Bengaluru-Mysuru Expressway: 55 ಮಂದಿ ಸಾವು, ಡೆಡ್ಲಿ ಆಕ್ಸಿಡೆಂಟ್ ಸ್ಪಾಟ್ ಆಗುತ್ತಿದೆಯೇ ಹೆದ್ದಾರಿ?

ಮಂಡ್ಯ, ಜೂನ್ 08: ಉದ್ಯಾನ ನಗರಿ ಮತ್ತು ಸಾಂಸ್ಕೃತಿಕ ನಗರಿ ಬೆಸೆಯುವ ಬಹುಕೋಟಿ ರೂಪಾಯಿ ವೆಚ್ಚದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಡೆಡ್ಲಿ ಆಕ್ಸಿಡೆಂಟ್ ಜೋನ್ ಆಗುತ್ತಿದೆಯೆ ಎಂಬ ಅನುಮಾನ ಮೂಡುತ್ತಿದೆ. ಹೆದ್ದಾರಿ ಉದ್ಘಾಟನೆಯಾದ ಬಳಿಕ ಇಲ್ಲಿ ಆಗುತ್ತಿರುವ ಅಪಘಾತಗಳ ಇಂತದ್ದೊಂದು ಶಂಕೆ ಹುಟ್ಟುಹಾಕಿದೆ.

ಬೆಂಗಳೂರು ಹಾಗೂ ಸುತ್ತಮುತ್ತ ಕೈಗಾರಿಕೆಗಳು ಹೆಚ್ಚಿವೆ. ಇದೇ ರೀತಿ ಮೈಸೂರು ನಗರವು ಅಭಿವೃದ್ಧಿಯಾಗಲಿದೆ. ಎರಡು ಪ್ರಮುಖ ನಗರಗಳ ಮಧ್ಯೆ ಪ್ರಯಾಣಿಕರ ಸುಗಮ ಮತ್ತು ಸುಲಭ ಕ್ಷಿಪ್ರ ಓಡಾಟಕ್ಕೆ ಅನುಕೂಲವಾಗಲೆಂದು ಎಕ್ಸ್‌ಪ್ರೆಸ್‌ ವೇ ನಿರ್ಮಾಣ ಮಾಡಲಾಗಿದೆ.

Bengaluru-Mysuru Expressway

ಒಟ್ಟು ಸುಮಾರು 9000 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸರ್ಕಾರ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣವಾಗಿದೆ. ಉದ್ಘಾಟನೆಗೊಂಡ ಬಳಿಕ ಕೇವಲ 5 ತಿಂಗಳಲ್ಲೇ ಇದುವರೆಗೆ ಹಲವು ಅಪಘಾತಗಳಲ್ಲಿ 50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇದು ಮಂಡ್ಯ ಹಾಗೂ ವಿವಿಧ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದೆ.

ಆಗಾಗ ಸಂಭವಿಸುತ್ತಿರುವ ಅಪಘಾತಗಳಿಂದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಮಂಡ್ಯ ಜಿಲ್ಲೆಯೊಳಗೆ ಹಾದು ಹೋಗುತ್ತದೆ. ಜಿಲ್ಲೆ ವ್ಯಾಪ್ತಿಯಲ್ಲಿ ಬರೋಬ್ಬರಿ 55 ಕಿ.ಮೀಗೂ ಹೆಚ್ಚು ದಶಪಥ ಹೆದ್ದಾರಿ ಇದೆ. ಈ ಹೆದ್ದಾರಿಯ ಕಾಮಗಾರಿ ಪೂರ್ಣಗೊಂಡಿದ್ದು, ವೇಗದ ಈ ಪ್ರಯಾಣವು ಪ್ರಯಾಣದ ಸಮಯವನ್ನು ಉಳಿಸುತ್ತಿದೆ.

ಇದುವರೆಗಿನ ಅಪಘಾತಗಳ ಸಂಪೂರ್ಣ ಮಾಹಿತಿ

ಮಂಡ್ಯ ವ್ಯಾಪ್ತಿಯ ಈ ಹೆದ್ದಾರಿಯಲ್ಲಿ ನಡೆದ ಅಪಘಾತ ಪ್ರಕರಣ ಹಾಗೂ ಸಾವಿನ ವರದಿಗೆ ಮಂಡ್ಯ ಜನ ಕಳವಳ ವ್ಯಕ್ತಪಡಿಸಿದ್ದಾರೆ. ಜನವರಿ ತಿಂಗಳಿಂದ ಮೇ ತಿಂಗಳಾಂತ್ಯದವರೆಗೆ 570 ಅಪಘಾತ ಪ್ರಕರಣ ಸಂಭವಿಸಿವೆ. ಅದರಲ್ಲಿ 50ಕ್ಕೂ ಹೆಚ್ಚು ಮಂದಿಗೆ ಸಾವಿಗೀಡಾಗಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡರೆ, 180ಕ್ಕೂ ಅಧಿಕ ಮಂದಿ ಕೈಕಾಲು ಮುರಿದಕೊಂಡಿದ್ದಾರೆ. 279 ಜನರಿಗೆ ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗಳಾಗಿವೆ. ಸಾವುಗಳ ಸಂಭವಿಸಿವೆ.

Bengaluru-Mysuru Expressway

ಹೆದ್ದಾರಿಯು ಉಪಯೋಗವಿದ್ದರೂ ಸಹ ವೇಗದ ಚಾಲನೆಯಿಂದಾಗಿ ದುರಂತಗಳು ಸಂಭವಿಸುತ್ತಿವೆ. ಎಕ್ಸ್‌ಪ್ರೆಸ್ ವೇ ಸೇರಿದಂತೆ ಇಲ್ಲಿನ ಸರ್ವಿಸ್ ರಸ್ತೆಯಲ್ಲಿ ವೇಗವಾಗಿ ವಾಹನಗಳು ಸಂಚಾರ ನಡೆಸುತ್ತವೆ. ಈ ವೇಳೆ ಚಾಲಕರ ನಿಯಂತ್ರಣ ತಪ್ಪಿಯು ಅವಘಡಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ.

ಇದರೊಂದಿಗೆ ಮತ್ತೊಂದೆಡೆ ಸಣ್ಣಪುಟ್ಟ ಕಾಮಗಾರಿಗಳು ನಡೆಯುತ್ತಿವೆ. ಅದು ಸಹ ಅವಘಡಗಳು ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ರಸ್ತೆಗಳಲ್ಲಿ ಉಬ್ಬುಗಳಿಂದ ಹಾಗೂ ಇನ್ನಿತರ ಕಾರಣಗಳಿಂದ ವೇಗವಾಗಿ ಚಲಿಸುತ್ತಿರುವ ವಾಹನಗಳು ಒಮ್ಮೇಲೆ ನಿಯಂತ್ರಿಸಲಾಗದೇ ಅಪಘಾತ ಸಂಭವಿಸಿವೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+