ಟ್ವೀಟ್ಸ್: ಮೋದಿ ಹಾಗೂ ಗುಲಾಮರಿಗೆ ಶ್ರೀಸಾಮಾನ್ಯನ ಪೆಟ್ಟು
ರಾಜಧಾನಿ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಪ್ರಚಂಡ ಜಯಭೇರಿ ಬಾರಿಸಿದ ಆಮ್ ಆದ್ಮಿ ಪಾರ್ಟಿ (ಎಎಪಿ) ಆರ್ಭಟಕ್ಕೆ ಸಾಮಾಜಿಕ ಜಾಲ ತಾಣಗಳು ಒಮ್ಮೆ ಬೆಚ್ಚಿಬಿದ್ದಿದ್ದಂತೂ ಸತ್ಯ.
ಮಂಗಳವಾರ ಬೆಳಗ್ಗಿನಿಂದಲೇ ಚುನಾವಣೆಯ ಟ್ರೆಂಡಿಂಗ್, ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೆ ಬಿದ್ದ ಹೊಡೆತದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿತ್ತು. ಮಧ್ಯಾಹ್ನದ ವೇಳೆಗೆ ಎಎಪಿ ವಿಜಯೋತ್ಸವದ ಜೊತೆಗೆ ಹಾಸ್ಯದ ಹೊನಲು ಹರಿಸುವ ಟ್ವೀಟ್ ಗಳು ತುಂಬಿ ಕೊಂಡವು. ಇವುಗಳಲ್ಲಿ ಲೇಖಕ ಚೇತನ್ ಭಗತ್ ಟ್ವೀಟ್ಸ್ ಜನಪ್ರಿಯತೆ ಪಡೆದುಕೊಂಡಿತ್ತು.[ಆಪ್ ಗೆಲುವು : ಯಾವ ಪತ್ರಿಕೆಯ ಶೀರ್ಷಿಕೆ ಚೆನ್ನಾಗಿದೆ?]
70 ಸದಸ್ಯ ಬಲದ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಕಳೆದ 2013ರ ಚುನಾವಣೆಯಲ್ಲಿ 28 ಸ್ಥಾನ ಗಳಿಸಿತ್ತು, ಈ ಬಾರಿ 67 ಸ್ಥಾನ ಗಳಿಸಿದರೆ, ಬಿಜೆಪಿ 3 ಹಾಗೂ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ. [ಮಾರುತಿ 800ನಲ್ಲಿ ಐದು, ಬಿಜೆಪಿಗೆ ಮೂರು ಸೀಟು]
ಕೇಜ್ರಿವಾಲ್ ಕೈಗೆ ಪೊರಕೆ ಕೊಟ್ಟಿದ್ದೆ ತಪ್ಪಾಯ್ತು, ಪೊರಕೆಯನ್ನು ವ್ಯಾಕ್ಯೂಂ ಕ್ಲೀನರ್ ತರ ಪ್ರಯೋಗಿಸಿ ಬಿಜೆಪಿ ಕಾಂಗ್ರೆಸ್ ಗುಡಿಸಿ ಎಸೆದು ಬಿಟ್ಟಿದ್ದಾರೆ. ಭಾರತ ಶೂನ್ಯ ಕಂಡು ಹಿಡಿದಿದ್ದು ಎಂಬುದು ಸಾಬೀತುಪಡಿಸಲು ಕಾಂಗ್ರೆಸ್ ಈ ಬಾರಿ ಶೂನ್ಯಕ್ಕೆ ಮೊರೆ ಹೋಗಿದೆ. ಹೀಗೆ ಪುಂಖಾನು ಪುಂಖವಾಗಿ ಟ್ವೀಟ್ಸ್, ಕಾರ್ಟೂನ್ ಗಳು ಹರಿದಾಡಿದವು, ಇಂದು ಕೂಡಾ #aapsweep ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

ಶ್ರೀಸಾಮಾನ್ಯನ ಜೊತೆ ಆಮ್ ಆದ್ಮಿ
ದಿವಂಗತ ಕಾರ್ಟೂನಿಸ್ಟ್ ಆರ್ ಕೆ ಲಕ್ಷ್ಮಣ್ ಶ್ರೀಸಾಮಾನ್ಯನ ಜೊತೆ ಆಮ್ ಆದ್ಮಿ ಪೂರಕೆ ಗೆಲುವಿನ ಸಂಭ್ರಮದಲ್ಲಿರುವಂತೆ ಕಾರ್ಟೂನ್ ಬರೆದು ಕಳಿಸಿದ್ದಾರೆ ಶಂಕರ್.
|
ಮೋದಿ ಹಾಗೂ ಗುಲಾಮರಿಗೆ
ಮೋದಿ ಹಾಗೂ ಗುಲಾಮರಿಗೆ ದೆಹಲಿಯ ಶ್ರೀಸಾಮಾನ್ಯ ನೀಡಿದ ಪೆಟ್ಟು ಹೇಗಿದೆ? ನೋಡಿ
|
ಸ್ವಚ್ಛತಾ ಅಭಿಯಾನ ಕೇಜ್ರಿವಾಲ್
ಸ್ವಚ್ಛತಾ ಅಭಿಯಾನದ ನಿಜ ಅರ್ಥವನ್ನು ಮೋದಿಗೆ ತಿಳಿಸಿದ ಅರವಿಂದ್ ಕೇಜ್ರಿವಾಲ್
|
ಎಎಪಿ ಕ್ಲೀನ್ ಸ್ವೀಪ್ ಬಗ್ಗೆ ಅಮೂಲ್ ಟ್ವೀಟ್
ಎಎಪಿ ಕ್ಲೀನ್ ಸ್ವೀಪ್ ಬಗ್ಗೆ ಅಮೂಲ್ ಕಾರ್ಟೂನ್ ಪತ್ರಕರ್ತ ರಾಹುಲ್ ಕನ್ವಾಲ್ ಟ್ವೀಟ್ ಮಾಡಿದ್ದಾರೆ.
|
ಶೂನ್ಯ್ತ ಭಾರತದ ಕೊಡುಗೆ
ಶೂನ್ಯ ಭಾರತದ ಕೊಡುಗೆ ಎಂಬುದನ್ನು ಬಿಗ್ ಮಾಕೆನ್ ಇಂಡಿಯಾ ಪ್ರಾಜೆಕ್ಟ್ ನೋಡಿ
|
ಎಎಪಿಗೆ ಕಾಂಗ್ರೆಸ್ ಬಾಹ್ಯ ಬೆಂಬಲ
ಎಎಪಿಗೆ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡುತ್ತಿದೆಯಂತೆ ಗೊತ್ತಾ?!
|
3 ಸೀಟು ಗೆದ್ದಿರುವ ಬಿಜೆಪಿ ಬಗ್ಗೆ ಚೇತನ್
3 ಸೀಟು ಗೆದ್ದಿರುವ ಬಿಜೆಪಿ ಬಗ್ಗೆ ಚೇತನ್ ಭಗತ್ ಮಾಡಿದ್ದು ಹೀಗೆ.. ಸರಣಿ ಟ್ವೀಟ್ ಮೂಲಕ ದೆಹಲಿ ಫಲಿತಾಂಶದ ಬಗ್ಗೆ ಚೇತನ್ ಭಗತ್ ವಿಶ್ಲೇಷಣೆ ಮಾಡುತ್ತಿದ್ದರು.
|
ಇನ್ನೋವಾ ಕಾರು ಜೋಕ್ ಚೇತನ್ ಟ್ವೀಟ್
ಇನ್ನೋವಾ ಕಾರು ಜೋಕ್ ಮೊದಲಿಗೆ ಟ್ವೀಟ್ ಮಾಡಿದ್ದು ಲೇಖಕ ಚೇತನ್ ಭಗತ್
— MOHD MUSTAFA IPS (@MohdMustafaips) February 10, 2015 |
ವ್ಯಾಕ್ಯೂಂ ಕ್ಲೀನರ್ ಬಳಸಿದ ಕೇಜ್ರಿ
ಪೂರಕೆ ಬಳಸು ಎಂದರೆ ವ್ಯಾಕ್ಯೂಂ ಕ್ಲೀನರ್ ಬಳಸಿದ ಕೇಜ್ರಿವಾಲ್
|
ಅರವಿಂದ್ ಕೇಜ್ರಿವಾಲಗೆ ಈಗ ಕಿರಣ್ ಹೇಳುವ ಹಾಡು?
ಅರವಿಂದ್ ಕೇಜ್ರಿವಾಲಗೆ ಈಗ ಕಿರಣ್ ಹೇಳುವ ಹಾಡು ಯಾವುದಿರಬಹುದು?












Click it and Unblock the Notifications