ಬೆಂಗಳೂರಲ್ಲಿ ಪೊಲೀಸರ ಶರ್ಟ್ ಎಳೆದಾಡಿ ಹಲ್ಲೆಗೆ ಯತ್ನಿಸಿದ ಮಹಿಳೆ! ವಿಡಿಯೋ ವೈರಲ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಪರಭಾಷಿಕರ ವರ್ತನೆ ಮಿತಿಮೀರುತ್ತಿದೆ ಎನ್ನುವ ಆರೋಪ ಹೆಚ್ಚಾಗಿ ಕೇಳಿಬರುತ್ತಿದೆ. ಇಂದು ಕೂಡ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಭಾರಿ ರಂಪಾಟ ಮಾಡಿದ್ದಾರೆ ಎನ್ನುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಅನ್ಯಭಾಷಿಕ ಮಹಿಳೆಯೊಬ್ಬರು ಟ್ರಾಫಿಕ್ ಪೊಲೀಸರೊಂದಿಗೆ ರಸ್ತೆಯಲ್ಲೇ ಕಿರಿಕ್ ಮಾಡಿಕೊಂಡಿದ್ದಾರೆ. ಯಾವ ವಿಚಾರಕ್ಕೆ ಮಹಿಳೆ ಈ ರೀತಿ ರಂಪಾಟ ಮಾಡಿದ್ದಾರೆ ಎಂದು ತಿಳಿದುಬಂದಿಲ್ಲ. ಈ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ ಎನ್ನಲಾಗಿದೆ.

ಇನ್ನು ಮಹಿಳೆ ತನ್ನ ಭಾಷೆಯಲ್ಲೇ ಜೋರಾಗಿ ಕಿರುಚಾಡಿ ಪೊಲೀಸರ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ ಎನ್ನಲಾಗಿದೆ. ವಿಡಿಯೋದಲ್ಲಿ ಮಹಿಳೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ಶರ್ಟ್ ಅನ್ನು ಸಾರ್ವಜನಿಕವಾಗಿ ಎಳೆದಾಡಿದ್ದಾರೆ. ಅಲ್ಲದೆ ಟ್ರಾಫಿಕ್ ಪೊಲೀಸ್ ಧರಿಸಿದ್ದ ಬಾಡಿವೋರ್ನ್ ಕ್ಯಾಮೆರಾಗೂ ಕೈಹಾಕಿ ಜೋರಾಗಿ ಎಳೆದಿದ್ದಾರೆ.
Woman Assaults a Traffic Police in Bengaluru.
— ShoneeKapoor (@ShoneeKapoor) October 25, 2024
Aggressive and shouting is the sign of low intelligence.pic.twitter.com/yoKy6mGIKV
ಇಷ್ಟಾದರೂ ಪೊಲೀಸರು ಗಪ್‌ಚುಪ್ ಎನ್ನದೆ ಸುಮ್ಮನೆ ನಿಂತಿದ್ದಾರೆ. ಆ ಮಹಿಳೆ ತನ್ನ ಕಾಲಿನಿಂದಲೂ ಪೊಲೀಸರಿಗೆ ಒದ್ದಿರುವಂತೆ ವಿಡಿಯೋದಲ್ಲಿದೆ. ಕೊನೆಗೆ ಪೊಲೀಸರ ಮೇಲೆ ದಾಳಿ ಮಾಡುವಂತೆ ಮಹಿಳೆ ಜೋರು ಧ್ವನಿಯಲ್ಲೇ ನಿಂದಿಸಿದ್ದಾರೆ.
ಈ ಘಟನೆಯಿಂದ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಕೂಡ ಆಗಿ, ವಾಹನ ಸಂಚಾರಕ್ಕೆ ಅಡ್ಡಿ ಮಾಡಿದ್ದಾರೆ. ಮತ್ತೊಂದೆಡೆ ಈ ವಿಡಿಯೋ ವೈರಲ್ ಆಗಿದ್ದು, ಈಕೆಯ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.
ಎಲ್ಲಿಂದಲೋ ಬಂದವರು ಈಗ ಪೊಲೀಸರ ಮೇಲೂ ದಾಳಿ ಮಾಡುವ ಮಟ್ಟಿಗೆ ಬೆಳೆದಿದ್ದಾರೆ. ಇವರಿಗೆ ಇಷ್ಟು ಧೈರ್ಯ ಕೊಟ್ಟಿರುವುದು ನಾವೇ ಎಂದೂ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು, ಭಾಷಾ ವಿಚಾರವಾಗಿ ನಮ್ಮ ಮೇಲೆ ಎಗರಾಡಿದಾಗಲೂ ಪೊಲೀಸರು ನ್ಯಾಯ ಕೊಡಿಸುವುದಿಲ್ಲ. ಕನಿಷ್ಠ ಪಕ್ಷ ಪೊಲೀಸರ ಮೇಲೆ ದಾಳಿಯಾದಾಗಲೂ ಕ್ರಮ ತೆಗೆದುಕೊಳ್ಳುವುದಿಲ್ಲಾ ಎಂದು ಪೊಲೀಸ್ ಇಲಾಖೆ ಪ್ರಶ್ನೆ ಮುಂದಿಟ್ಟಿದ್ದಾರೆ.
ಇನ್ನೂ ಕೆಲವರು ಈಕೆ ಇಷ್ಟೆಲ್ಲ ಪೊಗರಿನಿಂದ ಮಾತನಾಡುತ್ತಿದ್ದಾಳೆ ಅಂದ್ರೆ, ಕಂಡಿತವಾಗಿಯೂ ಬಿಮಾರು ರಾಜ್ಯದವಳೇ ಆಗಿರಬೇಕು. ಪೊಲೀಸರು ಕನ್ನಡಿಗರು ತಪ್ಪು ಮಾಡಿದಾಗ ಮಾತ್ರವೇ ತಕ್ಷಣ ಕ್ರಮ ಕೈಗೊಂಡು ಬೆನ್ನು ತಟ್ಟಿಕೊಳ್ತಾರೆ. ಬೇರೆ ರಾಜ್ಯದವರು ಏನು ಮಾಡಿದರೂ ಕ್ರಮ ತೆಗೆದುಕೊಳ್ಳಲ್ಲ ಬಿಡಿ..ಎಂದೂ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇನ್ನೂ ಕೆಲವರು ತಾಕತ್ತಿದ್ರೆ, ಧಮ್ ಇದ್ರೆ ಇಂತಹವರ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಸವಾಲು ಕೂಡ ಹಾಕಿದ್ದಾರೆ. ಆದರೆ, ಈ ಘಟನೆಯ ಹಿನ್ನೆಲೆ ಏನು ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ವಿಡಿಯೋದಲ್ಲಿ ಕಂಡುಬರುವಂತೆ ಆ ಮಹಿಳೆ ಸ್ಕೂಟರ್‌ನಲ್ಲಿ ಬಂದಿದ್ದು, ಯಾವುದೇ ಹೆಲ್ಮೆಟ್ ಧರಿಸಿದಂತಿಲ್ಲ. ಇದೇ ಕಾರಣಕ್ಕೆ ಪೊಲೀಸರು ಅವರನ್ನು ತಡೆದು, ವಿಚಾರಿಸಿರಬಹುದು. ಇದಕ್ಕೆ ಸಿಟ್ಟಾಗಿ ಮಹಿಳೆ ಆ ರೀತಿ ವರ್ತಿಸಿರಬಹುದು ಎಂದು ಹೇಳಲಾಗುತ್ತಿದೆ.
ರೂಲ್ಸ್ ಬ್ರೇಕ್ ವಿಚಾರಕ್ಕೆ ಮಹಿಳೆ ಈ ರೀತಿ ರಂಪಾಟ ಮಾಡಿರಬಹುದು. ಆದರೂ, ತಪ್ಪು ಕೆಲಸ ಮಾಡಿ ಪೊಲೀಸರ ಶರ್ಟ್ ಎಳೆದಾಡುವುದೇನಿತ್ತು? ಎಂಬುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications