ಇನ್ಮುಂದೆ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದರೂ ಕ್ರಮ

ಬೆಂಗಳೂರು, ಅಕ್ಟೋಬರ್ 19: ಇನ್ನುಮುಂದೆ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದರೂ ಕ್ರಮ ಕೈಗೊಳ್ಳುವ ಆದೇಶವನ್ನು ಹೊರಡಿಸಲಾಗಿದೆ.

ಸಾಮಾನ್ಯ ಜನರು ಸಂಚಾರ ನಿಯಮ ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳುತ್ತೀರಾ ಆದರೆ ಪೊಲೀಸರು ನಿಯಮ ಉಲ್ಲಂಘಿಸಿದರೆ ಮಾತ್ರ ಮಾಫಿ ಮಾಡುತ್ತೀರ ಯಾಕೆ ಎನ್ನುವ ಪ್ರಶ್ನೆ ಉದ್ಭವವಾಗಿತ್ತು. ಜೊತೆಗೆ ದೂರು ಕೂಡ ಬಂದಿತ್ತು.

ಸರ್ಕಾರಿ ವಾಹನಗಳ ಚಾಲಕರು ಹಾಗೂ ಪೊಲೀಸರು ಸಂಚಾರ ನಿಯಮ ಪಾಲಿಸದೆ ಹೋದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವಂತೆ ನಗರ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ. ಬಿ.ಆರ್. ರವಿಕಾಂತೇಗೌಡ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

Action Taken Despite Violation Of Traffic Rules By Police

ಸರ್ಕಾರಿ ವಾಹನಗಳ ಅದರಲ್ಲೂ ಪೊಲೀಸ್ ಇಲಾಖೆಯ ಚಾಲಕರು, ಬಹಳ ಜವಾಬ್ದಾರಿಯುತವಾಗಿ ಇಲಾಖೆ ನೀಡಿರುವ ವಾಹನಗಳನ್ನು ಚಾಲನೆ ಮಾಡಬೇಕು. ಪೊಲೀಸ್ ವಾಹನಗಳನ್ನು ಸಾರ್ವಜನಿಕರು ಗಮನಿಸುತ್ತಿರುತ್ತಾರೆ. ಅಲ್ಲದೆ ಈ ವಾಹನಗಳು ಸಂಚಾರ ನಿಯಮ ಉಲ್ಲಂಘನೆಯನ್ನು ತಮ್ಮ ಮೊಬೈಲ್‌ಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಹರಿಬಿಡುತ್ತಿದ್ದಾರೆ.

ಕೆಲವು ಸಾರ್ವಜನಿಕರು ಫೋಟೊಗಳನ್ನು ಇ-ಮೇಲ್ , ಪಬ್ಲಿಕ್ ಐ ಅಪ್ಲಿಕೇಷನ್, ವಾಟ್ಸಪ್ ಮೂಲಕ ದೂರು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನು ಪಾಲನೆಗೆ ಪೊಲೀಸರು ಸೇರಿದಂತೆ ಸರ್ಕಾರಿ ವಾಹನ ಚಾಲಕರು ಉದಾಸೀನತೆ ತೋರಿಸಿದರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+