ರಾಜಕೀಯ ಪಕ್ಷ ಕಟ್ಟುತ್ತೇನೆ ಎಂದ ಪೊರ್ಕಿ ಹುಚ್ಚ ವೆಂಕಟ್

ನಟ, ನಾಯಕ, ನಿರ್ದೇಶಕ, ನಿರ್ಮಾಪಕ, ಗೀತ ರಚನೆಕಾರ 'ರೌದ್ರ' ರಸ ನಾಯಕ, ಬ್ಯಾನ್ ಸ್ಟಾರ್ ಹುಚ್ಚ ವೆಂಕಟ್ ಈಗ ರಾಜಕೀಯ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಮುಂದಿನ ಅಸೆಂಬ್ಲಿ ಎಲೆಕ್ಷನ್ ನಲ್ಲಿ 'ನನ್ ಮಗಂದ್' ಎಂದು ಘರ್ಜಿಸಲಿದ್ದಾರೆ.

ಬೆಂಗಳೂರು, ಮಾರ್ಚ್ 27 : ನಟ, ನಾಯಕ, ನಿರ್ದೇಶಕ, ನಿರ್ಮಾಪಕ, ಗೀತ ರಚನೆಕಾರ 'ರೌದ್ರ' : ರಸ ನಾಯಕ, ಬ್ಯಾನ್ ಸ್ಟಾರ್ ಹುಚ್ಚ ವೆಂಕಟ್ ಈಗ ರಾಜಕೀಯ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಮುಂದಿನ ಅಸೆಂಬ್ಲಿ ಎಲೆಕ್ಷನ್ ನಲ್ಲಿ 'ನನ್ ಮಗಂದ್' ಎಂದು ಘರ್ಜಿಸಲಿದ್ದಾರೆ. ಆದರೆ, ಅಭಿಮಾನಿಗಳಿಗ ನಿರಾಶೆ ಸುದ್ದಿ ಕೂಡಾ ಇದೆ.

'ಹುಚ್ಚ ವೆಂಕಟ್' ಅಂತ ವರ್ಲ್ಡ್ ಫೇಮಸ್ ಆಗಿರುವ ವೆಂಕಟರಾಮನ್ ಅವರು ಹೊಸ ಪಕ್ಷ ಕಟ್ಟುವ ಬಗ್ಗೆ ಪೊರ್ಕಿ ಹುಚ್ಚ ವೆಂಕಟ್ ಚಿತ್ರದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಹುಚ್ಚ ವೆಂಕಟ್ ಸೇನೆಯನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿದ್ದು, ಮುಂದಿನ ಅಸೆಂಬ್ಲಿ ಚುನಾವಣೆಗೆ ಹೊಸ ಪಕ್ಷ ಉದಯವಾಗಲಿದೆ ಎಂದರು.[ಪೊರ್ಕಿ ಹುಚ್ಚ ವೆಂಕ್ಟನ ಕಾವೇರಿ... ಐ ಮಿಸ್ ಹರ್ ಸಾಂಗ್]

ಆದರೆ, ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಸೂಕ್ತ ಅಬ್ಯರ್ಥಿಗಳನ್ನು ಕಣಕ್ಕಿಳಿಸುತ್ತೇನೆ. ಬಡವರ ಕಣ್ಣೀರು ಒರೆಸುವ ಕೈಗಳು ಬೇಕಿದೆ ಎಂದು ಹೇಳಿದರು.[ಹುಚ್ಚ ವೆಂಕಟ್ ಯಾರು?]

Huchcha Venkat

ಯೂಟ್ಯೂಬ್ ವಿಡೀಯೋ ಮೂಲಕ ಸ್ಟಾರ್ ಆಗಿದ್ದ ವೆಂಕಟ್ ಅವರು, ಬಿಗ್ ಬಾಸ್ ಕನ್ನಡ ಸೀಸನ್ 3ನಲ್ಲಿ 'ಬಾಸ್' ಆಗಿ ನಂತರ ಸಹಸ್ಪರ್ಧಿ ಮಾಡಿ ಸುದ್ದಿಯಾದವರು.[ಕಾವೇರಿ ಇಲ್ಲಿ ಹುಟ್ಟಿರೋದು, ನಮ್ಗೆ ಸೇರ್ಬೇಕು: ಹುಚ್ಚ ವೆಂಕಟ್]

'ಸ್ವತಂತ್ರಪಾಳ್ಯ' ಹುಚ್ಚ ವೆಂಕಟ್ ಚಿತ್ರದ ಸೋಲಿನ ನಂತರ ಹುಚ್ಚ ವೆಂಕಟ್ ಅವರು ಕನ್ನಡ ಪ್ರೇಕ್ಷಕರ ಮುಂದೆ ಆರ್ಭಟಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಪೊರ್ಕಿ ಹುಚ್ಚ ವೆಂಕಟ್ ಚಿತ್ರ ಮಾಡುತ್ತಿರುವ ನೀಲಿ ಶರ್ಟ್ ಪ್ರಿಯ ವೆಂಕಟ್ ಅವರು ಏನ್ ಮಾಡ್ತಾರೋ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+