ರಸ್ತೆ ಅಪಘಾತ ಸಂಖ್ಯೆ ಇಳಿಕೆ, ಆದರೆ ಸಾವಿನ ಸಂಖ್ಯೆ ಏರಿಕೆ

ಬೆಂಗಳೂರು, ಜನವರಿ 10: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಸ್ತೆ ಅಪಘಾತ ಪ್ರಮಾಣ ಕಡಿಮೆಯಾಗಿದ್ದರೂ ಕೂಡ ಅಪಘಾತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚಾಗಿದೆ.

2018ರಲ್ಲಿ ಒಟ್ಟು 684 ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ, 2018ರಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚಿರುವ 661 ರಸ್ತೆ ಅಪಘಾತಗಳು ಸಂಭವಿಸಿದ್ದು ಅದರಲ್ಲಿ 684 ಮಂದಿ ಮೃತಪಟ್ಟಿದ್ದಾರೆ.

2017ರಲ್ಲಿ 5,064 ರಸ್ತೆ ಅಪಘಾತಗಳು ವರದಿಯಾಗಿವೆ,ಇದರಲ್ಲಿ 4256 ಜನರು ಗಾಯೊಂಡಿದ್ದಾರೆ. ಏರ್‌ಪೋರ್ಟ್ ರಸ್ತೆ, ಹೊಸೂರು ರಸ್ತೆ, ರಿಂಗ್ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ.

ಗರದ ಟ್ರಾಫಿಕ್ ಸಮಸ್ಯೆ ಬಗ್ಗೆ ಹೆಚ್ಚು ದೂರುಗಳಿವೆ, ಹೀಗಾಗಿ ಸಂಚಾರ ನಿಯಂತ್ರಣ ಕ್ರಮಗಳಲ್ಲಿ ಪೊಲೀಸರು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ, ವಾಹನ ಸವಾರರಲ್ಲಿ ಶಿಸ್ತು ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ

ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ

ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆಯು ಅಪಘಾತಕ್ಕೆ ಕಾರಣವಾಗುರಲ್ಲಿ ತ್ತದೆ ಎಂಬ ವ್ಯಾಪಕ ಎಚ್ಚರಿಕೆ ಸೂಚನೆಯ ನಡುವೆಯೂ ಉಲ್ಲಂಘನೆ ಪ್ರಕರಣಗಳು ಮುಂದುವರೆದಿದೆ. 2018ರಲ್ಲಿ 2,69,225 ಪ್ರಕರಣಗಳು ದಾಖಲಾಗಿವೆ.

78 ಲಕ್ಷ ವಾಹನಗಳು

78 ಲಕ್ಷ ವಾಹನಗಳು

ಕರ್ನಾಟಕ ಸಾರಿಗೆ ಇಲಾಖೆಯ ಪ್ರಕಾರ 2018ರ ನವೆಂಬರ್ ವರೆಗೆ ಬೆಂಗಳೂರು ನಗರ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ಕಚೇರಿಗಳು, ದೇವನಹಳ್ಳಿ, ಚಂದಾಪುರ ಮತ್ತು ಆಟೋರಿಕ್ಷಾ ನೋಂದಣಿಯ ಸಾರಿಗೆ ಕಚೇರಿಗೆ ಒಳಗೊಂಡಂತೆ ನೋಂದಾಯಿಸಿಕೊಂಡ ವಾಹನಗಳು 78,49,740 ಆಗಿವೆ.

ದ್ವಿಚಕ್ರ ವಾಹನ ಸವಾರರ ವಿರುದ್ಧ ಕೇಸ್

ದ್ವಿಚಕ್ರ ವಾಹನ ಸವಾರರ ವಿರುದ್ಧ ಕೇಸ್

ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಸಂಬಂಧ 16,48,240 ಕೇಸುಗಳನ್ನು ದಾಖಲಿಸಲಾಗಿದೆ. ಹಿಂಬದಿ ಸವಾರರು ಹೆಲ್ಮೆಟ್ ಧರಿಸಿದ ಕಾರಣ 13,40,824 ಪ್ರಕರಣ ದಾಖಲಿಸಲಾಗಿದೆ.

ದಂಡ ಸಂಗ್ರಹದಲ್ಲಿ ಇಳಿಕೆ

ದಂಡ ಸಂಗ್ರಹದಲ್ಲಿ ಇಳಿಕೆ

ವಿವಿಧ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 2018ರಲ್ಲಿ 82.74 ದಾಖಲಿಸಿ 81.3 ಕೋಟಿ ರೂ ದಂಡ ಸಂಗ್ರಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+