Get Updates
Get notified of breaking news, exclusive insights, and must-see stories!

ಕಿಚ್ಚ ಸುದೀಪ್ ಹಿಂದಿಕ್ಕಿದ ಯಶ್ ನಂ.1

ಬೆಂಗಳೂರು, ಜೂ.24: ದೇಶದ ಫ್ಯಾಷನ್ ರಾಜಧಾನಿಯಾಗುವ ಹುಮ್ಮಸ್ಸಿನಲ್ಲಿರುವ ಬೆಂಗಳೂರು ನಗರದ 'ಹಾಟ್' ಐಕಾನ್ ಯಾರು ಎಂಬ ಪ್ರಶ್ನೆ ಮುಂದಿಟ್ಟುಕೊಂಡು ಬೆಂಗಳೂರು ಟೈಮ್ಸ್ ನಡೆಸಿದ ಆನ್ ಲೈನ್ ವೋಟಿಂಗ್ ನಂತೆ 2013ರ 'ಮೋಸ್ಟ್ ಡಿಸೈರಬಲ್ ಮ್ಯಾನ್' ಆಗಿ ಕನ್ನಡ ಚಿತ್ರರಂಗದ ನಟ ಯಶ್ ಆಯ್ಕೆಯಾಗಿದ್ದಾರೆ.

ಕಳೆದ ಬಾರಿಯ ವಿಜೇತ ಕಿಚ್ಚ ಸುದೀಪ್ ಸೇರಿದಂತೆ ಪುನೀತ್ ರಾಜ್ ಕುಮಾರ್, ದರ್ಶನ್, ಉಪೇಂದ್ರ, ಸಿದ್ದಾರ್ಥ್ ಮಲ್ಯ, ನಿಖಿಲ್ ಚಿನ್ನಪ್ಪ, ಮನೀಶ್ ಪಾಂಡೆ, ಪಂಕಜ್ ಅಡ್ವಾಣಿ ಸೇರಿದಂತೆ ಹಲವಾರು ಬೆಂಗಳೂರು ಬಾಯ್ಸ್ ಗಳನ್ನು ಯಶ್ ಹಿಂದೆ ತಳ್ಳಿ ಹೆಚ್ಚಿನ ಮತ ಪಡೆದು ಅಗ್ರಸ್ಥಾನಕ್ಕೇರಿದ್ದಾರೆ.

ಈ ಸ್ಪರ್ಧೆಯಲ್ಲಿ ಚಲನಚಿತ್ರ ನಟರು, ಮಾಡೆಲ್ ಗಳು, ಉದ್ಯಮಿ, ನಿರೂಪಕರು ಕಣದಲ್ಲಿದ್ದರು. ಓದುಗರು ತಮ್ಮ ನೆಚ್ಚಿನ ಸ್ಟಾರ್ ಗೆ ಮತ ಹಾಕುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಾಟ್ ಪುರುಷ, ಮಹಿಳೆ ಎಂಬ ಕೆಟಗರಿಯಲ್ಲಿ ಪ್ರತಿ ನಗರ ಹಾಗೂ ಪ್ರತಿ ಚಿತ್ರರಂಗಕ್ಕೂ ಪ್ರತ್ಯೇಕ ಸಮೀಕ್ಷೆ ನಡೆಸಲಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಐಟೈಮ್ಸ್ ವೆಬ್ ತಾಣದಲ್ಲಿ ನಡೆದ ಆನ್ ಲೈನ್ ಸಮೀಕ್ಷೆ ವರದಿ ಈಗ ಪ್ರಕಟಿಸಲಾಗಿದೆ. ನಿಮ್ಮ ನೆಚ್ಚಿನ ಸ್ಟಾರ್ ಗಳನ್ನು ನೋಡುತ್ತಾ ಮುಂದುವರೆಯಿರಿ...

ಯಶ್ ನಂ.1

ಯಶ್ ನಂ.1

ಕಿರಾತಕ, ರಾಜಹುಲಿ, ಇತ್ತೀಚಿನ ಗಜಕೇಸರಿ ಯಶಸ್ಸಿನಿಂದ ಯಶ್ ಯುವ ಪೀಳಿಗೆಯ ನೆಚ್ಚಿನ ನಟ ಎನಿಸಿದ್ದಾರೆ. ಫ್ಯಾಷನ್ ಲೋಕದಲ್ಲೂ ಯಶ್ ಚಿತ್ರಗಳಲ್ಲಿ ಧರಿಸುವ ಉಡುಗೆಗಳ ಚರ್ಚೆ ನಡೆದಿದೆಯಂತೆ.

ಕಿಚ್ಚ ಸುದೀಪ್ #2

ಕಿಚ್ಚ ಸುದೀಪ್ #2

ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ಕಿಚ್ಚ ಸುದೀಪ್ ಅವರು ಕಾಲಿವುಡ್, ಟಾಲಿವುಡ್ ನಲ್ಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಇತ್ತೀಚಿನ ಮಾಣಿಕ್ಯ ಚಿತ್ರದ ಯಶಸ್ಸು ಬಿಗ್ ಬಾಸ್ 2 ಕಾರ್ಯಕ್ರಮದ ಬಗ್ಗೆ ಕಾತುರ, ಬಾಹುಬಲಿ ಚಿತ್ರದ ಬಗ್ಗೆ ನಿರೀಕ್ಷೆ ನಡುವೆಯೂ ಕೂಡಾ ಯಶ್ ಗೆ ಮೊದಲ ಸ್ಥಾನ ಬಿಟ್ಟುಕೊಟ್ಟಿದ್ದಾರೆ.

ದಿಗಂತ್ #3

ದಿಗಂತ್ #3

ರೂಪದರ್ಶಿಯಾಗಿದ್ದ ದಿಂಗತ್ ಕನ್ನಡ ಚಿತ್ರರಂಗದಲ್ಲಿ ಮುದ್ದಿನಿಂದ ದೂಧ್ ಪೇಡ ಎಂದು ಕರೆಸಿಕೊಳ್ಳುವ ನಟ. ಬಾಲಿವುಡ್ ಗೂ ಕಾಲಿಟ್ಟಿರುವ ತೀರ್ಥಹಳ್ಳಿಯ ಪ್ರತಿಭೆ ಮತ್ತೆ ಯೋಗರಾಜ್ ಭಟ್ಟರ ಗರಡಿಯಲ್ಲಿ ಪರಪಂಚ ಸುತ್ತುತ್ತಿದ್ದಾರೆ.

ರಾಹುಲ್ ದ್ರಾವಿಡ್ #4

ರಾಹುಲ್ ದ್ರಾವಿಡ್ #4

ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರು ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿದ್ದರೂ ಅವರ ಜನಪ್ರಿಯತೆ ಕುಗ್ಗಿಲ್ಲ. ಟೆಸ್ಟ್ ಹಾಗೂ ಏಕದಿನ ಪಂದ್ಯಗಳೆರಡರಲ್ಲೂ ಅದ್ಭುತ ಪ್ರದರ್ಶನ ನೀಡಿರುವ ದ್ರಾವಿಡ್ ಟೀಂ ಇಂಡಿಯಾದ ನಾಯಕನ ಪಾತ್ರವನ್ನೂ ನಿರ್ವಹಿಸಿದ್ದರು. ಈಗಲೂ ಜಾಹೀರಾತು ಪ್ರಪಂಚದಲ್ಲಿ ದ್ರಾವಿಡ್ ಬೇಡಿಕೆ ಕುಂದಿಲ್ಲ.

ರೂಪದರ್ಶಿ ರಾಕೇಶ್ ಚೆಂಗಪ್ಪ #5

ರೂಪದರ್ಶಿ ರಾಕೇಶ್ ಚೆಂಗಪ್ಪ #5

ಬೆಂಗಳೂರಿನ ಟಾಪ್ ಮಾಡೆಲ್ ಗಳಲ್ಲಿ ಒಬ್ಬರಾಗಿರುವ ಕೊಡಗಿನ ಗಂಡು ರಾಕೇಶ್ ಅವರು ನಟನಾಗಿ ಬೆಳೆಯುವ ಆಸೆ ಇರಿಸಿಕೊಂಡಿದ್ದಾರೆ.

ಈಗಾಗಲೇ ತಮಿಳಿನಲ್ಲಿ ಪೆಸು, ಎಥಿರಾಮರೈ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಡಿಜೆ ಆಗಿ ಕೂಡಾ ತಮ್ಮ ವೃತ್ತಿ ಬದುಕು ಮುಂದುವರೆಸಿದ್ದಾರೆ.

ನಟ ಚೇತನ್ #6

ನಟ ಚೇತನ್ #6

ಕನ್ನಡ ಚಿತ್ರಗಳಲ್ಲಿ ನಟಿಸಲೆಂದೇ ಅಮೆರಿಕದಿಂದ ಗಾಂಧಿನಗರಕ್ಕೆ ಬಂದ ಚೇತನ್ ಅವರು 'ಆ ದಿನಗಳು' ಚಿತ್ರದ ಮೂಲಕ ಮನೆ ಮಾತಾದರು. 2013ರ ಮೈನಾ ಚಿತ್ರ ಅವರಿಗೆ ಮತ್ತೆ ಮಾರುಕಟ್ಟೆಯಲ್ಲಿ ಬೇಡಿಕೆ ಹುಟ್ಟಿಸಿತು. ಇಂಗ್ಲೀಷ್ ಸಾಹಿತ್ಯದ ಅಪರೂಪದ ಕೃತಿಗಳನ್ನು ಕನ್ನಡಕ್ಕೆ ತರುವ ಯತ್ನವನ್ನು ಮುಂದುವರೆಸಿರುವ ಸಿಕ್ಸ್ ಪ್ಯಾಕ್ ಹೀರೊ

ಮಾಡೆಲ್, ನಟ ಕರಣ್ ರಾವ್ #7

ಮಾಡೆಲ್, ನಟ ಕರಣ್ ರಾವ್ #7

2008ರಲ್ಲಿ Gladrags ಮಾಡೆಲ್ ಹಂಟ್ ರನ್ನರ್ ಅಪ್ ಆಗಿದ್ದ ಕರಣ್ ರಾವ್ ಅವರು ಹತ್ತು ಹಲವು ಫ್ಯಾಷನ್ ವೇದಿಕೆಯಲ್ಲಿ ಕಾಣಿಸಿಕೊಂಡವರು. ಸವಾರಿ 2 ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಉದ್ಯಮಿ ಸಿದ್ದಾರ್ಥ್ ಮಲ್ಯ #8

ಉದ್ಯಮಿ ಸಿದ್ದಾರ್ಥ್ ಮಲ್ಯ #8

ಉದ್ಯಮಿ ವಿಜಯ್ ಮಲ್ಯ ಅವರ ಪುತ್ರ ಸಿದ್ದಾರ್ಥ್ ಮಲ್ಯ ಅವರು ಕಿಂಗ್ ಫಿಷರ್ ಕ್ಯಾಲೆಂಡರ್ ನಿರ್ಮಾಣ ಮಾಡುತ್ತಾ ಮಾಡುತ್ತಾ ಫ್ಯಾಷನ್ ಲೋಕದಲ್ಲೂ ಕಾಣಿಸಿಕೊಂಡವರು. ದೀಪಿಕಾ ಪಡುಕೋಣೆ, ಬೆಂಗಳೂರಿನ ಗಾಲ್ಫರ್ ಶರ್ಮಿಳಾ ಜತೆ ಕಾಣಿಸಿಕೊಂಡು ಗಾಳಿ ಸುದ್ದಿಗೆ ಸಿಲುಕಿ ನಲುಗಿದರೂ ಯುವ ಜನತೆಗೆ ಸಿದ್ ಮಲ್ಯ ಇಷ್ಟವಾಗಿದ್ದಾರೆ.

ಮಾಡೆಲ್ ಆರಿ ಡಬಾಸ್ #9

ಮಾಡೆಲ್ ಆರಿ ಡಬಾಸ್ #9

ಖ್ಯಾತ ಡಿಸೈನರ್ ಮನೀಷ್ ಮಲ್ಹೋತ್ರ, ರೋಹಿತ್ ಬಾಲ್, ಮಾನವ್ ಗ್ಯಾಂಗ್ ವಾನಿ, ವಿಕ್ರಮ್ ಫಡ್ನೀಸ್ ಮುಂತಾದವರ ಫ್ಯಾಷನ್ ಶೋಗಳಲ್ಲಿ ಕಾಣಿಸಿಕೊಂಡಿರುವ ಟಾಪ್ ಮಾಡೆಲ್

ಪವರ್ ಸ್ಟಾರ್ ಪುನೀತ್ #10

ಪವರ್ ಸ್ಟಾರ್ ಪುನೀತ್ #10

ಡಾ. ರಾಜಕುಮಾರ್ ಅವರ ಪುತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕಳೆದ ವರ್ಷ ತೆರೆಕಂಡ ನಿನ್ನಿಂದಲೇ ಚಿತ್ರದ ಸೋಲಿನಿಂದ ಹಿನ್ನಡೆ ಅನುಭವಿಸಿದರೂ ಕೋಟ್ಯಧಿಪತಿ ಶೋ, ನಂದಿನಿ ಹಾಲಿನ ಜಾಹೀರಾತು, ರಣ ವಿಕ್ರಮ ಚಿತ್ರದ ನಿರೀಕ್ಷೆ ಮೂಲಕ ಯುವ ಜನಾಂಗದ ಮನಸ್ಸಿನಲ್ಲಿ ಕಾತುರ ಹುಟ್ಟಿಸಿದ್ದಾರೆ.

ಇನ್ನಷ್ಟು ಹಾಟ್ ತಾರೆಗಳನ್ನು ನಿರೀಕ್ಷಿಸಿ...
ನಟ ಉಪೇಂದ್ರ #11

ನಟ ಉಪೇಂದ್ರ #11

ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರು ಟೋಪಿವಾಲ ನೆಲ ಕಚ್ಚಿದ್ದು, ಬ್ರಹ್ಮ ಕೂಡಾ ಸದ್ದು ಮಾಡಲಿಲ್ಲ. ಬಸವಣ್ಣ ಹೆಸರಿನ ವಿವಾದದಲ್ಲಿ ಸುದ್ದಿ ಮಾಡಿದ ಉಪೇಂದ್ರ ಅವರು ಉಪೇಂದ್ರ 2 ರ ನಿರೀಕ್ಷೆ ಹೆಚ್ಚಾಗಿದೆ.

ಕ್ಯಾಪ್ಟನ್ ಬೆಹ್ರಮ್ ಸಿಂಗನ್ಪೂರಿಯಾ #12

ಕ್ಯಾಪ್ಟನ್ ಬೆಹ್ರಮ್ ಸಿಂಗನ್ಪೂರಿಯಾ #12

ಕ್ಯಾಪ್ಟನ್ ಬೆಹ್ರಮ್ ಸಿಂಗನ್ಪೂರಿಯಾ ಅವರು ಗಿಟಾರಿಸ್ಟ್ ಆಗಿ ಒನನ್ ನೈಟ್ ಬ್ಯಾಂಡ್ ನ ಹಾಟೆಸ್ಟ್ ಸಂಗೀತಗಾರ. ಯೂನಿವರ್ಸಲ್ ಮ್ಯೂಸಿಕ್ ಜತೆ ಒಪ್ಪಂದ ಸಹಿ ಹಾಕಿದ್ದಾರೆ ಕೂಡಾ.

ನಟ, ಮಾಡೆಲ್ ತಿಲಕ್ #13

ನಟ, ಮಾಡೆಲ್ ತಿಲಕ್ #13

ಗಂಡ ಹೆಂಡತಿ ಚಿತ್ರದ ನೆಗಟಿವ್ ಶೇಡ್ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ ಮಾಡೆಲ್ ತಿಲಕ್ ಇತ್ತೀಚಿನ ಉಗ್ರಂ ನಲ್ಲಿ ಮಿಂಚಿದ್ದಾರೆ. ಕನ್ನಡದ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾದ ಮೇಲೆ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ.

ಚಿರಂಜೀವಿ ಸರ್ಜಾ #14

ಚಿರಂಜೀವಿ ಸರ್ಜಾ #14

ಚಿರಂಜೀವಿ ಸರ್ಜಾ ಅವರು ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದವರು ನಟರಾಗಿ ಬೆಳೆದರು. ಅರ್ಜುನ್ ಸರ್ಜಾ ಗರಡಿಯಿಂದ ಬಂದ ಚಿರು ಸಿಸಿಎಲ್ ನಲ್ಲಿ ಆಡಿದ್ದು, ಇತ್ತೀಚಿನ ರಿಮೇಕ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಸದಾ ಸುದ್ದಿಯಲ್ಲಿರುವಂತೆ ಮಾಡಿದೆ.

ಕ್ರಿಕೆಟರ್ ಮನೀಶ್ ಪಾಂಡೆ #15

ಕ್ರಿಕೆಟರ್ ಮನೀಶ್ ಪಾಂಡೆ #15

ಕರ್ನಾಟಕದ ಬಲಗೈ ಬ್ಯಾಟ್ಸ್ ಮನ್ ಮನೀಶ್ ಪಾಂಡೆ ಐಪಿಎಲ್ ನಲ್ಲಿ ಕೆಕೆಆರ್ ಪರ ಅದ್ಭುತವಾಡಿದ ಮೇಲೆ ಮತ್ತೊಮ್ಮೆ ಯುವತಿಯರ ಕಣ್ಣಿಗೆ ಬಿದ್ದಿದ್ದಾರೆ. ಭಾರತ ತಂಡ ಸೇರುವ ಅವರ ಪ್ರಯತ್ನ ಮುಂದುವರೆದಿದೆ.

ಜೆಕೆ ಅಲಿಯಾಸ್ ಜೆ ಕಾರ್ತಿಕ್ #16

ಜೆಕೆ ಅಲಿಯಾಸ್ ಜೆ ಕಾರ್ತಿಕ್ #16

ಕನ್ನಡ ಚಿತ್ರರಂಗದಲ್ಲಿ ವಿಲನ್ ಆಗಿ ಕಾಣಿಸಿಕೊಂಡ ಸಿಸಿಎಲ್ ನಲ್ಲಿ ಕರ್ನಾಟಕದ ಬುಲ್ಡೋಜರ್ ಹೀರೋ ಜೆ ಕಾರ್ತಿಕ್ ಈಗ ಕಿರುತೆರೆಯಲ್ಲಿ ಅಶ್ವಿನಿ ನಕ್ಷತ್ರ ಸಿರೀಯಲ್ ಮೂಲಕ ಸೂಪರ್ ಸ್ಟಾರ್ ಜೆಕೆ ಯಾಗಿ ಮನೆ ಮಾತಾಗಿದ್ದಾರೆ.

ಇಂಜಿನಿಯರಿಂಗ್ ಓದಿರುವ ಜೆಕೆ ಜಸ್ಟ್ ಲವ್, ಕೇರ್ ಆಫ್ ಫುಟ್ ಪಾತ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮಾಡೆಲ್ ಜೊಹೆಬ್ #17

ಮಾಡೆಲ್ ಜೊಹೆಬ್ #17

ಮಾಡೆಲಿಂಗ್ ಕ್ಷೇತ್ರದಲ್ಲಿ ಕಳೆದ 9 ವರ್ಷಗಳಿಂದ ಜನಪ್ರಿಯತೆ ಉಳಿಸಿಕೊಂಡಿರುವ ಜೊಹೆಬ್ ಅವರು ಪ್ರಸಾದ್ ಬಿದ್ದಪ್ಪ ಅವರ ಫ್ಯಾಷನ್ ಶೋನ ಮುಖ್ಯ ಮಾಡೆಲ್ ಹಾಗೂ ಅವರ ಕಂಪನಿಯ ಉದ್ಯೋಗಿ ಕೂಡಾ.

ಚಾಲೆಜಿಂಗ್ ಸ್ಟಾರ್ ದರ್ಶನ್ #18

ಚಾಲೆಜಿಂಗ್ ಸ್ಟಾರ್ ದರ್ಶನ್ #18

ದರ್ಶನ್ ತೂಗುದೀಪ 2001ರಲ್ಲಿ ಚಿತ್ರರಂಗಕ್ಕೆ ರೌಡಿಸಂ ಪಾತ್ರದ ಮೂಲಕ ಕಾಲಿರಿಸಿದ್ದು ಇತ್ತೀಚಿನ ಕೌಟುಂಬಿಕ ಪಾತ್ರಗಳಲ್ಲಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಪ್ರಾಣಿ ಪ್ರಿಯನಾಗಿ ಕೂಡಾ ಮನ್ನಣೆ ಗಳಿಸಿರುವ ದರ್ಶನ್ ಅವರ ಇತ್ತೀಚಿನ ರಿಮೇಕ್ ಚಿತ್ರಗಳು ಹೆಸರು ಗಳಿಸಿವೆ.

ಮಾಡೆಲ್, ನಟ ರಘು ಮುಖರ್ಜಿ #19

ಮಾಡೆಲ್, ನಟ ರಘು ಮುಖರ್ಜಿ #19

ಮಾಡೆಲ್, ನಟ ರಘು ಮುಖರ್ಜಿ ಅವರು 2002ರಲ್ಲಿ ರಾಷ್ಟ್ರಮಟ್ಟದ ಮಾಡೆಲಿಂಗ್ ಸ್ಪರ್ಧೆ ಗೆದ್ದವರು ನಂತರ ಮಿ. ಇಂಟರ್ ನ್ಯಾಷನಲ್ ಎನಿಸಿದವರು. 2009ರಲ್ಲಿ ಕನ್ನಡದ ಸವಾರಿ ಚಿತ್ರದಲ್ಲಿ ಉತ್ತಮವಾಗಿ ನಟಿಸಿದರು. ಈಗ ಅಂಗುಲಿಮಾಲ, ಮೀನಾಕ್ಷಿ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ರಕ್ಷಿತ್ ಶೆಟ್ಟಿ #20

ರಕ್ಷಿತ್ ಶೆಟ್ಟಿ #20

ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರು ಸಿಂಪಾಲ್ಲಾಗೊಂದು ಲವ್ ಸ್ಟೋರಿ, ಉಳಿದವರು ಕಂಡಂತೆ ಜನಪ್ರಿಯತೆ ಮೂಲಕ ಯುವ ಮನ ಗೆದ್ದಿದ್ದಾರೆ.

ಕ್ರೀಡಾಪಟು ಪಂಕಜ್ ಅಡ್ವಾಣಿ #21

ಕ್ರೀಡಾಪಟು ಪಂಕಜ್ ಅಡ್ವಾಣಿ #21

ಎಂಟು ವಿಶ್ವ ಮಟ್ಟದ ಬಿಲಿಯರ್ಡ್ ಹಾಗೂ ಸ್ನೂಕರ್ ಪ್ರಶಸ್ತಿ ಗೆದ್ದಿರುವ ದೇಶದ ಅಗ್ರಗಣ್ಯ ಕ್ರೀಡಾಪಟು ಪಂಕಜ್ ಅಡ್ವಾಣಿಗೆ ಬೆಂಗಳೂರಿನ ನೈಟ್ ಕ್ಲಬ್ ನಲ್ಲಿ ಸುತ್ತಾಡಿ ಅಭ್ಯಾಸವಿದೆ. ಹಲವು ಫ್ಯಾಷನ್ ಶೋಗಳಲ್ಲಿ ಶೋಸ್ಟಾಪರ್ ಆಗಿ ಮುನ್ನಡೆಸಿದ್ದಾರೆ.
ಚಿತ್ರದ ಎಡಬದಿಯಲ್ಲಿ ಪಂಕಜ್ ಅಡ್ವಾಣಿ

ಕ್ರಿಕೆಟರ್ ರಾಬಿನ್ ಉತ್ತಪ್ಪ #22

ಕ್ರಿಕೆಟರ್ ರಾಬಿನ್ ಉತ್ತಪ್ಪ #22

ಟೀಂ ಇಂಡಿಯಾ, ಕರ್ನಾಟಕ, ಇತ್ತೀಚೆಗೆ ಕೆಕೆಆರ್ ಪರ ಆಡಿರುವ ಕ್ರಿಕೆಟರ್ ರಾಬಿನ್ ಉತ್ತಪ್ಪ ಸಿಡಿಲಬ್ಬರದ ಬ್ಯಾಟಿಂಗ್ ಕಂಡರೆ ಯುವತಿಯರು ಹುಚ್ಚೆದ್ದು ಕುಣಿದಾಡುತ್ತಾರೆ. ಇತ್ತೀಚೆಗೆ 20 ಕೆಜೆ ತೂಕ ಇಳಿಸಿಕೊಂಡು ಇನ್ನಷ್ಟು ಫಿಟ್ ಆಗಿದ್ದಾರೆ ಕೊಡಗಿನ ಕುವರ.

ವಿಜೆ ನಿಖಿಲ್ ಚಿನ್ನಪ್ಪ #23

ವಿಜೆ ನಿಖಿಲ್ ಚಿನ್ನಪ್ಪ #23

ವಿಡಿಯೋ ಜಾಕಿ ನಿಖಿಲ್ ಚಿನ್ನಪ್ಪ ಅವರು ಆರ್ ಜೆ, ವಿಜೆ ಆಗಿ 90ರ ದಶಕದಲ್ಲಿ ಮನೆ ಮಾತಾದವರು ಡೇವಿಡ್, ಶೈತಾನ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡವರು. ಡಿಜೆಯಾಗಿ ಕಾರ್ಯನಿರ್ವಹಿಸುವ ನಿಖಿಲ್ ಬೆಂಗಳೂರಿನ ಸಂಗೀತ ಕಾರ್ಯಕ್ರಮಗಳಲ್ಲಿ ಇದ್ದೇ ಇರುತ್ತಾರೆ.

ಟೆನಿಸ್ ತಾರೆ ರೋಹನ್ ಬೋಪಣ್ಣ #24

ಟೆನಿಸ್ ತಾರೆ ರೋಹನ್ ಬೋಪಣ್ಣ #24

ಭಾರತದ ಭರವಸೆಯ ಡಬ್ಬಲ್ಸ್ ಟೆನಿಸ್ ತಾರೆ ರೋಹಣ್ ಬೋಪಣ್ಣ ವಿಶ್ವದ ನಂ.3 ಪಟ್ಟಕ್ಕೇರಿದ್ದವರು. ಪಾಕಿಸ್ತಾನ ಐಸಾಮ್ ಉಲ್ ಹಕ್ ಇವರ ಜೋಡಿ.

ನಟ ಆದಿತ್ಯ ಸಿಂಗ್ #25

ನಟ ಆದಿತ್ಯ ಸಿಂಗ್ #25

ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಗ ಆದಿತ್ಯ 2004ರಲ್ಲಿ ಲವ್ ಚಿತ್ರದ ಮೂಲಕ ಎಂಟ್ರಿ ಕೊಟ್ಟರೂ ಹೆಸರು ತಂದು ಕೊಟ್ಟಿದ್ದು ಡೆಡ್ಲಿ ಸೋಮ ಹಾಗೂ ಎದೆಗಾರಿಕೆ ಚಿತ್ರ. ತಮಿಳಿನಲ್ಲಿ 'ವಾಲು' ಚಿತ್ರದಲ್ಲಿ ಕೂಡಾ ನಟಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+