8th Pay Commission: ಹೊಸ ವೇತನ ಆಯೋಗದಡಿ ನೌಕರರ ಮೂಲ ವೇತನ ಗಣನೀಯ ಹೆಚ್ಚಳ
ನವದೆಹಲಿ, ಸೆಪ್ಟಂಬರ್ 13: ಸದ್ಯ ಏಳನೇ ವೇತನ ಆಯೋಗ ಇದ್ದು, ಅದರ ನಂತರ ಎಂಟನೇ ವೇತನ ಆಯೋಗ ಜಾರಿಯಾಗಲಿದೆ. ಈ ಹೊಸ ಆಯೋಗದಡಿ ಅನೇಕ ವೇತನ ಪರಿಷ್ಕರಣೆಯ ಲಾಭ ಸಿಗುವ ಬಗ್ಗೆ ಕೇಂದ್ರ ಸರ್ಕಾರಿ ನೌಕರರು ಕಾತರದಿಂದ ಕಾಯುತ್ತಿದ್ದಾರೆ. ಇದು ನೌಕರರ ದೀರ್ಘ ಕಾಲದ ಬೇಡಿಕೆಯಾಗಿದ್ದು, ಸರ್ಕಾರ ಪರಿಹರಿಸಲು ಸಿದ್ಧವಾಗುತ್ತಿದ್ದು, ಇದರಿಂದ ನಿರೀಕ್ಷೆಯಲ್ಲಿರುವ ನೌಕರರಲ್ಲಿ ಹರ್ಷ ಹೆಚ್ಚಾಗಿದೆ.
7ನೇ ವೇತನ ಆಯೋಗ ಜಾರಿಯಾಗಿ ಒಂದು ದಶಕದ ನಂತರ 8ನೇ ವೇತನ ಆಯೋಗವು ಜಾರಿಗೆ ಬರಲಿದೆ. ಅಂದರೆ ಹತ್ತು ವರ್ಷಗಳ ನಂತರ 2026 ರ ಜನವರಿಯಲ್ಲಿ ಅನುಷ್ಠಾನಗೊಳ್ಳುವ ನಿರೀಕ್ಷೆ ಇದೆ. ಸರ್ಕಾರ ನೌಕರರ ಹಣದುಬ್ಬರ ಸರಿದೂಗಿಸಲು ಈ ಎಂಟನೇ ವೇತನ ಆಯೋಗದಡಿ ವೇತನವನ್ನು ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡಲಿದೆ. ಹೆಚ್ಚು ಲಾಭ ಸಿಗಲಿದೆ ಎಂದು ಯೋಚಿಸುತ್ತಿದ್ದಾರೆ.

ಹೊಸ ವೇತನ ಆಯೋಗದಡಿ ಮೂಲಕ ವೇತನದಲ್ಲಿ ಭಾರೀ ಹೆಚ್ಚಳ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ಹೆಚ್ಚಳವು ಫಿಟ್‌ಮೆಂಟ್ ಅಂಶವನ್ನು ಆಧರಿಸಿದೆ. ಸರ್ಕಾರ ಪರಿಷ್ಕೃತ ವೇತನ ಶ್ರೇಣಿ ಪರಿಚಯಿಸಲಿದ್ದು, ಇದರಿಂದ ನೌಲರರಿಗೆ ಎಲ್ಲಾ ಹಂತಗಳಲ್ಲಿನ ಪ್ರಯೋಜನ ಸಿಗಲಿದೆ.
ತುಟ್ಟಿಭತ್ಯೆ (ಡಿಎ) ಮತ್ತು ತುಟ್ಟಿ ಪರಿಹಾರ (ಡಿಆರ್) ಸೇರಿದಂತೆ ವಿವಿಧ ಭತ್ಯೆಗಳ ಪ್ರಮಾಣ ಹೆಚ್ಚಾಗಲಿದೆ. ಇದಲ್ಲದೇ ಪಿಂಚಣಿ ಪ್ರಯೋಜನಗಳು ಸಹ ಸಿಗಲಿದೆ ಎಂದು ಪಿಂಚಣಿದಾರರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಮೂಲ ವೇತನ ಗಣನೀಯ ಏರಿಕೆ
8ನೇ ವೇತನ ಆಯೋಗದ ಅಡಿಯಲ್ಲಿ ವೇತನ ಹೆಚ್ಚಳವನ್ನು ನಿರ್ಧರಿಸುವಲ್ಲಿ ಫಿಟ್‌ಮೆಂಟ್ ಅಂಶವು ನಿರ್ಣಾಯಕವಾಗಿದ್ದು, ಅದನ್ನು ಪರಿಗಣಿಸಲಾಗುತ್ತದ. ಈ ಅಂಶ 3.68 ಆಗಿದ್ದಲ್ಲಿ ಮೂಲ ವೇತನಗಳಲ್ಲಿ ಗಣನೀಯ ಏರಿಕೆಗೆ ಆಗಬಹುದು ಎಂದು ಅಂದಾಜಿಸಲಾಗಿದೆ.
ಈ ಎಂಟನೆ ವೇತನ ಆಯೋಗದ ಜಾರಿಯಿಂದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಒಟ್ಟು ಆದಾಯದ ಒಟ್ಟಾರೆ ಗಳಿಕೆಯಲ್ಲಿ ಶೇಕಡಾ 25 ರಿಂದ 35 ರಷ್ಟು ಸಂಭಾವ್ಯ ಹೆಚ್ಚಳವಾಗಬಹುದು.
ಸದ್ಯದವರೆಗೆ ಕೇಂದ್ರ ಸರ್ಕಾರ ಈ ಎಂಟನೇ ವೇತನ ಆಯೋಗದ ಬಗ್ಗೆ ಜಾರಿ ನಿರ್ಧಾರ, ಕಾಲ ಮಿತಿಯನ್ನು ದೃಢೀಕರಿಸಿಲ್ಲ. ಆದರೆ ಏಳನೇ ವೇತನ ಆಯೋಗುವ ಮುಂದಿನ 18 ತಿಂಗಳಲ್ಲಿ ಅಂತ್ಯವಾಗಿದೆ. ಅದಾದ ಬಳಿಕ 2026 ರಲ್ಲಿ ಈ ಹೊಸ ವೇತನ ಆಯೋಗ ಜಾರಿಗೆ ತರಬೇಕಾಗುತ್ತದೆ. ಇದರಿಂದಾಗಿ ನೌಕರರ ನಿರೀಕ್ಷೆಗಳು ಹೆಚ್ಚಾಗಿವೆ.












Click it and Unblock the Notifications