ಫ್ರೆಂಡ್‌ ಅಂತ ಮೊಬೈಲ್‌ ಕೊಟ್ಟಿದ್ದಕ್ಕೆ ಮಹಿಳೆಗೆ ಆಗಬಾರದ್ದೇ ಆಯ್ತು!

ಈ ಕಾಲದಲ್ಲಿ ಯಾರನ್ನೂ ನಂಬಬಾರದು ಎನ್ನುವ ಮಾತಿದೆ. ಇದಕ್ಕೆ ಹಲವು ನಿದರ್ಶನಗಳು ಕೂಡ ನಮ್ಮ ಮುಂದಿವೆ. ಇನ್ನು ಈ ತಾಂತ್ರಿಕ ಯುಗದಲ್ಲಂತೂ ನಮಗರಿವಿಲ್ಲದೆಯೇ ನಾವು ಮೋಸ ಹೋಗುವುದೇನೂ ಕಡಿಮೆ ಇಲ್ಲ. ಬೆಂಗಳೂರಿನಲ್ಲೂ ಇಂತದ್ದೇ ಒಂದು ಅಮಾನುಷ ಘಟನೆ ನಡೆದಿದೆ. ಸ್ನೇಹಿತನೊಬ್ಬ ಮಹಿಳೆಗೆ ಮಾಡಬಾರದ್ದು ಮಾಡಿ ನಂಬಿಕೆ ದ್ರೋಹಿಯಾಗಿದ್ದಾನೆ.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ತನ್ನ ಸಹೋದ್ಯೋಗಿ ಮೂಲಕ ಸಂಜಯ್‌ ಎಂಬಾತನ ಪರಿಚಯ ಮಾಡಿಕೊಂಡಿದ್ದರು. ಎಲ್ಲರೂ ಸ್ನೇಹದಿಂದ ಒಟ್ಟಿಗೆ ಓಡಾಡುತ್ತಿದ್ದರು. ಆದರೆ ಮಹಿಳೆ ಸಂಜಯ್‌ಗೆ ಮೊಬೈಲ್‌ ನೀಡಿ ತನಗೆ ಅರಿವಿಲ್ಲದೆ, ವಂಚನೆಯ ಜಾಲಕ್ಕೆ ಸಿಲುಕಿದ್ದಾರೆ. ಕೊನೆಗೆ ಮೊಬೈಲ್‌ ಕೊಟ್ಟಿದ ತಪ್ಪಿಗೆ ಮಾನ ಕಳೆದುಕೊಳ್ಳಬೇಕಾದ ಪರಿಸ್ಥಿತಿಯೂ ಅವರಿಗೆ ಎದುರಾಗಿದೆ.

A Woman From Bengaluru Was Blackmailed By A Friend After Making A Video

ಇಷ್ಟಕ್ಕೂ ಆಗಿದ್ದೇನು ಅಂದ್ರೆ...ಮಹಿಳೆಯು ಎಂದಿನಂತೆ ತನ್ನ ಮೊಬೈಲ್‌ ಬಳಸುತ್ತಿದ್ದಾರೆ. ಆದರೆ, ತನ್ನ ಮೊಬೈಲ್‌ನಲ್ಲಿ ತನಗೇ ಅರಿವಿಲ್ಲದಂತೆ ತನ್ನದೇ ಬೆತ್ತಲೆ ವಿಡಿಯೋ ಕಂಡು ಬೆಚ್ಚಿಬಿದ್ದಿದ್ದಾರೆ. ಇದನ್ನು ಅವರಂತೂ ರೆಕಾರ್ಡ್‌ ಮಾಡಿದ್ದಲ್ಲ ಎಂದು ಅವರಿಗೆ ವಿಶ್ವಾಸವಿತ್ತು. ಹಾಗಾದರೆ, ಈ ಬೆತ್ತಲೆ ವಿಡಿಯೋ ರೆಕಾರ್ಡ್‌ ಆಗಲು ಹೇಗೆ ಸಾಧ್ಯ? ಎಂದು ಯೋಚಿಸಿದಾಗ ಇದರ ಹಿಂದೆ ತನ್ನ ಸ್ನೇಹಿತನ ಕೈವಾಡ ಇರುವುದು ಬೆಳಕಿಗೆ ಬಂದಿದೆ.

ಈ ಘಟನೆ ನಡೆದಿರುವುದು ಬೆಂಗಳೂರಿನ ಆರ್‌.ಆರ್‌.ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಎನ್ನಲಾಗಿದೆ. ಸಂಜಯ್‌ ಎಂಬಾತ ಮಹಿಳೆಯ ಸ್ನೇಹಿತ ಎಂದು ತಿಳಿದುಬಂದಿದೆ. ಈತ ಮಹಿಳೆಯೊಂದಿಗೆ ಸ್ನೇಹದಿಂದ ಇದ್ದುಕೊಂಡೇ ಅವರ ಮೊಬೈಲ್‌ ಪಡೆದಿದ್ದ. ಈ ವೇಳೆ ಮೊಬೈಲ್‌ಗೆ ಯಾವುದೇ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿದ್ದ. ಇದು ಮಹಿಳೆಯ ಗಮನಕ್ಕೆ ಬಂದಿರಲಿಲ್ಲ.

ಒಮ್ಮೆ ಮಹಿಳೆ ಸ್ನಾನಕ್ಕೆ ಹೋಗಿದ್ದಾಗ ಯಾವುದಾದರೂ ಕರೆ ಬರಬಹುದು ಎಂದು ಮೊಬೈಲ್‌ ಅನ್ನು ಬಾತ್‌ರೂಂ ಒಳಗೆ ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಮೊಬೈಲ್‌ ಅಲ್ಲಿಟ್ಟು ಮಹಿಳೆ ಎಂದಿನಂತೆ ಸ್ನಾನ ಮಾಡಿದ್ದಾರೆ. ಈ ವೇಳೆ ಅದರಲ್ಲಿದ್ದ ಸಂಜಯ್‌ ಇನ್‌ಸ್ಟಾಲ್‌ ಮಾಡಿದ ಆಪ್‌ ಮೂಲಕ ಮಹಿಳೆಯ ಬೆತ್ತಲೆ ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

A Woman From Bengaluru Was Blackmailed By A Friend After Making A Video

ಇದು ರೆಕಾರ್ಡ್‌ ಆಗುವುದು ಕೂಡ ಮಹಿಳೆಗೆ ತಿಳಿಯಲೇ ಇಲ್ಲ. ಇನ್ನು ಆರೋಪಿ ಸಂಜಯ್‌ ತನ್ನ ಮೊಬೈಲ್‌ನಿಂದಲೇ ಈ ಆಪ್‌ ಅನ್ನು ಬಳಸುತ್ತಿದ್ದ. ವಿಡಿಯೋ ರೆಕಾರ್ಡ್‌ ಆಗುವುದು ಕೂಡ ಮಹಿಳೆಗೆ ತಿಳಿಯದಂತೆ ಸಂಚು ರೂಪಿಸಿದ್ದ. ಕೊನೆಗೆ ಇದೇ ವಿಡಿಯೋ ಅನ್ನು ಸಂಜಯ್‌ ಮಹಿಳೆಯ ಮೊಬೈಲ್‌ಗೆ ಕಳಿಸಿ, ಬ್ಲ್ಯಾಕ್‌ಮೇಲ್‌ ಮಾಡಲು ಶುರು ಮಾಡಿದ್ದ ಎಂದು ತಿಳಿದುಬಂದಿದೆ.

ಮೊದಲಿಗೆ ಈ ವಿಡಿಯೋ ಅನ್ನು ನಿಮ್ಮ ಕಂಪನಿಯ ಸಹೋದ್ಯೋಗಿ ನನಗೆ ಕಳಿಸಿದ್ದಾಗಿ ಸಂಜಯ್‌ ಹೊಸ ನಾಟಕ ಆಡಲು ಶುರು ಮಾಡಿದ್ದ. ಆಗ ಮಹಿಳೆ ತನ್ನ ಮೊಬೈಲ್‌ ಸಂಜಯ್‌ಗೆ ನೀಡಿದ್ದನ್ನು ನೆನಪು ಮಾಡಿಕೊಂಡು ಅನುಮಾನದ ಮೇಲೆ ಆತನ ಮೊಬೈಲ್‌ ಚೆಕ್‌ ಮಾಡಿದಾಗ ವಿಡಿಯೋಗಳು ಪತ್ತೆಯಾಗಿವೆ.

ಅಲ್ಲದೆ ಈ ವಿಡಿಯೋ ಮುಂದಿಟ್ಟುಕೊಂಡು ಮಹಿಳೆಗೆ ಬ್ಲ್ಯಾಕ್‌ಮೇಲ್‌ ಕೂಡ ಮಾಡಿದ್ದ. ತನ್ನ ಜೊತೆ ಸಹಕರಿಸುವಂತೆಯೂ ಪೀಡಿಸುತ್ತಿದ್ದ. ನಿನ್ನ ಗಂಡನನ್ನು ಬಿಟ್ಟುಬಿಡು, ನನ್ನನ್ನು ಪ್ರೀತಿಸುವಂತೆ ಕಾಡುತ್ತಿದ್ದ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಆರೋಪಿ ಸಂಜಯ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+