ವ್ಯಾಲೆಂಟೈನ್ಸ್ ಡೇ ವಿಶಿಷ್ಟವಾಗಿ ಹೀಗೂ ಆಚರಿಸಿ!

ಫೆ.14 ದಿನ ಒಂದು ಕಡೆ ವ್ಯಾಲೆಂಟೈನ್ಸ್ ದಿನ ಆಚರಣೆ ನಮ್ಮ ಸಂಸ್ಕೃತಿಯಲ್ಲ . ನಮ್ಮ ಸಂಘಟನೆ ಇದಕ್ಕೆ ವಿರುದ್ಧವಾಗಿದೆ ಎಂದು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರು. ಮತ್ತೊಂದು ಕಡೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಪ್ರೇಮಿಗಳ ದಿನಾಚರಣೆಯನ್ನು ಸಮರ್ಥಿಸಿಕೊಳ್ಳುವವರು ಕಂಡು ಬಂದರು ಪರಿಸ್ಥಿತಿ ಹೀಗಿರುವಾಗ ಖಾಸಗಿ ಸಂಸ್ಥೆಯ ಸಾಮಾಜಿಕ ಜಾಲ ತಾಣ ನಿರ್ವಹಣೆ ತಂಡ ವಿಶಿಷ್ಟವಾಗಿ ಪ್ರೇಮಿಗಳ ದಿನಾಚರಣೆ ಮಾಡಿ ವಿಡಿಯೋ ಹಂಚಿದ್ದಾರೆ.

ವಿಶ್ವವೆಲ್ಲ ವ್ಯಾಲೆಂಟೈನ್ಸ್ ಡೇ ಸಂಭ್ರಮದಲ್ಲಿದ್ದರೆ ನಗರದ ಯುವ ಪ್ರೇಮಿಗಳಿಗೆ ಅವ್ಯಕ್ತ ಆತಂಕ ಮನೆ ಮಾಡಿತ್ತು. ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ಸ್ವೇಚ್ಛಾಚಾರ ಮಾಡುವುದನ್ನು ವಿರೋಧಿಸುವ ಕೆಲವು ಸಂಘಟನೆಗಳು ಹಾಗೂ ಇದನ್ನು ಪ್ರೋತ್ಸಾಹಿಸುವ ಕೆಲವು ಸಂಘಟನೆಗಳ ಮಧ್ಯೆ ಬಹುತೇಕ ಪ್ರೇಮಿಗಳು ತಮ್ಮವರನ್ನು ಪರಸ್ಪರ ಭೇಟಿಯಾಗಲು ಅಥವಾ ತನ್ನ ಮನದಿಂಗಿತ ಹೇಳಿಕೊಳ್ಳಲು ಸಾಧ್ಯವಾಗದೆ ನಿರಾಶರಾಗಿದ್ದಿದೆ.

ಹೀಗಾಗಿ ಗುಲಾಬಿ ಹೂವು ಪ್ರೇಮಿಗಳ ನಡುವಿನ ಸಂಪರ್ಕ ಸೇತುವಾಗಲು ಸಾಧ್ಯವಾಗಲಿಲ್ಲ. ಬಹುತೇಕ ಪ್ರೇಮಿಗಳು ವಾಟ್ಸಪ್ ಗುಲಾಬಿ ಕಳುಹಿಸಿ ಸುಮ್ಮನಾಗಿದ್ದಾರೆ.ಕೆಲವರಂತೂ ಚಾಟಿಂಗ್‌ನಲ್ಲೇ ಪ್ರೇಮ ನಿವೇದನೆ ಮಾಡಿಕೊಂಡರು. ಆದರೆ, ಗುಲಾಬಿ ಬೆಲೆ ಏನು ಕಡಿಮೆಯಾಗಲಿಲ್ಲ. ಗುಲಾಬಿಯನ್ನು ಸಮರ್ಥವಾಗಿ ಬಳಸಿಕೊಂಡ ರೀತಿ ಇಲ್ಲಿದೆ...

A unique valentine's day celebration by social media team

ಪ್ರೇಮ ಅನ್ನೋದು ಬರಿ ಒಬ್ಬ ಹುಡುಗ ಮತ್ತು ಒಬ್ಬಳು ಹುಡುಗಿಗೆ ಮಾತ್ರ ಸಂಬಂಧ ಪಟ್ಟ ವಿಷಯವಲ್ಲ. ನಮ್ಮ ಸುತ್ತಲೂ ತಮ್ಮ ದೈನಂದಿನ ಬದುಕನ್ನು ನಮಗಾಗಿ ಮೀಸಲಿಡುವ ಪ್ರತಿಯೊಬ್ಬರೂ ನಮಗೆ ಗೌರವಾನ್ವಿತ ಪ್ರೇಮಿಯೇ.

ಮೂಲಕ ನಾವು ಅವರಿಗೆ ಗೌರವದ ವಿನಯಪೂರ್ವಕ ಪ್ರೇಮವನ್ನು ಸಮರ್ಪಿಸುತ್ತ ಪ್ರೇಮಿಗಳ ದಿನವನ್ನು ಆಚರಿಸೋಣ ..

ನಮ್ಮನ್ನು ತಿದ್ದಿ ಬುದ್ದಿ ಹೇಳುವ ಶಿಕ್ಷಕರಿಗೆ, ನಮ್ಮನ್ನು ರಕ್ಷಿಸುವ ಆರಕ್ಷಕರಿಗೆ, ಮಾರ್ಗ ಸೂಚಿಯಾಗಿರುವ ಟ್ರಾಫಿಕ್ ಪೊಲೀಸ್ ಗೆ, ಸೆಕ್ಯೂರಿಟಿಗಳಿಗೆ ಮತ್ತು ನಮ್ಮ ಜೀವ ರಕ್ಷಿಸುವ ವೈದ್ಯ ವೃಂದಕ್ಕೆ ಅಭಿನಂದನೆ ಸಲ್ಲಿಸುವ ಅವಕಾಶ ಈ ಮೂಲಕ ನಮಗೆ ದೊರಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+