ಏಪ್ರಿಲ್ ಫಸ್ಟ್ ಮಧ್ಯಾಹ್ನ ದಿಢೀರ್ ಜೆಡಿಎಸ್ ಸೇರಿದ ನಟಿ ರಮ್ಯಾ

ಬೆಂಗಳೂರು, ಏಪ್ರಿಲ್ 1: ಶನಿವಾರ ಮಧ್ಯಾಹ್ನ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಸಂಸದೆ-ಚಿತ್ರ ನಟಿ ರಮ್ಯಾ ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ. ಎಸ್ಸೆಂ ಕೃಷ್ಣ ಅವರು ಬಿಜೆಪಿ ಸೇರ್ಪಡೆಯಾದ ಹಿನ್ನೆಲೆಯಲ್ಲಿ ರಮ್ಯಾ ಕೂಡ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

ಆದರೆ, ಅಚ್ಚರಿ ಎಂಬಂತೆ ಅವರು ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸೇರಿದರೆ ದೆಹಲಿವರೆಗೆ ಹೋಗಿ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಜೆಡಿಎಸ್ ಈಚೆಗಷ್ಟೇ ಹೊಸ ಕಚೇರಿ ಆರಂಭಿಸಿದ್ದು, ಕಾರಿನಲ್ಲೇ ಅಲ್ಲಿಗೆ ಹೋಗಬಹುದು. ಆ ಕಾರಣಕ್ಕೆ ಆ ಪಕ್ಷವನ್ನು ಆಯ್ಕೆ ಮಾಡಿಕೊಂಡೆ ಎಂಬ ಉತ್ತರ ನೀಡಿದ್ದಾರೆ ರಮ್ಯಾ.

Actress Ramya joins JDS on Saturday afternoon

ಕುಮಾರಸ್ವಾಮಿ ಅವರು ಈ ಹಿಂದೆ ನನ್ನ ಬಗ್ಗೆ ಹಾಗೂ ನಾನು ಅವರ ಬಗ್ಗೆ ಏನೇನೋ ಮಾತನಾಡಿ ಜಗಳ ಮಾಡಿಕೊಂಡಿದ್ದು ಹೌದು. ಈಗ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಇಬ್ಬರೂ ಚಿತ್ರಾನ್ನ ತಿಂದು ರಾಜೀ ಆಗಿದ್ದೀವಿ. ಇನ್ನು ಮುಂದೆ ಆ ಪಕ್ಷಕ್ಕಾಗಿ ದುಡಿದೇ ದುಡೀತೀನಿ ಎಂದು ಮಾಧ್ಯಮದವರಿಗೆ ಹೇಳಿದ್ದಾರೆ.

ಮುಂದಿನ ವಿಧಾನಸಭೆ ಚುನಾವನೆಗೆ ಮಂಡ್ಯದಿಂದಲೇ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಈಗಿನ್ನೂ ಜೆಡಿಎಸ್ ಸೇರಿ ಅರ್ಧ-ಮುಕ್ಕಾಲು ಗಂಟೆ ಆಗಿದೆ. ಅಷ್ಟು ಬೇಗ ಇಷ್ಟು ದೊಡ್ಡ ಪ್ರಶ್ನೆಗೆ ಹೇಗೆ ಉತ್ತರ ಹೇಳೋದು? ಚುನಾವಣೆಗೆ ಇನ್ನೂ ಒಂದು ವರ್ಷ ಇದೆಯಲ್ಲಾ, ಇವತ್ತು ಏಪ್ರಿಲ್ ಫಸ್ಟ್. ಮುಂದಿನ ದಪ ಸಿಕ್ತೀರಲ್ಲಾ, ಆಗ ಖಂಡಿತಾ ಹೇಳ್ತೀನಿ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+