ದರ್ಶನ್ ಅರೆಸ್ಟ್‌: ಪೊಲೀಸರ ಕಾರ್ಯಕ್ಕೆ ರಮ್ಯಾ ಹ್ಯಾಟ್ಸ್‌ಅಪ್‌

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೈಸೂರಿನಲ್ಲಿ ನಟ ದರ್ಶನರನ್ನು ಮಂಗಳವಾರ ಬಂಧಿಸಲಾಗಿದೆ. ಈ ಸುದ್ದಿ ರಾಜ್ಯದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು. ಈ ಸುದ್ದಿಯ ಕುರಿತು ಪರ ಹಾಗೂ ವಿರುದ್ಧ ಚರ್ಚೆಗಳು ಆರಂಭವಾದವು. ಮೈಸೂರಿನಲ್ಲಿ ನಟನನ್ನು ಅರೆಸ್ಟ್‌ ಮಾಡಿದ ಪೊಲೀಸರ ಕಾರ್ಯಕ್ಕೆ ಹಲವು ಹ್ಯಾಟ್ಸ್‌ ಅಪ್‌ ಹೇಳಿದ್ದಾರೆ. ಈಗ ಖ್ಯಾತ ನಟಿ ಹಾಗೂ ರಾಜಕಾರಣಿ ರಮ್ಯಾ ಸಹ ಖಾಕಿ ದಾರಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಖ್ಯಾತ ನಟಿ ತಮ್ಮ ಎಕ್ಸ್‌ ಖಾತೆಯಲ್ಲಿ ಕೆಲವು ಪೆಪರ್‌ ಕಟೌಟ್‌ಗಳನ್ನು ರೀ ಟ್ವಿಟ್‌ ಮಾಡಿದ್ದಾರೆ. ಅಲ್ಲದೆ ಇದರ ಕೆಳಗಡೆ ಕರ್ನಾಟಕ ಪೊಲೀಸರಿಗೆ ಹ್ಯಾಟ್ಸ್‌ ಅಪ್‌ ಎನ್ನುವ ಎಂಓಜಿಯನ್ನು ಹಾಕಿದ್ದಾರೆ. ರಮ್ಯಾ ಈ ಪೋಸ್ಟ್‌ ಈಗ ಸಖತ್‌ ಟ್ರೆಂಡ್‌ ಸೃಷ್ಟಿಸಿದೆ. ಅಸಿಸ್ಟೆಂಟ್​ ಪೊಲೀಸ್ ಕಮಿಷನರ್ ಗಿರೀಶ್ ನಾಯ್ಕ್ ಹಾಗೂ ಎಸಿಪಿ ಚಂದನ್ ಕುಮಾರ್ ಅವರ ಕಾರ್ಯವನ್ನು ರಮ್ಯಾ ಮೆಚ್ಚಿದ್ದಾರೆ.

Actress Ramya Reacts to Actor Darshan s Arrest in Murder Case

ಖಾಕಿ ಪಡೆ ಕಾರ್ಯಕ್ಕೆ ಜನರ ಮೆಚ್ಚುಗೆ

ದರ್ಶನ್‌ ಈ ಕೊಲೆ ಪ್ರಕರಣದಲ್ಲಿ ಶಾಮಿಲಾಗಿದ್ದಾರೆ ಎಂದು ಸುದ್ದಿ ತಿಳಿಯುತ್ತಿದ್ದಂತೆ, ಪೊಲೀಸರು ಜೀಪ್‌ ಹತ್ತಿ ನೇರವಾಗಿ ಮೈಸೂರು ತಲುಪಿದ್ದಾರೆ. ಅಲ್ಲಿ ದರ್ಶನ್‌ ಮಾತಿಗೆ ಆಸ್ಪದವನ್ನೇ ನೀಡದೆ ಖಡಕ್ ಆಗಿ ಕೆಲಸ ಮಾಡಿದ್ದಾರೆ. ಖಾಕಿದಾರಿಗಳ ಈ ವರ್ತನೆ ಜನ ಮೆಚ್ಚುಗೆ ಪಾತ್ರವಾಗಿದೆ. ಯಾವುದೇ ಸೆಲೆಬ್ರಿಟಿ ಆಗಲಿ, ಖ್ಯಾತನಾಮರೇ ಆಗಲಿ ಕಾನೂನು ಮುಂದೆ ಯಾರೂ ದೊಡ್ಡವರಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ಪೊಲೀಸರು ತಂದಿದ್ದ ಜೀಪ್‌ನಲ್ಲೇ ದರ್ಶನ್‌ರನ್ನು ಕರೆದುಕೊಂಡು ಬಂದಿದ್ದು ಪ್ರಶಂಸೆಗೆ ಪಾತ್ರವಾಗಿದೆ. ಅಲ್ಲದೆ ರಾಜ್ಯದಲ್ಲಿ ಇನ್ನು ಕಾನೂನು ಸುವ್ಯಸ್ಥೆ ಚೆನ್ನಾಗಿದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ.

ಪೊಲೀಸ್‌ ಕಾರ್ಯಕ್ಕೆ ರಮ್ಯಾ ಹೇಳಿದ್ದೇನು?

ಈ ಕುರಿತು ತಮ್ಮ ಎಕ್ಸ್​ ಅಕೌಂಟ್​​ನಲ್ಲಿ ಪೋಸ್ಟ್ ಶೇರ್ ಮಾಡಿರುವ ನಟಿ ರಮ್ಯಾ ಅವರು, ವಿಜಯನಗರದ ಅಸಿಸ್ಟೆಂಟ್​ ಪೊಲೀಸ್ ಕಮಿಷನರ್ ಗಿರೀಶ್ ನಾಯ್ಕ್ ಹಾಗೂ ಎಸಿಪಿ ಚಂದನ್ ಕುಮಾರ್ ಅವರ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದರ್ಶನ್​ ಇರುವ ಸ್ಥಳಕ್ಕೆ ಹೋಗಿ ಅವರು ಕೊಟ್ಟ ಉತ್ತರಕ್ಕೆ ಪ್ರತ್ಯುತ್ತರ ಕೊಟ್ಟು ಅರೆಸ್ಟ್ ಮಾಡಿ, ಬಳಿಕ ಪೊಲೀಸ್​ ಕಾರಿನಲ್ಲೇ ದರ್ಶನ್​​ ಕೂರಿಸಿಕೊಂಡು ಅಧಿಕಾರಿಗಳು ಠಾಣೆಗೆ ಬಂದಿದ್ದಾರೆ. ಕಾನೂನನ್ನು ಮೀರಿ ಯಾರೂ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ತಪ್ಪಿತಸ್ತರಿಗೆ ಶಿಕ್ಷೆಯಾಗಬೇಕು ಎಂದು ರಮ್ಯಾ ಅವರು ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಸಂಖ್ಯೆ ದಿನವೂ ಬೆಳೆಯುತ್ತಲೆ ಇದೆ. ಮೊದಲು 13 ಜನ ಆರೋಪಿಗಳು ಎಂದು ಹೇಳಲಾಗಿತ್ತು. ಈಗ ಈ ಸಂಖ್ಯೆ 18ಕ್ಕೆ ಏರಿಕೆ ಆಗಿದೆ. ಈ ಪ್ರಕರಣದಲ್ಲಿ ಬಂಧನಕ್ಕಿಡಾದ ಆರೋಪಿಗಳ ಮನೆಯ ಆಕ್ರಂದನ ಮುಗಿಲು ಮುಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮೆಜೆಸ್ಟ್ರೇಟ್ ಕೊರ್ಟ್‌ 13 ಜನ ಬಂಧಿತರನ್ನು ಪೊಲೀಸ್‌ ಕಸ್ಟಡಿಗೆ ವಹಿಸಿ ಆದೇಶವನ್ನು ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+