ಬೆಳ್ಳಂದೂರು ಕೆರೆ ಪುನರುಜ್ಜೀವನಕ್ಕೆ 665 ಕೋಟಿ ಬೇಕಂತೆ, 2021ಕ್ಕೆ ಪೂರ್ಣ
ಬೆಂಗಳೂರು, ಜನವರಿ 30: ಬೆಳ್ಳಂದೂರು ಕೆರೆಯನ್ನು 2021ರ ಹೊತ್ತಿಗೆ ಪುನರುಜ್ಜೀವನಗೊಳಿಸಲಾಗುವುದು ಅದಕ್ಕೆ 665 ಕೋಟಿ ರೂ ವೆಚ್ಚವಾಗುತ್ತದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
ಕಳೆದ ಎರಡು ವರ್ಷದೀಮದೀಚೆಗೆ ಪದೇ ಪದೇ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲದೆ ನೊರೆ ವಿಪರೀತವಾಗಿದೆ ಇದಕ್ಕೆ ಪರಿಹಾರ ಕಂಡು ಹಿಡಿಯಬೇಕಿದ್ದರ ಮೊದಲು ನೊರೆಯನ್ನು ಕಡಿಮೆ ಮಾಡಬೇಕಾಗಿದೆ. ನೊರೆ ಕಡಿಮೆ ಮಾಡಬೇಕಾದರೆ ಸುತ್ತಮುತ್ತಲಿನ ಕಾರ್ಖಾನೆಗಳಿಂದ ಬರುವ ಮಲಿನ ನೀರನ್ನು ತಡೆಯಬೇಕಿದೆ. ಇದಕ್ಕೆ ಕೆರೆಯ ಹೂಳು ತೆಗೆದು ಅದರ ಪುನರುಜ್ಜೀವನ ಮಾಡಲೇ ಬೇಕಾಗಿದೆ.
ಕೆರೆಯನ್ನು ಸ್ವಚ್ಛಗೊಳಿಸಲು ಬಿಡಿಎ 2020ರ ಗುರಿ ಇಟ್ಟುಕೊಂಡಿದೆ. ಒಳಚರಂಡಿ ಪೈಪ್ ಗಳ ನಿರ್ಮಾಣವಾದ ಬಳಿಕ ಕಾರ್ಯ ಮುಗಿಯಲಿದೆ.

ಈ ಮೊದಲು ಬಿಡಿಎ ಅಧಿಕಾರಿಗಳು ಬೆಳ್ಳಂದೂರು ಕೆರೆಯನ್ನು ಸ್ವಚ್ಛಗೊಳಿಸಲು 800-1000 ಕೋಟಿ ವೆಚ್ಚ ತಗುಲಬಹುದು ಎಂದು ಹೇಳಿದ್ದರು ಆದರೆ ಏಜೆನ್ಸಿ ಹೇಳುವ ಪ್ರಕಾರ 665 ಕೋಟಿ ರೂ ವೆಚ್ಚವಾಗಲಿದೆ.42.3 ಕೋಟಿ ವೆಚ್ಚದಲ್ಲಿ ಬೇಲಿ ಹಾಕುವುದು, ಸ್ಪ್ರಿಂಕ್ಲರ್ ಅವಡಿಸಲಾಗುತ್ತದೆ.












Click it and Unblock the Notifications