ನಟಿ ಶರ್ಮಿಳಾ ಕಾರು ಅಪಘಾತ: ಡ್ರಿಂಕ್ & ಡ್ರೈವ್ ಅನುಮಾನ
ಬೆಂಗಳೂರು, ಏಪ್ರಿಲ್ 04: ಕನ್ನಡ ಚಿತ್ರನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತವಾಗಿದೆ. ಲಾಕ್‌ಡೌನ್ ನಡುವೆಯೂ ಕಾರ್‌ನಲ್ಲಿ ಸ್ನೇಹಿತರ ಜೊತೆಗೆ ಪ್ರಯಾಣ ಮಾಡಿದ್ದು, ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Recommended Video
ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ವಸಂತನಗರ ಅಂಡರ್ ಪಾಸ್ ಬಳಿ ಅಪಘಾತ ಸಂಬವಿಸಿದೆ. ಶರ್ಮಿಳಾ ಮಾಂಡ್ರೆ ಪ್ರಯಾಣ ಮಾಡುತ್ತಿದ್ದ ಜಾಗ್ವರ್ ಕಾರು ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ. ಡ್ರಿಂಕ್ & ಡ್ರೈವ್ ಇರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ.
ಕಾರಿನಲ್ಲಿ ನಾಲ್ಕು ಜನರು ಪ್ರಯಾಣ ಮಾಡುತ್ತಿದ್ದು, ಯಾರು ಕಾರ್ ಚಲಾಯಿಸುತ್ತಿದ್ದರು ಎನ್ನುವುದು ತಿಳಿದಿಲ್ಲ. ಅಪಘಾತದಲ್ಲಿ ಶರ್ಮಿಳಾ ಮುಖಕ್ಕೆ ಗಾಯ ಆಗಿದೆ. ಒಬ್ಬ ಸ್ನೇಹಿತನ ಕೈಗೆ ಬಲವಾದ ಹೊಡೆತ ಬಿದ್ದಿದೆ. ಇಬ್ಬರು ಸ್ನೇಹಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಂಡರ್ ಪಾಸ್ ಪಿಲ್ಲರ್‌ಗೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಜಾಗ್ವರ್ ಕಾರ್ ಅನ್ನು ವಶಕ್ಕೆ ಪಡದುಕೊಂಡಿದ್ದಾರೆ.
ನಟಿ ಶರ್ಮಿಳಾ ಮಾಂಡ್ರೆ ಸದ್ಯ ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ 2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಹೊಸದೊಂದು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.












Click it and Unblock the Notifications