ವೈದ್ಯರೊಬ್ಬರು ಕನ್ನಡದಲ್ಲಿ ಬರೆದ ಔಷಧಿ ಚೀಟಿ ಭಾರೀ ವೈರಲ್
ಬೆಂಗಳೂರು, ಸೆಪ್ಟೆಂಬರ್, 09: ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಔಷಧಿ ಚೀಟಿಯನ್ನು ಸಾಮಾನ್ಯವಾಗಿ ಇಂಗ್ಲೀಷ್‌ನಲ್ಲಿಯೇ ಬರೆಯುತ್ತಿರುತ್ತಾರೆ. ಇನ್ನು ಇದೀಗ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರೊಬ್ಬರು ಕನ್ನಡದಲ್ಲಿ ಚೀಟಿ ಬರೆದು ಭಾರೀ ಮೆಚ್ಚೆಗೆಗೆ ಪಾತ್ರರಾಗಿದ್ದಾರೆ. ಇನ್ನೂ ಇದು ಸಮಾಜಿಕ ಜಾಲಾತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಅದರಲ್ಲೂ ರಾಜ್ಯದಲ್ಲಿ ಯಾವುದೇ ಆಸ್ಪತ್ರೆಗಳಲ್ಲಾಗಲಿ ಬಂದಂತಹ ರೋಗಿಗಳಿಗೆ ವೈದ್ಯರು ಕನ್ನಡದಲ್ಲಿಯೇ ಔಷಧಿ ಚೀಟಿ ಬರೆದು ಕೊಡಬೇಕೆನ್ನುವ ಕೂಗುಗಳು ಕೇಳಿಬಂದಿದ್ದವು. ಇನ್ನು ಈ ಆದೇಶ ಜಾರಿಯಾಗುವ ಮುನ್ನವೇ ಬೆಂಗಳೂರಿನ ಕೆ.ವಿ.ಡೆಂಡಲ್ ಕ್ಲಿನಿಕ್ ಆಸ್ಪತ್ರೆಯ ವೈದ್ಯ ಡಾ.ಹರಿಪ್ರಸಾದ್ ರೋಗಿಗೆ ಔಷಧಿ ಚೀಟಿಯನ್ನು ಕನ್ನಡದಲ್ಲಿ ಬರೆದುಕೊಟ್ಟು ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕನ್ನಡದಲ್ಲೇ ಔಷಧಿ ಚೀಟಿ ಬರೆದ ವೈದ್ಯ: ರಾಜ್ಯದಲ್ಲಿ ಇನ್ಮುಂದೆ ವೈದ್ಯರು ಕನ್ನಡದೇ ಔಷಧಿ ಚೀಟಿಯನ್ನು ಬರೆಯಲು ಆದೇಶ ಜಾರಿಯಾಗುವ ಬೆನ್ನಲ್ಲೇ ಬೆಂಗಳೂರಿನಲ್ಲಿ ವೈದ್ಯರೊಬ್ಬರು ಕನ್ನಡದಲ್ಲೇ ಔಷಧಿ ಚೀಟಿಯನ್ನು ಬರೆದು ಗಮನ ಸೆಳೆದಿದ್ದಾರೆ. ಇನ್ನು ಈಗಾಗಲೇ ರಾಯಚೂರಿನಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರು ಔಷಧ ಚೀಟಿಯನ್ನು ಕನ್ನಡದಲ್ಲೇ ಬರೆಯಲು ಆದೇಶ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ತಲೆ ಮೇಲೆ ಸಿಸಿ ಕ್ಯಾಮೆರಾ ಇಟ್ಟ ಪೋಷಕರು: ನೆರೆಯ ದೇಶವಾದ ಪಾಕಿಸ್ಥಾನದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಲ್ಲದೆ, ಇಲ್ಲಿನ ಜನರು ಜೀವನ ಹೇಗೆ ನಡೆಸುತ್ತಾರೆ, ಮಕ್ಕಳು ಶಿಕ್ಷಣ ಬಿಟ್ಟು ಸುಮ್ಮನೆ ಅಲೆದಾಡುತ್ತಿರುವ ಬಗ್ಗೆ ಈಗಾಗಲೇ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತಲೇ ಇರುತ್ತವೆ. ಇನ್ನು ಇದೀಗ ಇಲ್ಲಿನ ಮತ್ತೊಂದು ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ.
ಪಾಕಿಸ್ತಾನದ ಹುಡುಗಿಯೊಬ್ಬಳು ತನ್ನ ತಲೆಯ ಮೇಲೆ ಸಿಸಿಟಿವಿ ಕ್ಯಾಮೆರಾವನ್ನು ಧರಿಸಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. "ಪಾಕಿಸ್ತಾನದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ತನ್ನ ಕುಟುಂಬವು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ಯಾಮೆರಾವನ್ನು ತನ್ನ ತಲೆ ಮೇಲೆ ಅಳವಡಿಕೆ ಮಾಡಿದೆ ಎಂದು ಆ ಯುವತಿ ಹೇಳಿದ್ದಾರೆ," ಅಂತಾ ಹೇಳಿದ್ದಾರೆ. ಅಲ್ಲದೆ, ಪಾಕಿಸ್ತಾನದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಕೂಡ ಅವರು ತಿಳಿಸಿದ್ದಾರೆ ಎನ್ನಲಾಗಿದೆ.
ಘರ್ ಕೆ ಕಾಲೇಶ್ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇನ್ನು ಈ ವೀಡಿಯೊದಲ್ಲಿ, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತನ್ನ ಪೋಷಕರು ತನ್ನ ತಲೆಯ ಮೇಲೆ ಸಿಸಿ ಕ್ಯಾಮೆರಾವನ್ನು ಹಾಕಿದ್ದಾರೆ ಮತ್ತು ಅದರ ಸಹಾಯದಿಂದ ಅವರು ನನ್ನ ಮೇಲೆ ಕಟ್ಟಿದ್ದಾರೆ ಅಂತಲೂ ಆ ಯುವತಿ ಹೇಳುತ್ತಿದ್ದಾಳೆ.
ಈ ಮೂಲಕ ಕುಟುಂಬವು ಯುವತಿಯ ಸುರಕ್ಷತೆಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತದೆ. ಆದ್ದರಿಂದ ಅವಳು ಎಲ್ಲಿಗೆ ಹೋದರೂ, ಭೇಟಿಯಾದರೂ, ಅವಳ ಕುಟುಂಬಕ್ಕೆ ಅದರ ಬಗ್ಗೆ ತಿಳಿಯುತ್ತದೆ. ಇನ್ನು ಪಾಕಿಸ್ತಾನಿ ಯುವತಿಯ ಈ ವೀಡಿಯೊ ಕಂಡು ಆಶ್ಚರ್ಯಕ್ಕೊಳಗಾದ ಜನರು ಇಂತಹವರು ಸಮಾಜದಲ್ಲಿ ಇರುತ್ತಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.












Click it and Unblock the Notifications