ಏನ್ರೀ ಮೀಡಿಯಾ ಎಂದ ಎಬಿಡಿ; ದರ್ಶನ್ ಫ್ಯಾನ್ಸ್‌ ಫಿದಾ!

ರಾಯಲ್‌ ಚಾಲೆಂಜರ್ಸ್ ಬೆಂಗಳೂರಿನ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಇಬ್ಬರು ಕರ್ನಾಟಕದ ದತ್ತುಪುತ್ರರಂತೆ ಇದ್ದಾರೆ. ಇವರಿಬ್ಬರನ್ನು ಕನ್ನಡಿಗರು ಅಷ್ಟೊಂದು ಮೆಚ್ಚಿಕೊಂಡಿದ್ದಾರೆ. ಕನ್ನಡಿಗರ ಪ್ರೀತಿಯನ್ನು ಈ ಇಬ್ಬರು ಆಟಗಾರರು ಸಹ ಮರೆತಿಲ್ಲ. ಅವಕಾಶ ಸಿಕ್ಕಾಗೆಲ್ಲ ಕನ್ನಡದಲ್ಲಿ ಮಾತನಾಡುವ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ. ಇದರಲ್ಲಿ ಎಬಿಡಿ ಅವರು ಯಾವಾಗಲೂ ಒಂದು ಹೆಜ್ಜೆ ಮುಂದಿದ್ದಾರೆ. ಅವರು ನಟ ದರ್ಶನ್‌ನ ಈ ವಿಷಯದಲ್ಲಿ ಫಾಲೋ ಮಾಡಿದ್ದಾರೆ.

ಎಬಿಡಿ ಅವರು ದಕ್ಷಿಣ ಆಫ್ರಿಕಾ (ಸೌತ್‌ ಆಫ್ರಿಕಾ)ದ ಕ್ರಿಕೆಟ್‌ ತಂಡದ ಮೇರು ಆಟಗಾರ. ಆರ್‌ಸಿಬಿಗೆ ಆಡುವ ಮೂಲಕ ಬೆಂಗಳೂರು ಹಾಗೂ ಕರ್ನಾಟಕದ ಮನಸ್ಸಿಗೆ ಹತ್ತಿರವಾಗಿದ್ದಾರೆ. ಕೇವಲ ಅವರ ಆಟದ ಮೂಲಕ ಮಾತ್ರವಲ್ಲ. ಅವರು ಕನ್ನಡ ಮಾತನಾಡುವ ಮೂಲಕ ಹಾಗೂ ಕನ್ನಡದ ಡೈಲಾಗ್‌ಗಳನ್ನು ಹೇಳುವ ಮೂಲಕ ಫೇಮಸ್‌ ಆಗಿದ್ದಾರೆ. ಇದೀಗ ಮತ್ತೊಂದು ಫೇಮಸ್‌ ಕನ್ನಡದ ಡೈಲಾಗ್‌ ಹೇಳುವ ಮೂಲಕ ಕನ್ನಡಿಗರ ಮನಸ್ಸು ಗೆದಿದ್ದಾರೆ. ಇರೋ ಒಂದು ಹೃದಯನ ಎಷ್ಟು ಸಲ ಗೆಲ್ತೀರಿ ಎಬಿಡಿ ಅವರೇ ಎಂದು ಕನ್ನಡಿಗರು ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.

ABD followed by Darshan Darshan fans Fida

ದರ್ಶನ್ ಫಾಲೋ ಮಾಡಿದ ಎಬಿಡಿ: ನಟ ಹಾಗೂ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಬಳ್ಳಾರಿ ಜೈಲು ಸೇರಿರುವ ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಅವರನ್ನು ಎಬಿಡಿ ಅವರು ಫಾಲೋ ಮಾಡಿದ್ದಾರೆ. ಹೌದು ದರ್ಶನ್ ಜೈಲಿಗೆ ಹೋಗುವುದಕ್ಕಿಂತ ಮುಂಚೆ ಏನ್ರೀ ಮೀಡಿಯಾ ಎಂದು ಹೇಳಿದ್ದರು. ಮಾಧ್ಯಮಗಳನ್ನು ಬೈಯುವಾಗ ಬಳಸಿದ್ದ ಪದವಿದು. ಇದೀಗ ಎಬಿಡಿ ಅವರು ದರ್ಶನ್ ಹೇಳಿದ್ದ ಏನ್ರೀ ಮೀಡಿಯಾ ಎನ್ನುವ ಡೈಲಾಗ್‌ ಹೇಳಿದ್ದಾರೆ. ಈ ಡೈಲಾಗ್‌ ಕರ್ನಾಟಕದಲ್ಲಿ ಫೇಮಸ್‌ ಡೈಲಾಗ್‌ ಅಂತ ಹೇಳಿದ್ದಾರೆ.

ಎಬಿಡಿ ಅವರ ಬಾಯಿಯಿಂದ ಏನ್ರೀ ಮೀಡಿಯಾ ಎನ್ನುವ ಡೈಲಾಗ್‌ ಕೇಳಿರುವ ಅವರ ಅಭಿಮಾನಿಗಳು ಅದೇ ಡೈಲಾಗ್‌ನ ಕಾಮೆಂಟ್‌ಗಳ ಮೂಲಕ ರಿಪೀಟ್ ಮಾಡ್ತಿದ್ದಾರೆ. ಕನ್ನಡದಲ್ಲಿನ ಡೈಲಾಗ್‌ಗಳನ್ನು ಹೇಳಿ ಅದನ್ನು ಇಂಗ್ಲಿಷ್‌ಗೆ ಅನುವಾದ ಮಾಡಿ ಅದರ ಅರ್ಥವನ್ನು ಸಹ ವಿವರಿಸಿದ್ದಾರೆ. ಏನ್ರೀ ಮೀಡಿಯಾ ಅಂತ ಹೇಳಿ ಅದನ್ನು what is media ಅಂತಲೂ. ಕನ್ನಡದ ಇನ್ನೊಂದು ನಾಣ್ನುಡಿ ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಕಾಯಕವೇ ಕೈಲಾಸ ಎಂದರೆ Work is Worship ಎಂದು ಇಂಗ್ಲಿಷ್‌ನಲ್ಲಿ ವಿವರಿಸಿದ್ದಾರೆ. ಎಬಿಡಿ ಅವರು ಕನ್ನಡದಲ್ಲಿ ಮಾತನಾಡಿರುವುದರಿಂದ ಕನ್ನಡಿಗರು ಖುಷಿಯಾಗಿದ್ದರೆ, ದರ್ಶನ್‌ ಅಭಿಮಾನಿಗಳು ಇದರಿಂದ ಫಿದಾ ಆಗಿದ್ದಾರೆ.

ಕನ್ನಡದಲ್ಲೇ ಧನ್ಯವಾದ: ಎಬಿಡಿ ಅವರು ಐಸಿಸಿ ಹಾಲ್​ ಆಫ್ ಫೇಮ್ ಗೌರವ ಪಡೆದ ಹಿನ್ನೆಲೆಯಲ್ಲಿ ಆರ್​​ಸಿಬಿ ಸೋಷಿಯಲ್‌ ಮೀಡಿಯಾ ಖಾತೆಯಿಂದ ಅಭಿನಂದನಾ ಪೋಸ್ಟ್‌ ಹಂಚಿಕೊಂಡಿತ್ತು. ಈ ಪೋಸ್ಟ್‌ಗೆ ಎಬಿಡಿ ಅವರು ಕನ್ನಡದಲ್ಲೇ ರಿಪ್ಲೈ ಮಾಡಿದ್ದರು. ಇದಕ್ಕೂ ಕನ್ನಡಿಗರು ಮೆಚ್ಚುಗೆಯ ಸುರಿಮಳೆಯನ್ನೇ ಸುರಿಸಿದ್ದರು. ಇದಕ್ಕೂ ಮೊದಲು ಅವರು ಆರ್‌ಸಿಬಿ ಪರವಾಗಿ ಆಟವಾಡುವಾಗ ಈ ಸಲ ಕಪ್‌ ನಮ್ದೇ, ನಮಸ್ಕಾರ ಬೆಂಗಳೂರು, ನಮಸ್ಕಾರ ಕರ್ನಾಟಕ ಎಂದು ಕನ್ನಡದಲ್ಲೇ ಹೇಳಿದ್ದರು. ಅವರ ಮಗನಿಂದ ಈ ಸಲ ಕಮ್‌ ನಮ್ದೇ ಅಂತ ಹೇಳ್ಸಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+