ಮದ್ಯ ನಿಷೇಧ ಪಾದಯಾತ್ರೆ ವೇಳೆ ಮಹಿಳೆ ಸಾವು, ತೀವ್ರಗೊಂಡ ಪ್ರತಿಭಟನೆ

ನೆಲಮಂಗಲ, ಜನವರಿ 28: ಮದ್ಯ ನಿಷೇಧಕ್ಕೆ ಆಗ್ರಹಿಸಿ ಕಳೆದ 10 ದಿನಗಳಿಂದ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಮೃತಪಟ್ಟಿದ್ದು ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.

ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕೆ ಆಗ್ರಹಿಸಿ ಕಳೆದ ಒಂಭತ್ತು ದಿನಗಳಿಂದ ಪಾದಯಾತ್ರೆ ಮಾಡಿಕೊಡು ಬರುತ್ತಿದ್ದ ಮಹಿಳೆ( ರೇಣುಕಮ್ಮ)ಭಾನುವಾರ ರಾತ್ರಿ ಅಪಘಾತದಿಂದ ಮೃತಪಟ್ಟಿದ್ದಾರೆ. ಆದರೆ ಪೊಲೀಸ್ ಮತ್ತೆ ಯಾರೂ ಕೂಡ ಸ್ಥಳಕ್ಕೆ ಆಗಮಿಸಿದ ಕಾರಣ ಪ್ರತಿಭಟನಾಕಾರರು ಆಕ್ರೋಶಗೊಂಡಿದ್ದಾರೆ.

ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

55 year old woman met with accident during protest against alcohol

ಉತ್ತರ ಕರ್ನಾಟಕದ ಕೂಲಿನಾಲಿ ಮಾಡುವ, ಮುಗ್ದ ಗ್ರಾಮೀಣ ಭಾಗದ 2000 ಕ್ಕಿಂತ ಹೆಚ್ಚಿನ ಮಹಿಳೆಯರು ಹೆದ್ದಾರಿಯಲ್ಲಿ ಬರುತ್ತಿದ್ದಾರೆ ಎಂದು ತಿಳಿದಿದ್ದೂ ಒಬ್ಬ ಪೊಲೀಸ್ ಭದ್ರತೆ ಇರಲಿಲ್ಲ. ಆಂಬುಲೆನ್ಸ್ ಅಂತೂ ಇಲ್ಲವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈ ಹೋರಾಟವನ್ನು ಮುಂದುವರೆಸುತ್ತೇವೆ, ಯಾವುದೇ ಕಾರಣಕ್ಕೂ ಹೋರಾಟವನ್ನು ಅರ್ಧಕ್ಕೆ ಬಿಟ್ಟು ಹೋಗುವುದಿಲ್ಲ, ರೇಣುಕಮ್ಮ ಸಾವಿಗೆ ಸರ್ಕಾರವೇ ನೇರ ಕಾರಣ ಎಂದು ದೂರಿದ್ದಾರೆ.

55 year old woman met with accident during protest against alcohol

ಯಾವುದೇ ಕಾರಣಕ್ಕೂ ಚಲಿಸುತ್ತಿರುವ ವಾಹನಗಳನ್ನು ಹತ್ತುವ ಪ್ರಯತ್ನ ಮಾಡಬಾರದು, ಸ್ವಲ್ಪ ತಡವಾದರೂ ತೊಂದರೆಯಿಲ್ಲ, ನಿಧಾನವಾಗಿ ವಾಹನವನ್ನು ಏರಿ ಎಂದು ಮನವಿ ಮಾಡಲಾಗಿದೆ. ರಾಜ್ಯದಲ್ಲಿ ಮಧ್ಯ ನಿಷೇಧದ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+