ಬೆಂಗಳೂರಲ್ಲಿ ವಾಹನಗಳ ನೋಂದಣಿಯಲ್ಲಿ ಭಾರೀ ಏರಿಕೆ

ಬೆಂಗಳೂರು, ಜನವರಿ 15: ಬೆಂಗಳೂರು ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ?. ಬಿಎಂಟಿಸಿ, ನಮ್ಮ ಮೆಟ್ರೋ ಸೇರಿ ವಿವಿಧ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ಬಂದರೂ ಸಹ ಖಾಸಗಿ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದೆ. ಸಾರಿಗೆ ಇಲಾಖೆ ಮಾಹಿತಿ ಪ್ರಕಾರ 2024ರಲ್ಲಿ ನಗರದಲ್ಲಿ ನೋಂದಣಿಯಾದ ವಾಹನಗಳ ಸಂಖ್ಯೆ 6.44 ಲಕ್ಷ.

2023ಕ್ಕೆ ಹೋಲಿಕೆ ಮಾಡಿದರೆ 2024ರಲ್ಲಿ ನಗರದಲ್ಲಿ ನೋಂದಣಿಯಾದ ವಾಹನಗಳ ಸಂಖ್ಯೆಯಲ್ಲಿ ಶೇ 9ರಷ್ಟು ಏರಿಕೆ ಕಂಡುಬಂದಿದೆ. ಸಾರ್ವಜನಿಕ ಸಾರಿಗೆ ಬಗ್ಗೆ ಸರಿಯಾದ ಯೋಜನೆ ಇಲ್ಲದಿರುವುದೇ ಖಾಸಗಿ ವಾಹನಗಳ ಸಂಖ್ಯೆ ಏರಿಕೆಗೆ ಪ್ರಮುಖ ಕಾರಣ ಎಂದು ತಜ್ಞರು ದೂರುತ್ತಿದ್ದಾರೆ.

9 Per Cent Surge In Vehicles Registration In Bengaluru City 2024

2024ರಲ್ಲಿ ನಗರದಲ್ಲಿ ಬೈಕ್, ಕಾರು, ಟ್ರಾಕ್ಟರ್, ಖಾಸಗಿ ಸೇವಾ ವಾಹನಗಳು, ಇತರ ವಾಹನಗಳು ಸೇರಿದಂತೆ ನೋಂದಣಿಯಾದ ಖಾಸಗಿ ವಾಹನಗಳು 6.44 ಲಕ್ಷ. 2023ರಲ್ಲಿ ನೋಂದಣಿಯಾದ ವಾಹನಗಳ ಸಂಖ್ಯೆ 5.90 ಲಕ್ಷ.

ಬೈಕ್‌ಗಳ ಸಂಖ್ಯೆ ಎಷ್ಟು?; ಬೆಂಗಳೂರು ನಗರದಲ್ಲಿ ಬೈಕ್‌ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸಾರಿಗೆ ಇಲಾಖೆ ಮಾಹಿತಿಯಂತೆ ಬೈಕ್‌ಗಳ ನೋಂದಣಿ ಶೇ 13ರಷ್ಟು ಅಧಿಕವಾಗಿದೆ. ದೇಶದಲ್ಲಿಯೇ ಅತಿ ವಾಹನ ದಟ್ಟಣೆಯ ರಸ್ತೆಗಳು ಎಂಬ ಖ್ಯಾತಿಯನ್ನು ಬೆಂಗಳೂರು ಪಡೆದುಕೊಂಡಿದೆ.

ನಗರದಲ್ಲಿ ಬಿಎಂಟಿಸಿ, ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇದೆ. ಆದರೆ ಈ ಸೇವೆಗಳು ತಮ್ಮದೇ ಆದ ನ್ಯೂನ್ಯತೆಯನ್ನು ಎದುರಿಸುತ್ತಿವೆ. ಆದ್ದರಿಂದ ಜನರು ಖಾಸಗಿ ವಾಹನಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಮೂಲ ಸೌಲಭ್ಯಗಳ ಯೋಜನೆಗಳ ಜಾರಿ ವಿಳಂಬ, ಕೊನೆಯ ಹಂತಕ್ಕೆ ತಲುಪಲು ವಿಫಲವಾದ ಸಾರ್ವಜನಿಕ ಸಾರಿಗೆ ಜನರನ್ನು ಖಾಸಗಿ ವಾಹನಗಳತ್ತ ಹೋಗುವಂತೆ ಮಾಡುತ್ತಿದೆ. ಆದ್ದರಿಂದ ನಗರದಲ್ಲಿ ವಾಹನಗಳ ದಟ್ಟಣೆಯೂ ಹೆಚ್ಚಾಗುತ್ತಿದೆ.

ನಗರದ ಆಡಳಿತ, ರಾಜ್ಯ ಸರ್ಕಾರ ಸಾರ್ವಜನಿಕ ಸಾರಿಗೆ ಬಲಪಡಿಸುವ ಜೊತೆಗೆ ರಸ್ತೆ, ಫ್ಲೈ ಓವರ್ ಮುಂತಾದ ಯೋಜನೆಗಳನ್ನು ಘೋಷಣೆ ಮಾಡುವುದು ಮಾತ್ರವಲ್ಲ ಅವುಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಜ್ಞರು ಹೇಳಿದ್ದಾರೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆ ವಿಸ್ತರಣೆ ತಡವಾಗುತ್ತಿದೆ. ಆದ್ದರಿಂದ ಜನರು ಖಾಸಗಿ ವಾಹನಗಳನ್ನು ಖರೀದಿ ಮಾಡಿ ಸಂಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಿಎಂಟಿಸಿ ಬಸ್‌ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನರ್ ರಚನೆ ಮಾಡಬೇಕಾದ ಅಗತ್ಯವಿದೆ. ಬಸ್‌ಗಳ ಸಂಖ್ಯೆ ಜಾಸ್ತಿಗೊಳಿಸುವುದು ಮಾತ್ರ ಸಮಸ್ಯೆಗೆ ಪರಿಹಾರವಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಈಗಿರುವ ಬಸ್, ನಮ್ಮ ಮೆಟ್ರೋ ವ್ಯವಸ್ಥೆ ಸಾಲದು. ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ದೂರದೃಷ್ಟಿಯ ಯೋಜನೆಗಳ ಅಗತ್ಯವಿದೆ. ಸಬ್ ಅರ್ಬನ್ ರೈಲು ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸರ್ಕಾರ ಬೆಂಗಳೂರು ನಗರದಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡಲು, ಮೂಲ ಸೌಕರ್ಯ ಅಭಿವೃದ್ಧಿಗೊಳಿಸಲು ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಿದೆ. ಆದರೆ ನಗರದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಸಾರಿಗೆ ಸಂಪರ್ಕ ವ್ಯವಸ್ಥೆ ಮಾಡುವುದು ಸರ್ಕಾರಕ್ಕೆ ಸಹ ಸವಾಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+