5000 ಕೋಟಿ, ಒಂದು ಲಕ್ಷ ಹೂಡಿಕೆದಾರರು: ಮನ್ಸೂರ್ ಖಾನ್ ನ ವಂಚನೆ ಲೆಕ್ಕಾಚಾರ

ಬೆಂಗಳೂರು, ಜೂನ್ 13: ಐಎಂಎ ಜ್ಯುವೆಲ್ಲರಿಯ ಮನ್ಸೂರ್ ಖಾನ್ ನಿಂದ ವಂಚನೆಗೊಳಗಾದವರ ಸಂಖ್ಯೆ ಎಷ್ಟು ಗೊತ್ತಾ? ಈಗಿನ ಅಂದಾಜಿನ ಪ್ರಕಾರ ಒಂದು ಲಕ್ಷಕ್ಕೂ ಹೆಚ್ಚು ಮಂದಿ. ಹಾಗಿದ್ದರೆ ವಂಚನೆ ಮಾಡಿದ ಮೊತ್ತ ಎಷ್ಟು? ಐದು ಸಾವಿರ ಕೋಟಿ ರುಪಾಯಿ ಎನ್ನುತ್ತಿವೆ ಮೂಲಗಳು. ಈತ ಇಸ್ಲಾಂ ಧರ್ಮದ ಅನುಸಾರ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದ್ದ ಎಂಬುದು ಜನರ ನಂಬಿಕೆ ಆಗಿತ್ತು.

ಮನ್ಸೂರ್ ಎಂಥ ಬುದ್ಧಿವಂತ ಅಂದರೆ, ಜನರ ಧಾರ್ಮಿಕ ನಂಬಿಕೆಗಳನ್ನು ತನ್ನ ವಂಚನೆಯ ಅಸ್ತ್ರವನ್ನಾಗಿ ಮಾಡಿಕೊಂಡ. ದಾನ- ಧರ್ಮ ಮಾಡುವ ಧರ್ಮಾತ್ಮನಾಗಿಯೂ ಕಾಣಿಸಿಕೊಂಡಿದ್ದ. ಇವೆಲ್ಲಕ್ಕಿಂತ ಮುಖ್ಯವಾಗಿ ಪ್ರಮುಖ ರಾಜಕಾರಣಿಗಳ ಜತೆಗೆ ಕಾಣಿಸಿಕೊಳ್ಳುವ ಮೂಲಕ ಮತ್ತಷ್ಟು ಪ್ರಭಾವಿ ಹಾಗೂ ಗಟ್ಟಿ ಕುಳದಂತೆ ಕಾಣಿಸಿಕೊಂಡ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ರೋಷನ್ ಬೇಗ್ ಇತರ ನಾಯಕರ ಜತೆಗೆ ಕಾಣಿಸಿಕೊಳ್ಳುತ್ತಿದ್ದುದರಿಂದ ಮನ್ಸೂರ್ ಬಗ್ಗೆ ನಂಬಿಕೆ ಮೂಡುವಂತಾಗಿತ್ತು. ಈಗ ವಂಚನೆಗೊಳಗಾದವರಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮನ್ಸೂರ್ ನ ಧಾರ್ಮಿಕ ವ್ಯಕ್ತಿತ್ವವನ್ನು ನಂಬಿ, ತಮ್ಮ ಶ್ರಮದ ಹಣವನ್ನು ಕಳೆದುಕೊಂಡಿರುವ ಜನರು ಇವರು.

5 thousand crore money, 1 lakh investors: IMA jewellery fraud estimation

ಮನ್ಸೂರ್ ನಾಪತ್ತೆ ಆದ ನಂತರ ಸಿಕ್ಕಿರುವ ಆಡಿಯೋ ಕ್ಲಿಪ್ ನಲ್ಲಿ, ಶಿವಾಜಿ ನಗರದ ಶಾಸಕ ರೋಷನ್ ಬೇಗ್ ನನಗೆ ನಾನೂರು ಕೋಟಿ ನೀಡಬೇಕು ಎಂದಿದ್ದಾನೆ. ಜತೆಗೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತಲೂ ಹೇಳಿ, ಹೂಡಿಕೆದಾರರ ಹಣವನ್ನು ಸಂಪೂರ್ಣವಾಗಿ ಹಿಂತಿರುಗಿಸುತ್ತೇನೆ ಅಂತಲೂ ಮತ್ತೊಂದು ವಿಡಿಯೋದಲ್ಲಿ ಹೇಳಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+