ಹಿಗ್ಗುತ್ತಿರುವ 'ರಿಯಲ್ ಎಸ್ಟೇಟ್' ಖರೀದಿದಾರರಿಗೆ ಆರ್ಥಿಕ ಆಸ್ತಿ: Knight Frank Report
ಬೆಂಗಳೂರು, ಜೂನ್ 05: ರಾಜಧಾನಿ ಬೆಂಗಳೂರಿನ ರಿಯಲ್ ಎಸ್ಟೇಟ್ ರಂಗವು ದಿನದಿಂದ ದಿನ್ನೆಕ ಬೆಳೆಯುತ್ತಿದೆ. ವಸತಿ, ವಾಣಿಜ್ಯ ಉದ್ದೇಶಗಳಿಗೆ ಆಸ್ತಿ ಖರೀದಿ ಮಾಡುವವರ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರು ಆಸ್ತಿ (ಭೂಮಿ) ಮೇಲಿನ ಹೂಡಿಕೆ, ಖರೀದಿ ಮೂಲಕ ಭಾರತಕ್ಕೆ ಆರ್ಥಿಕತೆಗೆ ವಿಶೇಷ ಕೊಡುಗೆ ನಿಡುತ್ತಿದೆ. ನಗರದಲ್ಲಿ ಸುಮಾರು 40% ಖರೀದಿದಾರರು ರಿಯಲ್ ಎಸ್ಟೇಟ್ ಅನ್ನು ಆರ್ಥಿಕ ಆಸ್ತಿಯಾಗಿ ಪರಿಗಣಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಹಿಗ್ಗುತ್ತಿರುವ ರಿಯಲ್ ಎಸ್ಟೇಟ್ ಕುರಿತು ಆಸ್ತಿ ಸಲಹಾ ಸಂಸ್ಥೆ 'ನೈಟ್ ಫ್ರಾಂಕ್' (Knight Frank) ರಿಯಲ್ ಎಸ್ಟೇಟ್ ಸುಮಾರು ಶೇಕಡಾ 40 ಖರೀದಿದಾರಿಗೆ ಆರ್ಥಿಕ ಆಸ್ತಿಯಾಗಿದೆ. ಇದರ ಪ್ರಮಾಣವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನೋಡಿದರೆ ಅದು ಸರಾಸರಿ ಶೇಕಡಾ 25ಕ್ಕಿಂತ ಕ್ಕಿಂತ ಹೆಚ್ಚು ಎಂದು ಬುಧವಾರ ಬಿಡುಗಡೆಯಾದ ಸಮೀಕ್ಷೆ ಆಧಾರಿತ ವರದಿಯಲ್ಲಿ ತಿಳಿಸಲಾಗಿದೆ ಎಂದು 'ಡಿಎಚ್' ವರದಿ ಮಾಡಿದೆ.

ಎರಡನೇ ಮನೆ ಖದೀರಿ, ಅಪ್‌ಗ್ರೇಡ್ ಸಂಖ್ಯೆ ಏರಿಕೆ
ಭಾರತದಲ್ಲಿ ಹಾಲಿ ಮನೆಯಿಂದ ಉತ್ತಮ ಮನೆಗೆ ಅಪ್‌ಗ್ರೇಡ್ ಆಗುವ ಉದ್ದೇಶದಿಂದ ಖರೀದಿ ಮಾಡುವವರ ಪ್ರಮಾಣ 37 ರಷ್ಟಿದೆ. ಶೇಕಡಾ 32ರಷ್ಟು ಮಂದಿ ಮೊದಲ ಬಾರಿಗೆ ಆಸ್ತಿ/ಮನೆ ಖರೀದಿಸಿದವರಾಗಿದ್ದಾರೆ. ಈ ಪ್ರಮಾಣವು ಬೆಂಗಳೂರು ಶೇ.11 ಹಾಗೂ ಹೈದರಾಬಾದ್ ನಗರದಲ್ಲಿ ಶೇ.11ರಷ್ಟಿದೆ. ಆಸ್ತಿ ಮೇಲಿನ ಹೂಡಿಕೆ ಉತ್ತಮ ಎಂಬ ಭಾವನೆಯಿಂದಲೇ ಖರೀದಿದಾರರು ನಿವೃತ್ತಿ ಅಥವಾ ಎರಡನೇ ಮನೆಗಳನ್ನು ಖರೀದಿಗೆ ಮುಂದಾಗಿದ್ದೂ ಸಹ ರಿಯಲ್ ಎಸ್ಟೇಟ್ ಬೆಳವಣಿಗೆಗೆ ಕಾರಣವಾಗಿದೆ.
ಸದ್ಯ ದೇಶಾದ್ಯಂತ ನಿರ್ಮಾಣ ಹಂತದಲ್ಲಿ ಆಸ್ತಿಗಳು (ಮನೆ, ಕಟ್ಟಡ) ಇಲ್ಲಿರುವ ಶೇಕಡಾ 67ರಷ್ಟು ಖರೀದಿದಾರರಿಗೆ ಖರೀದಿಗೆ ಅನುಕೂಲವಾಗಿವೆ. ಸೂಕ್ತ ಸ್ಥಳ, ಪ್ರದೇಶಗಳಲ್ಲಿ ಡೆವಲಪರ್‌ಗಳು ನಿರ್ಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಶೇಕಡಾ 71ರಷ್ಟು, ಅಹಮದಾಬಾದ್ ಶೇಕಡಾ 79 ರಷ್ಟು, ಪುಣೆಯಲ್ಲಿ ಶೇಕಡಾ 81ರಷ್ಟು, ಚೆನ್ನೈ ಶೇಕಡಾ 73ರಷ್ಟು ಹಾಗೂ ಹೈದರಾಬಾದ್ ಶೇಕಡಾ 78 ಖರೀದಿಗೆ ಆದ್ಯತೆ ನೀಡಲಾಗಿದೆ.
ಮನೆ ನಿರ್ಮಾಣ, ಸೈಟ್ ಸಿದ್ಧಗೊಳ್ಳುವ (ಆಸ್ತಿ ನಿರ್ಮಾಣ) ಮೊದಲೇ ಖರೀದಿಸುವವರ ಸಂಖ್ಯೆ 14ರಷ್ಟಿದೆ. ಇದು ಸುರಕ್ಷಿತವಲ್ಲ ಹಾಗು ಅನಿಶ್ಚಿತತೆಗೆ ಕಾರಣವಾಗುತ್ತದೆ. ಆರ್ಥಿಕ ಅಪಾಯ ಎದುರಾಗವ ಸಂಭವವು ಇರುತ್ತದೆ. ಶೇಕಡಾ 17ರಷ್ಟು ಖರೀದಿದಾರರ ಪ್ರಕ್ರಿಯೆ ಮುಗಿದಿದ್ದು, ಹಸ್ತಾಂತರ ಬಾಕಿ ಉಳಿದಿದೆ. ಇನ್ನೂ ಮರು ಮಾರಾಟ ಆಸ್ತಿಗಳು ಕೇವಲ 2ರಷ್ಟಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆಸ್ತಿ ಖರೀದಿಗೆ ಗೃಹ ಸಾಲದ ಮೇಲೆ ಹೆಚ್ಚಿನ ಅವಲಂಬನೆ
ಕೋಲ್ಕತ್ತಾ ಹಾಗೂ ಮುಂಬೈನಲ್ಲಿ ಮನೆ ಖರೀದಿಗೆ ಜನರು ಗೃಹ ಸಾಲಗಳನ್ನು ಅವಲಂಬಿಸಿದ್ದಾರೆ ಎಂಬ ಅಂಶವು ಬೆಳಕಿಗೆ ಬಂದಿದೆ. ಗೃಹ ಸಾಲದ ಮಾಡಿ ಮನೆ ಖರೀದಿಸುವವರ ಸಂಕ್ಯೆ ಕೊಲ್ಕತ್ತಾದಲ್ಲಿ 96ರಷ್ಟು ಹಾಗೂ ಮುಂಬೈ ನಲ್ಲಿ ಶೇಕಡಾ 95ರಷ್ಟು ಜನ ಅವಲಂಬಿತರಾಗಿದ್ದಾರೆ. ದೆಹಲಿ ಎನ್‌ಸಿಆರ್‌ನಲ್ಲಿ ಶೇಕಡಾ 53 ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಶೇಕಡಾ 67ರಷ್ಟು ಆಸ್ತಿಗಳ ಖರೀದಿ ಗೃಹ ಸಾಲಗಳ ಮೇಲೆ ಅವಲಂಬಿತವಾಗಿದೆ ಎಂಬುದು ಗೊತ್ತಾಗಿದೆ.












Click it and Unblock the Notifications