ಬೆಂಗಳೂರಿನಲ್ಲಿ ನೆರೆಮನೆಯವನಿಂದಲೇ ಅಪ್ರಾಪ್ತೆಯ ಮೇಲೆ ಅತ್ಯಾಚಾರ

ಅಪ್ರಾಪ್ತ ಯುವತಿಯ ಮೇಲೆ ನೆರೆಮನೆಯವನು ತನ್ನ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ನಡೆಸಿದ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ನಡೆದಿದೆ. ಮೇ 8 ರಂದೇ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು, ಮೇ 26: ಅಪ್ರಾಪ್ತ ಯುವತಿಯ ಮೇಲೆ ನೆರೆಮನೆಯವನು ತನ್ನ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ನಡೆಸಿದ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ನಡೆದಿದೆ. ಮೇ 8 ರಂದೇ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಎರಡು ತಿಂಗಳಿನಿಂದ ಸ್ನೇಹಿತರಾಗಿದ್ದ 14 ವರ್ಷದ ಬಾಲಕಿ ಮತ್ತು ನೆರಮನೆಯ ಯುವಕ, ದಿನವೂ ಭೇಟಿಯಾಗುತ್ತಿದ್ದರು. ಬಾಲಕಿಗೆ ಶಾಲೆ ಮುಗಿಯುತ್ತಿದ್ದಂತೆಯೇ ಆಕೆಯನ್ನು ಹೊಟೇಲ್ ಗೆ ಕರೆದುಕೊಂಡು ಹೋಗಿ ಚಾಟ್ಸ್ ಕೊಡಿಸುತ್ತಿದ್ದ ಯುವಕ, ಬೇಸಿಗೆ ರಜೆಯಿದ್ದಿದ್ದರಿಂದ ಆಕೆಯನ್ನು ಪುಸಲಾಯಿಸಿ ಸಿನಿಮಾಕ್ಕೆ ಕರೆದೊಯ್ದಿದ್ದಾನೆ.[ಎಚ್ಆರ್ ಸೋಗಿನಲ್ಲಿ ಬೆಂಗಳೂರಿನಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ]

A 14-year-old girl was gang raped by three youths, including two minors in Bengaluru

ಸಿನಿಮಾ ಮುಗಿಯುತ್ತಿದ್ದಂತೆಯೇ ಪೀಣ್ಯ 2 ನೇ ಹಂತದ ನಿರ್ಮಾಣಹಂತದಲ್ಲಿದ್ದ ಕಟ್ಟಡವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲ, ತನ್ನ ಸ್ನೇಹಿತರಿಬ್ಬರನ್ನೂ ಕರೆಸಿ ಅತ್ಯಾಚಾರ ಮಾಡಿಸಿದ್ದಾನೆ. ಆತನ ಸ್ನೇಹಿತರಿಬ್ಬರೂ ಅಪ್ರಾಪ್ತರಾಗಿದ್ದರು ಎಂದು ತಿಳಿದುಬಂದಿದೆ.

ಅತ್ಯಾಚಾರಕ್ಕೊಳಗಾಗಿ, ಆಘಾತಗೊಂಡು ಬಿದ್ದಿದ್ದ ಬಾಲಕಿ ತನ್ನ ಸ್ನೇಹಿತೆಗೆ ಕರೆಮಾಡಿ ಆಕೆಯ ಮನೆಗೆ ತೆರಳಿದ್ದಾಳೆ. ತಾಯಿಗೆ ವಿಷಯಗೊತ್ತಾದರೆ ಬೈಯುತ್ತಾರೆಂದು ಐದು ದಿನಗಳ ಕಾಲ ತನ್ನ ಸ್ನೇಹಿತೆಯ ಮನೆಯಲ್ಲಿಯೇ ಉಳಿದಿದ್ದಾಳೆ. ಇದರಿಂದ ಆತಂಕಗೊಂಡ ಆಕೆಯ ತಾಯಿ, ಮಗಳನ್ನು ಯಾರೋ ಕಿಡ್ನ್ಯಾಪ್ ಮಾಡಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಐದು ದಿನದ ನಂತರ ಮನೆಗೆ ಬಂದ ಬಾಲಕಿ ಅಮ್ಮನ ಮುಂದೆ ಸತ್ಯ ಹೇಳಿದ್ದಾಳೆ. ಆಘಾತಕ್ಕೊಳಗಾದ ತಾಯಿ ಪೊಲೀಸರಿಗೆ ಮತ್ತೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಸಂತ್ರಸ್ತೆಯ ಹೇಳಿಕೆಯ ಮೇರೆಗೆ ಮೂವರೂ ಆರೋಪಿಗಳನ್ನೂ ಬಂಧಿಸಿದ್ದಾರೆ.

ಬಾಲಕಿಯ ತಾಯಿ ಬ್ಲಡ್ ಬ್ಯಾಂಕ್ ವೊಂದರ ಉದ್ಯೋಗಿಯಾಗಿದ್ದು, ತಂದೆ ಕಳೆದ ಎರಡು ವರ್ಷದ ಹಿಂದೆ ತೀರಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+