ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಶರಣಾದ ಕೊರೊನಾ ಸೋಂಕಿತೆ ಮಹಿಳೆ
ಬೆಂಗಳೂರು, ಜೂನ್ 26: ಕೊರೊನಾ ವೈರಸ್ ಮಹಾಮಾರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. 60 ವರ್ಷದ ಕೊವಿಡ್ ಸೋಂಕಿತರ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಸರ್ಕಾರಿ ಆಸ್ಪತ್ರೆ ಶೌಚಾಲಯದಲ್ಲಿ ಬುಧವಾರ ರಾತ್ರಿ 60 ವರ್ಷದ ಸೋಂಕಿತ ಮಹಿಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಬುಧವಾರ ಮಧ್ಯರಾತ್ರಿ ಸುಮಾರು 2 ಗಂಟೆಗೆ ಸಮಯಕ್ಕೆ ಶೌಚಾಲಯಕ್ಕೆ ಹೋದ ಮಹಿಳೆ ಎಷ್ಟೊತ್ತಾದರೂ ವಾಪಸ್ ಬರಲೇ ಇಲ್ಲ. ನಂತರ ಅನುಮಾನದ ಮೇಲೆ ಸೊಸೆ ಶೌಚಾಲಯಕ್ಕೆ ತೆರಳಿ ನೋಡಿದಾಗ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇತ್ತೀಚಿಗಷ್ಟೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಕೆಎಸ್ಆರ್ ಪಿ ಪೊಲೀಸ್ ಸಿಬ್ಬಂದಿ ಬಸ್‌ನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದ ಸಮಯದಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿತ್ತು.












Click it and Unblock the Notifications