ಏರೋ ಇಂಡಿಯಾ ಆಗಸದಲ್ಲಿ ಸರ್ಜಿಕಲ್ ಸ್ಟ್ರೈಕ್
ಬೆಂಗಳೂರು, ಫೆ.22: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಧ್ರುವ ಹಾಗೂ ರುದ್ರ ಹೆಲಿಕಾಪ್ಟರ್‌ಗಳು ಸರ್ಜಿಕಲ್ ಸ್ಟ್ರೈಕ್ ಮಾದರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದವು.
ಲೆಫ್ಟಿನೆಂಟ್ ಕರ್ನಲ್ ವಿಕಾಸ್‍ಸಿಂಗ್ ನೇತೃತ್ವದ ಎಚ್‍ಎಎಲ್ ನಿರ್ಮಿತ ರುದ್ರ ಮತ್ತು ಧ್ರುವ ಹೆಲಿಕಾಪ್ಟರ್‍ಗಳು ಬಾನಂಗಳದಲ್ಲೇ ನಿಂತು ಹಗ್ಗವನ್ನು ಕೆಳಗೆ ಬಿಟ್ಟು ಈ ಮೂಲಕ ಸೈನಿಕರು ಸರಸರನೆ ಇಳಿದುಬರುವುದು, ಒಂದು ಕೈಯಲ್ಲಿ ಹಗ್ಗ ಹಿಡಿದು, ಮತ್ತೊಂದು ಕೈಯನ್ನು ಇನ್ನೊಬ್ಬ ಯೋಧನೊಂದಿಗೆ ಜೋಡಿಸಿ ಬಂದೂಕು ಹಾರಿಸುವುದು, ನಾಲ್ಕು ದಿಕ್ಕಿನಲ್ಲಿ ಜೀಪ್‍ಗಳನ್ನು ಹಗ್ಗದಿಂದ ಕಟ್ಟಿ ನಿಗದಿತ ಸ್ಥಳದಲ್ಲಿ ಇಳಿಸುವ ದೃಶ್ಯಗಳು ವಾಯುನೆಲೆಯ ಅಧಿಕಾರಿಗಳು ಎಲ್ಲವೂ ನಿಜವಾದ ಸರ್ಜಿಕಲ್ ಸ್ಟ್ರೈಕ್‌ನಂತೆಯೇ ಇತ್ತು.

ಎರಡು ಯಾಕ್ ವಿಮಾನಗಳು ಇನ್ನೇನು ಪರಸ್ಪರ ಡಿಕ್ಕಿಯಾದವೇನೋ ಎಂದು ಪ್ರೇಕ್ಷಕರು ಹೃದಯ ಬಿಗಿ ಹಿಡಿದು ನೋಡುತ್ತಿರುವಾಗಲೇ ಕ್ಷಣ ಮಾತ್ರದಲ್ಲಿ ಬೇರೆ ಬೇರೆಯಾಗಿ ಸುಂಯ್ ಎಂದು ಮೇಲೇರುವ ದೃಶ್ಯ ಎಲ್ಲರ ಎದೆ ಝಲ್ಲೆನಿಸಿತ್ತು.
ಪ್ರದರ್ಶನಕ್ಕೂ ಮುನ್ನ ಪ್ಯಾರಾರೆಜಿಮೆಂಟ್‍ನ ಯೋಧರು 8000 ಅಡಿ ಮೇಲಿನಿಂದ ಬಣ್ಣಬಣ್ಣದ ಪ್ಯಾರಾಚೂಟ್ ಮೂಲಕ ಭೂಮಿಗಿಳಿಯುತ್ತಿದ್ದ ದೃಶ್ಯ ಎಲ್ಲರನ್ನು ಆಕರ್ಷಿಸಿತು.












Click it and Unblock the Notifications