Bengaluru Girl Video: ನಡು ರಸ್ತೆಯಲ್ಲಿ ಬೆತ್ತಲೆ ಓಡಾಡಿದ ಮಹಿಳೆ: ಸಂಸ್ಕೃತಿಯ ಕಳವಳ
ಬೆಂಗಳೂರು, ಮೇ 04: ಬೆಂಗಳೂರಿನಲ್ಲಿ ಸಾರ್ವಜನಿಕರು ಕಣ್ತುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಡ ಹಗಲೇ ಯುವತಿಯೊಬ್ಬಳು ಬೆತ್ತಲೆಯಾಗಿ ಓಡಾಡಿದ ಘಟನೆ HSR ಬಡಾವಣೆಯಲ್ಲಿ ನಡೆದಿದೆ. ಸಂಸ್ಕೃತಿ, ಸಭ್ಯತೆಗೆ, ಗೌರವಕ್ಕೆ ಸೂಚಕವಾಗಿರುವ ಹೆಣ್ಣುಮಕ್ಕಳೇ ಈ ರೀತಿ ಮಾಡಿದರೆ ಹೇಗೆ ಎಂಬ ಕಳವಳ ಸಾರ್ವಜನಿಕರಲ್ಲಿ ಉಂಟು ಮಾಡಿದೆ. ಐಟಿ ಕೇಂದ್ರ, ಗಾರ್ಡನ್ ಸಿಟಿ ಎಂಬೆಲ್ಲ ಹೆಸರು ಮಾಡಿದ್ದ ಬೆಂಗಳೂರಿಗೆ ಇಂತಹ ಘಟನೆಗಳು ಕಳಂಕ ತರುತ್ತಿವೆ.
ಯುವತಿಯೊಬ್ಬಳು ನಗ್ನಳಾಗಿ HSR ಲೇಔಟ್‌ನಲ್ಲಿ ನಡು ರಸ್ತೆಯಲ್ಲಿ ಯಾವ ಅಂಜಿಕೆ, ಅಳುಕಿಲ್ಲದೇ ಓಡಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಾರ್ವಜನಿಕರು ಇದು ಬೆಂಗಳೂರೇನಾ? ಮಹಿಳೆ ವರ್ತನೆ ಇಷ್ಟು ಮಿತಿ ಮೀರಿದೆಯಾ? ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ. ವಿಡಿಯೋವನ್ನು @karnatakaportf ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಬೆಂಗಳೂರಲ್ಲಿ ಆಘಾತಕಾರಿ, ಅಸಹ್ಯ ಘಟನೆ..ಕ್ರಮಕ್ಕ ಒತ್ತಾಯ
ಜನರು ಓಡಾಡುವ ರಸ್ತೆಯಲ್ಲಿ ಹೀಗೆ ಯುವತಿ ಬೆತ್ತಲೆಯಾಗಿ ಸಂಚರಿಸಿ ಆಘಾತಕಾರಿ ವಿಡಿಯೋಗೆ ಸಾರ್ವಜನಿಕವಾಗಿ ಕಳವಳ ವ್ಯಕ್ತವಾಗಿದೆ. ಸಾರ್ವಜನಿಕ ಸಭ್ಯತೆಯ ಎಲ್ಲೆ ಮೀರಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಬೆಂಗಳೂರಿನ ಹೆಸರಿಗೆ ಮಸಿ ಬಳಿಯಲಾಗುತ್ತಿದೆ. ಸಂಸ್ಕೃತಿ, ಶ್ರೀಮಂತಿಕೆ, ಉತ್ತಮ ಮೌಲ್ಯಗಳು ಹಾಗೂ ಶ್ರೀಮಂತ ಇತಿಹಾಸ ಇರುವ ಬೆಂಗಳೂರು ಇಂತಹ ಅಸಹ್ಯಕರ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಈ ಯುವತಿ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಸ್ಥಳಿಯರು ಸಹ ಸುಮ್ಮನಿರಬಾರದು ಎಂಬ ಆಗ್ರಹ ಜೋರಾಗಿದೆ.
ಯುವತಿಯ ಈ ಅಘಾತಕಾರಿ ಮತ್ತು ಖಂಡನೀಯ ನಡೆ ಬಗ್ಗೆ ಬಿಬಿಎಂಪಿ ಮತ್ತು ಪೊಲೀಸರಿಂದ ತ್ವರಿತ ಪ್ರತಿಕ್ರಿಯೆ ನಿರೀಕ್ಷೆ ಹುಸಿಯಾಗಿದೆ. ಇದು ನಾಗರಿಕರ ಕೋಪಕ್ಕೆ ಕಾರಣವಾಗಿದೆ. ಸೂಕ್ತ ಕ್ರಮ ಜರುಗಿಸಿ ನಗರದ ಸಾಂಸ್ಕೃತಿಕ ಸಮಗ್ರತೆ, ಮೌಲ್ಯ ಕಾಪಾಡಿಕೊಳ್ಳಬೇಕಿದೆ. ಮೌಲ್ಯ ಕುಸಿಯಲು ಬಿಡದಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಎಚ್‌ಎಸ್‌ಆರ್ ಬಡಾವಣೆಯಲ್ಲಿ ಪಿಜಿಗಳು ಹೆಚ್ಚಿವೆ. ಈ ಅಲ್ಲಿಯವಳಿರಬೇಕೆಂದು ಊಹಿಸಲಾಗಿದೆ. ಆಕೆಯ ವರ್ತನೆ ಬಗ್ಗೆ ಪ್ರಶ್ನೆ ಮಾಡಿದವರೊಂದಿಗೂ ಆಕೆ ರೇಗಾಡಿದ್ದಾಳೆ ಎಂದು ತಿಳಿದು ಬಂದಿದೆ..
ಅನಧಿಕೃತ ಪಿಜಿಗಳ ಪರಿಶೀಲನೆ
ಎಚ್‌ಎಸ್‌ಆರ್ ಬಡಾವಣೆಯಲ್ಲಿ ರಸ್ತೆಯಲ್ಲಿ ನಗ್ನವಾಗಿ ಓಡಾಡಿದ ಮಹಿಳೆ ಕುರಿತು ಗೃಹ ಸಚಿವ ಜಿ.ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಅನಧಿಕೃತ ಪಿಜಿಗಳ ವಿರುದ್ಧ ಕಾರ್ಯಾಚರಣೆಗೆ ಸೂಚಿಸಿದ್ದೇನೆ. ಅನಧಿಕೃತ ಪಿಜಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಯಾವುದೇ ಇದ್ದರೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ನಗ್ನವಾಗಿ ಓಡಾಡಿದ ಈ ಮಹಿಳೆ ಎಚ್‌ಎಸ್‌ಆರ್ ಬಡಾವಣೆಯಲ್ಲಿ ಪಿಜಿ ಯಲ್ಲಿ ಇದ್ದರು ಎನ್ನಲಾಗಿದೆ. ಆಕೆ ಕರ್ನಾಟಕದವಳು ಹೌದೋ, ಅಲ್ಲವೋ ಎಂಬುದರ ಮಾಹಿತಿ ಸಿಗಬೇಕಿದೆ. ಈ ಭಾಗದಲ್ಲಿ ಅನೇಕ ಪಿಜಿಗಳು ಇದ್ದು, ಇಲ್ಲಿ ಕರ್ನಾಟಕ ಮಾತ್ರವಲ್ಲದೇ, ಉತ್ತರ ಭಾರತ ಬೇರೆ ಬೇರೆ ರಾಜ್ಯಗಳ ಯುವತಿಯರು ವಾಸವಿದ್ದಾರೆ. ಯಾರೇ ಆದರೂ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ವರ್ತಿಸುವುದು ಖಂಡನೀಯ. ಬಿಬಿಎಂಪಿ, ಸರ್ಕಾರ, ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕು ಎಂಬ ಆಗ್ರಹವು ಜೋರಾಗಿದೆ.
ಈ ಯುವತಿ ನಗ್ನ ಸಂಚಾರದ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕೆ ಇದ್ದ ಪಿಜಿ ಅಕ್ಕ ಪಕ್ಕದ ನಿವಾಸಿಗಳು ಗರಂ ಆಗಿದ್ದಾರೆ. ಸರ್ಕಾರ ಅಕ್ರಮ ಪಿಜಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೇ ಪಿಜಿ ಹುಡುಗರು ತಡರಾತ್ರಿವರೆಗು ಶಬ್ದ ಮಾಡಿ ತೊಂದರೆ ಕೊಡುತ್ತಾರೆ. ಎಲ್ಲೆಂದರಲ್ಲಿ ನಿಂತು ಅಸಭ್ಯವಾಗಿ ವರ್ತಿಸುವುದು ಕಳೆದೊಂದು ವರ್ಷದಿಂದ ಹೆಚ್ಚಾಗಿದೆ. ಈಗಾಗಲೇ ಈ ಬಗ್ಗೆ ದೂರು ನೀಡಿದ್ದೇವೆ. ಆದರೆ ಪೊಲೀಸರು, ಸರ್ಕಾರ, ಬಿಬಿಎಂಪಿ ಯಾರೊಬ್ಬರು ನಮ್ಮ ಸಹಾಯಕ್ಕೆ ಬಂದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.












Click it and Unblock the Notifications