ಮಗಳನ್ನು ಕೊಂದು ತಾಯಿ ಆತ್ಮಹತ್ಯೆ ಪ್ರಕರಣ: ಪತಿ ಬಂಧನ

ಬೆಂಗಳೂರು, ಆಗಸ್ಟ್ 7: ಮಗಳನ್ನು ಅಪಾರ್ಟ್‌ಮೆಂಟ್‌ನಿಂದ ನೂಕಿ ಕೊನೆಗೆ ಮಹಿಳೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪುಟ್ಟೇನಹಳ್ಳಿ ಪೊಲೀಸರು ಬುಧವಾರ ಆತನನ್ನು ಬಂಧಿಸಿದ್ದಾರೆ. ಪತಿ ಶೀಲ ಶಂಕಿಸಿ ತನಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಆಕೆ ವಿಡಿಯೋದಲ್ಲಿ ತಿಳಿಸಿದ್ದಳು.

ಆಗಸ್ಟ್ 4ರಂದು ಜ್ಯೋತಿ ತನ್ನ 7 ವರ್ಷದ ಮಗಳನ್ನು ಕೊಲೆ ಮಾಡಿ ನಂತರ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಾಡೆಲ್ ಆಗಿರುವ ಜ್ಯೋತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನವಿಡಿಯೋ ಮಾಡಿದ್ದಳು.

Abetting Suicide Of Wife Businessaman arrested

ಈ ವಿಡಿಯೋ ನೋಡಿದ ಜ್ಯೋತಿ ಸಹೋದರ ಪ್ರಶಾಂತ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಜ್ಯೋತಿಯ ಪತಿ ಪಂಕಜ್ ವಿರುದ್ಧ ದೂರು ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಭಾನುವಾರ ದಂಪತಿ ನಡುವೆ ತೀವ್ರ ಜಗಳವಾಗಿದೆ. ಈ ವೇಳೆ ನಿನ್ನಿಂದ ದೂರವಾಗುತ್ತಿದ್ದೇನೆ ಎಂದು ಪಂಕಜ್ ಹೇಳಿ ಮನೆಯಿಂದ ಹೊರಗೆ ಹೋಗಿದ್ದ, ಸೋಮವಾರ ಆತನ ಮೊಬೈಲ್ ಆಫ್ ಆಗಿತ್ತು. ಪದೇ ಪದೇ ಕರೆ ಮಾಡಿ ಸಂಪರ್ಕಿುವ ಪ್ರಯತ್ನ ಮಾಡಿರುವ ಜ್ಯೋತಿ ಕೊನೆಗೆ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+