70 ವರ್ಷದ ವೃದ್ಧನಿಂದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಬಿತ್ತು ಗೂಸಾ
ಚಿಕ್ಕಬಳ್ಳಾಪುರ, ನವೆಂಬರ್ 20: 70 ವರ್ಷದ ವೃದ್ಧ ಬಾಲಕಿಯನ್ನು ಅತ್ಯಾಚಾರ ಮಾಡಲು ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ನಡೆದಿದೆ.
ಬಾಲಕಿಯೊಬ್ಬಳಿಗೆ ಹಣದ ಆಮಿಷ ಒಡ್ಡು ಆಕೆಯನ್ನು ಅತ್ಯಾಚಾರಮಾಡಲು ಯತ್ನಿಸಿದ ವೃದ್ಧ ಈಗ ಪೊಲೀಸರ ಅತಿಥಿಯಾಗಿದ್ದಾನೆ, ಗ್ರಾಮಸ್ಥರು ಹಿಗ್ಗಾಮುಗ್ಗ ಥಳಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ವೃದ್ಧ ಗಂಗಾದರಪ್ಪ ಅವರನ್ನು ಮಹಿಳೆಯರೇ ಹಿಡಿದು ಥಳಿಸಿದ್ದಾರೆ.

ಮುಗ್ಧ ಬಾಲಕಿಗೆ ಇದ್ಯಾವುದರ ಕಲ್ಪನೆಯೂ ಇರಲಿಲ್ಲ, ಹಣವನ್ನು ಯಾಕೆ ನೀಡುತ್ತಿದ್ದಾನೆ ಎಂದು ಕೂಡ ತಿಳಿದಿಲ್ಲ, ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.ಬಾಲಕಿಗೆ ಹಣವನ್ನು ನೀಡುತ್ತೇನೆ ತಾನು ಹೇಳಿರುವ ಜಾಗಕ್ಕೆ ನೀನು ಬಾ ಎಂದು ಹೇಳಿದ್ದ, ಆ ಬಾಲಕಿ ತುಂಬಾ ಗಾಬರಿಗೊಂಡಿದ್ದಳು, ಆ ಬಾಲಕಿಯನ್ನು ನೋಡಿದ ಕೆಲವು ಗ್ರಾಮಸ್ಥರು ಆಕೆಯನ್ನು ಹಿಂಬಾಲಿಸಿದ್ದಾರೆ. ಬಳಿಕ ವಿಷಯ ತಿಳಿದು ವೃದ್ಧನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.












Click it and Unblock the Notifications