಡ್‌, ಬೂದಿಗೆರೆ ಕ್ರಾಸ್, ವರ್ತೂರು ಸೇರಿದಂತೆ ಪೂರ್ವದ ಐಟಿ ಕಾರಿಡಾರ್‌ ಸಮೀಪವಿರುವ ಏರಿಯಾಗಳಲ್ಲಿ 2 ಬಿಎಚ್‌ಕೆ ಅಪಾರ್ಟ್‌ಮೆಂಟ್‌ ಬಾಡಿಗೆ 20,000-25,000 ರೂಪಾಯಿಯೊಳಗೆ ಸಿಗುತ್ತದೆ ಎಂದು ವರದಿಯಾಗಿದೆ. ಇತ್ತ ಯಶವಂತಪುರ, ರಾಜರಾಜೇಶ್ವರಿ ನಗರ ಮತ್ತು ಮೈಸೂರು ರಸ್ತೆಯಲ್ಲೂ ಕೈಗೆಟುಕುವ ದರಕ್ಕೆ ಬಾಡಿಗೆ ಮನೆಗಳು ಲಭ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+