ಕೈದಿಗಳಿಂದ ತುಂಬಿ ತುಳುಕುತ್ತಿರುವ ಜೈಲುಗಳು: ಪಿಐಎಲ್‌ ದಾಖಲು

ಬೆಂಗಳೂರು, ಜೂನ್ 8: ರಾಜ್ಯದ ಕಾರಾಗೃಹಗಳಲ್ಲಿ ನಿಗದಿಗಿಂತ ಹೆಚ್ಚು ಸಂಖ್ಯೆ ಕೈದಿಗಳನ್ನು ಇರಿಸುವುದು ಹಾಗೂ ಅಗತ್ಯಕ್ಕಿಂತಲೂ ಕಡಿಮೆ ಸಿಬ್ಬಂದಿ ಇರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನ ರಿಜಿಸ್ಟ್ರಾರ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದಾರೆ.

ದೇಶದ ಕಾರಾಗೃಹಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಅವಿಹಾತವಾಗಿ ಆಗುತ್ತಿದ್ದು, ಈ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನ ಅನುಸಾರ ಹೈಕೋರ್ಟ್‌ನಲ್ಲಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ದೇಶದಲ್ಲಿ ಪ್ರತಿ ಕಾರಗೃಹದಲ್ಲಿ ಇಂತಿಷ್ಟೇ ಕೈದಿಗಳನ್ನು ಇರಿಸಬೇಕು ಹಾಗೂ ಜೈಲುಗಳ ನಿರ್ವಹಣೆಗೆ ಕನಿಷ್ಠ ಸಿಬ್ಬಂದಿ ಇರಿಸಬೇಕೆಂಬ ನಿರ್ದೇಶನದ ಅನುಸಾರ ದೇಶದ ಯಾವುದೇ ರಾಜ್ಯದಲ್ಲಿ ನಿಯಮಗಳ ಪಾಲನೆ ಆಗುತ್ತಿಲ್ಲ.

Access prisoners in Jail: PIL in High Court

ಈ ಹಿನ್ನೆಲೆಯಲ್ಲಿ ಜೈಲುಗಳಲ್ಲಿ ಕೈದಿಗಳ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಕೈದಿಗಳನ್ನು ಸರಿಯಾಗಿ ನಡೆಸುಕೊಳ್ಳುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿತ್ತು. ಈ ಕುರಿತು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗಕ್ಕೂ ದೂರು ಸಲ್ಲಿಸಲಾಗಿತ್ತು.

ದೇಶದಲ್ಲಿರುವ ಎಲ್ಲಾ ಜೈಲುಗಳ ಸಮಸ್ಯೆಯನ್ನು ಆಲಿಸಿರುವ ಸುಪ್ರೀಂಕೋರ್ಟ್ ಆಯಾ ರಾಜ್ಯಗಳ ಹೈಕೋರ್ಟ್‌ಗೆ ಆಯಾ ರಾಜ್ಯಗಳಲ್ಲಿನ ಜೈಲಿನ ಪರಿಸ್ಥಿತಿ ಕುರಿತ ಸುಧಾರಣೆ ಕುರಿತಂತೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+