ಆಪ್ ಗೆಲುವು : ಯಾವ ಪತ್ರಿಕೆಯ ಶೀರ್ಷಿಕೆ ಚೆನ್ನಾಗಿದೆ?
ಬೆಂಗಳೂರು, ಫೆ. 11 : 2015ರ ಆರಂಭದಲ್ಲೇ ಎದುರಾಗಿದ್ದ ರಾಷ್ಟ್ರ ರಾಜಧಾನಿ ದೆಹಲಿಯ ಚುನಾವಣೆ ಹಲವಾರು ಕಾರಣಗಳಿಂದಾಗಿ ಕುತೂಹಲ ಕೆರಳಿಸಿತ್ತು. ಮಂಗಳವಾರ ಫಲಿತಾಂಶ ಹೊರಬಿದಿದ್ದು, ರಾಷ್ಟ್ರೀಯ ಪಕ್ಷಗಳನ್ನು ಧೂಳೀಪಟ ಮಾಡಿರುವ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೇರಲಿದೆ. ಅರವಿಂದ್ ಕೇಜ್ರಿವಾಲ್ ದೆಹಲಿಯ ಸಿಎಂ ಆಗಿಲಿದ್ದಾರೆ.
ಕನ್ನಡದ ದಿನ ಪ್ರತಿಕೆಗಳು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಅಭೂತಪೂರ್ವ ಗೆಲುವಿನ ಸುದ್ದಿಯನ್ನು ವಿಶ್ಲೇಷಣಾತ್ಮಕವಾಗಿ ಪ್ರಕಟಿಸಿವೆ. ವಿಶಿಷ್ಟವಾದ ಹೆಡ್‌ಲೈನ್‌ಗಳನ್ನು ಕೊಡುವ ಮೂಲಕ ಓದುಗರನ್ನು ಆಕರ್ಷಿಸಿವೆ. ಉದಯವಾಣಿ ದಿನ ಪತ್ರಿಕೆ ಮಂಗಳೂರು ಮತ್ತು ಬೆಂಗಳೂರು ಆವೃತ್ತಿಗೆ ಬೇರೆ-ಬೇರೆ ಹೆಡ್‌ಲೈನ್ ನೀಡಿ ಗಮನಸೆಳೆದಿದೆ. [ಚಿತ್ರಗಳಲ್ಲಿ: ನೆಲಕಚ್ಚಿದ ಕಮಲ, ಎಎಪಿಗೆ ಅಭೂತಪೂರ್ವ ಜಯ]
ವಿಜಯ ಕರ್ನಾಟಕ ದಿನಪತ್ರಿಕೆ ಕೆಲವು ದಿನಗಳ ಹಿಂದೆ ಮೃತಪಟ್ಟ ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರು ಕೇಜ್ರಿವಾಲ್ ಜೊತೆಗಿರುವ ಕಾಲ್ಪನಿಕ ಚಿತ್ರವನ್ನು ಮುಖಪುಟದಲ್ಲಿ ಹಾಕಿ, ಇದು ಜನ ಸಾಮಾನ್ಯರ ಗೆಲುವು ಎಂದು ಬಣ್ಣಿಸಿದೆ. ಮಂಗಳವಾರ ಪೂರ್ತಿ ದೆಹಲಿಯಲ್ಲಿ ಕೇಳಿಬರುತ್ತಿದ್ದ 'ಪಾಂಚ್ ಸಾಲ್ ಕೇಜ್ರಿವಾಲ್' ಘೋಷಣೆ ವಿಜಯವಾಣಿ ಪತ್ರಿಕೆಯ ಮುಖಪುಟದಲ್ಲಿ ಗಮನಸೆಳೆಯುತ್ತಿದೆ. ಕನ್ನಡದ ದಿನಪತ್ರಿಕೆಗಳ ಹೆಡ್‌ಲೈನ್ ನೋಡೋಣ ಬನ್ನಿ.

ಆಪ್ ರೇ ಆಪ್ ಎಂದ ಉದಯವಾಣಿ
ಉದಯವಾಣಿ ಬೆಂಗಳೂರು ಆವೃತ್ತಿಯಲ್ಲಿ ಆಪ್ ರೇ ಆಪ್ ಎಂಬ ಹೆಡ್ ಲೈನ್ ಕೊಟ್ಟಿದೆ. ಮಂಗಳೂರು ಆವೃತ್ತಿಗೆ ಮತ್ತೊಂದು ಹೆಡ್ ಲೈನ್ ಕೊಟ್ಟು ಗಮನಸೆಳೆದಿದೆ.

ಆಡು ಆನೆಯ ನುಂಗಿತ್ತಾ!
ವಿಜಯ ಕರ್ನಾಟಕ ಆಡು ಆನೆಯ ನುಂಗಿತ್ತಾ! ಎಂಬ ಹೆಡ್‌ಲೈನ್ ನೀಡಿದೆ. ಕೆಲವು ದಿನಗಳ ಹಿಂದೆ ಮೃತಪಟ್ಟ ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರು ಕೇಜ್ರಿವಾಲ್ ಜೊತೆಗಿರುವ ಕಲ್ಪನೆಯ ಚಿತ್ರವನ್ನು ಮುಖಪುಟದಲ್ಲಿ ಹಾಕಿ, ಇದು ಜನ ಸಾಮಾನ್ಯರ ಗೆಲುವು ಎಂದು ಬಣ್ಣಿಸಿದೆ.

ದಿಲ್ಲಿಯಲ್ಲಿ ಕೇಜ್ರಿ ಸುನಾಮಿ
ಉದಯವಾಣಿ ಮಂಗಳೂರು ಆವೃತ್ತಿಗೆ ದಿಲ್ಲಿಯಲ್ಲಿ ಕೇಜ್ರಿ ಸುನಾಮಿ ಎಂಬ ಹೆಡ್‌ಲೈನ್ ನೀಡಿದೆ.

'ಪಾಂಚ್ ಸಾಲ್ ಕೇಜ್ರಿವಾಲ್'
ಮಂಗಳವಾರ ದೆಹಲಿಯಲ್ಲಿ ಆಪ್ ಕಾರ್ಯಕರ್ತರು 'ಪಾಂಚ್ ಸಾಲ್ ಕೇಜ್ರಿವಾಲ್' ಎಂಬ ಘೋಷಣೆ ಕೂಗುತ್ತಿದ್ದರು. ವಿಜಯವಾಣಿ ಮುಖಪುಟದಲ್ಲಿ ಇದೇ ಘೋಷಣೆಯಲ್ಲಿ ಹೆಡ್‌ಲೈನ್ ಆಗಿ ಬಳಸಿಕೊಂಡಿದೆ.

ಬಿಜೆಪಿಗೆ ಆಪ್ ಘಾತ
ದೆಹಲಿ ಚುನಾವಣೆಯಲ್ಲಿ ಕೇವಲ ಮೂರು ಸೀಟು ಪಡೆದಿರುವ ಬಿಜೆಪಿಗೆ ಆಪ್ ಆಘಾತ ನೀಡಿದೆ ಎಂಬ ಕಲ್ಪನೆಯಂತೆ ಕನ್ನಡ ಪ್ರಭ 'ಆಪ್ ಘಾತ' ಎಂಬ ಹೆಡ್‌ಲೈನ್ ನೀಡಿದೆ. ಮುಖಪುಟದಲ್ಲಿನ ಕೇಜ್ರಿವಾಲ್ ಫೋಟೋ ರಜನಿಕಾಂತ್ ಸಿನಿಮಾ ಲಿಂಗಾ ನೆನೆಪುಮಾಡಿಕೊಡುತ್ತಿದೆ.

ಆಮ್ ಆದ್ಮಿ ದಿಗ್ವಿಜಯ
ಪ್ರಜಾವಾಣಿ ಪತ್ರಿಕೆ 'ಆಮ್ ಆದ್ಮಿ' ದಿಗ್ವಿಜಯ ಎಂಬ ಶೀರ್ಷಿಕೆ ಕೊಟ್ಟು ದೆಹಲಿಯಲ್ಲಿ ಆಪ್ ಗೆಲುವಿನ ಸುದ್ದಿಯನ್ನು ಪ್ರಕಟಿಸಿದೆ.

ದಿಲ್ಲಿ : ಆಪ್ ಭರ್ಜರಿ ಜಯ
ಹೊಸದಿಗಂತ ಪತ್ರಿಕೆ ದಿಲ್ಲಿ : ಆಪ್ ಭರ್ಜರಿ ಜಯ ಎಂಬ ಹೆಡ್‌ಲೈನ್ ಅನ್ನು ಕೊಟ್ಟಿದೆ.

ದೆಹಲಿ ಗುಡಿಸಿದ ಕೇಜ್ರಿವಾಲ್
ಸಂಯುಕ್ತ ಕರ್ನಾಟಕ 'ದೆಹಲಿ ಗುಡಿಸಿದ ಕೇಜ್ರಿವಾಲ್' ಎಂಬ ಹೆಡ್‌ಲೈನ್ ನೀಡಿದ್ದು, ಆಪ್ ಪಕ್ಷದ ಗುರುತು ಪೊರಕೆಯನ್ನು ಹೆಡ್‌ಲೈನ್‌ನಲ್ಲಿ ಬಳಸಿದೆ.

ಆಮ್ ಆದ್ಮಿ ಸುನಾಮಿ
ದೆಹಲಿಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಧೂಳೀಪಟ ಮಾಡಿರುವ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೇರಲಿದೆ. ಇದನ್ನು ವಾರ್ತಾಭಾರತಿ ಪತ್ರಿಕೆ 'ಆಮ್ ಆದ್ಮಿ ಸುನಾಮಿ' ಎಂದು ಬಣ್ಣಿಸಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications