Aero India 2025: ಬೆಂಗಳೂರು ಏರೋ ಇಂಡಿಯಾ; ಏರ್ ಶೋ ಬಿಗ್ ಅಪ್ಡೇಟ್ಸ್ ಇಲ್ಲಿದೆ
ಬೆಂಗಳೂರು ಏರ್‌ಶೋ 2025ಕ್ಕೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಸಿಕ್ಕಿದೆ. ಬೆಂಗಳೂರಿನ ಯಲಹಂಕದ ಏರ್ ಫೋರ್ಸ್ ಸ್ಟೇಷನ್ ಪ್ರದೇಶದಲ್ಲಿ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನವಾಗಿರುವ ಏರೋ ಇಂಡಿಯಾ ಪ್ರದರ್ಶನವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ರಕ್ಷಣಾ ಸಚಿಲಾಯವು ಮಹತ್ವದ ಅಪ್ಡೇಟ್ಸ್ ಕೊಟ್ಟಿದೆ. ಬೆಂಗಳೂರಿನಲ್ಲಿ ಈ ಏರ್ ಶೋ ಇಲ್ಲಿಯವರೆಗೆ 14 ಆವೃತ್ತಿಗಳನ್ನು ಪೂರೈಸಿದ್ದು, ಈ ಬಾರಿ 15 ಆವೃತ್ತಿ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯವು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.
ಏರೋ ಇಂಡಿಯಾ ಮುಂದಿನ ಶೋಗಾಗಿ ದಿನಗಣನೆ ಪ್ರಾರಂಭವಾಗಿದೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಗುಡ್‌ನ್ಯೂಸ್ ಸಿಕ್ಕಿದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಏರೋ ಇಂಡಿಯಾ ಸಾಕಷ್ಟು ಮನ್ನಣೆ ಗಳಿಸಿದೆ. ಒಂದು ಬಾರಿ ಈ ಏರೋ ಶೋನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಅದು ಸಹ ಪಾರ್ಕಿಂಗ್ ಪ್ರದೇಶದಲ್ಲಿ ಆದಾದನ ನಂತರ ಏರೋ ಶೋನಲ್ಲಿ ಸಾಕಷ್ಟು ಜಾಗ್ರತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಅಗ್ನಿ ಅವಘಡವಲ್ಲದೆ ಏರೋ ದುರಂತವೂ ಒಮ್ಮೆ ಸಂಭವಿಸಿತ್ತು. ಅದಾದ ನಂತರ ಸಾಕಷ್ಟು ಎಚ್ಚರಿಕೆಯನ್ನು ವಹಿಸಲಾಗುತ್ತಿದೆ. ಇದೀಗ ಏರೋ ಇಂಡಿಯಾದ ಬಹು ನಿರೀಕ್ಷಿತ ಬೆಂಗಳೂರು ಏರೋ ಶೋ 15ನೇ ಆವೃತ್ತಿಗೆ ದಿನಾಂಕ ನಿಗದಿ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ರಕ್ಷಣಾ ಸಚಿವಾಲಯದಿಂದ ಬಿಗ್ ಅಪ್ಡೇಟ್ಸ್ ಕೊಟ್ಟಿದೆ.

ಏರೋ ಇಂಡಿಯಾ ಶೋವನ್ನು ಭಾರತೀಯ ರಕ್ಷಣಾ ಇಲಾಖೆ, ಭಾರತೀಯ ವಾಯು ಸೇನೆ, ಡಿ.ಆರ್.ಡಿ.ಒ, ಎಚ್.ಎ.ಎಲ್ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯಗಳು ಸೇರಿ ಜಂಟಿಯಾಗಿ ಆಯೋಜಿಸುತ್ತಿವೆ. ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ದೇಶ- ವಿದೇಶಗಳಿಂದ ಗಣ್ಯರು, ತಜ್ಞರು ಹಾಗೂ ವೈಮಾನಿಕ ಪರಿಣಿತರು ಭಾಗವಹಿಸುತ್ತಾರೆ. ಸಾರ್ವಜನಿಕರಿಗೂ ಪ್ರವೇಶ ಇರುತ್ತದೆ. ಕಳೆದ ಬಾರಿ ನಡೆದ ಏರೋಶೋನಲ್ಲಿ ಲಕ್ಷಾಂತರ ಜನ ಈ ಶೋಗೆ ಬಂದಿದ್ದರು. ಈ ಬಾರಿಯೂ ಲಕ್ಷಾಂತರ ಜನ ಆಗಮಿಸುವ ನಿರೀಕ್ಷೆ ಇದೆ.
ಬೆಂಗಳೂರು ಏರೋ ಇಂಡಿಯಾ 15ನೇ ಆವೃತ್ತಿ ಯಾವಾಗ ?
ಬೆಂಗಳೂರಿನ ಅತೀ ನಿರೀಕ್ಷಿತ ಏರೋ ಇಂಡಿಯಾ 15ನೇ ಆವೃತ್ತಿಯ ದಿನಾಂಕ ನಿಗದಿಯಾಗಿದ್ದು, 2025ರ ಫೆಬ್ರವರಿಯಲ್ಲಿ ಶೋ ನಡೆಯಲಿದೆ. ಯಲಹಂಕದ ಏರ್ ಫೋರ್ಸ್ ಸ್ಟೇಷನ್ ಪ್ರದೇಶದಲ್ಲಿ 2025ರ ಫೆ. 10ನೇ ತಾರೀಖಿನಿಂದ 14ರವರೆಗೆ ಏಷ್ಯಾದಲ್ಲೇ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಎಂದು ಖ್ಯಾತಿ ಗಳಿಸಿರುವ ಏರೋ ಇಂಡಿಯಾ ಪ್ರದರ್ಶನ ನಡೆಯಲಿದೆ. ಈ ಬಾರಿಯ ಏರೋ ಶೋ ಸಹ ಹಲವು ವಿಶೇಷತೆಗಳನ್ನು ಒಳಗೊಂಡಿರಲಿದೆ.

ಏರೋ ಇಂಡಿಯಾದ ವಿಶೇಷತೆಗಳೇನು: ಬೆಂಗಳೂರಿನಲ್ಲಿ ನಡೆಯುವ ಏರೋಶೋ ತನ್ನದೇ ಖ್ಯಾತಿಯನ್ನು ಗಳಿಸಿದೆ. ಈ ಶೋನಲ್ಲಿ
ಸಣ್ಣ ವಿಮಾನಗಳಿಂದ ಯುದ್ಧ ವಿಮಾನಗಳ ವರೆಗೆ ವಿವಿಧ ಮಾದರಿಯ ವಿಮಾನಗಳನ್ನು ಪ್ರದರ್ಶನ ಮಾಡಲಾಗುತ್ತದೆ. ದೊಡ್ಡ ಕ್ಷಿಪಣಿ, ಶಸ್ತ್ರಾಸ್ತ್ರಗಳು, ರಾಡಾರ್ ವ್ಯವಸ್ಥೆ ಸೇರಿದಂತೆ ಪ್ರದರ್ಶನವಾಗುತ್ತದೆ. ಹೆಲಿಕಾಪ್ಟರ್ ಹಾಗೂ ನಾಗರೀಕ ವಿಮಾನ, ರಕ್ಷಣಾ ವಲಯ ಮತ್ತು ನಾಗರೀಕ ವಿಮಾನಯಾನಕ್ಕೆ ಸಂಬಂಧಿತ ಮಾಹಿತಿ ತಂತ್ರಜ್ಞಾನ, ಉತ್ಪನ್ನಗಳು, ಬಿಡಿ ಭಾಗಗಳು ಸೇರಿದಂತೆ ಹಲವು ಉತ್ಪನ್ನಗಳು ಇದರಲ್ಲಿ ಪ್ರದರ್ಶನ ಮಾಡಲಾಗುತ್ತದೆ.












Click it and Unblock the Notifications