ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿದ್ದವರಿಗೆ ಕೊರೊನಾ ಇಲ್ಲ

ಬೆಂಗಳೂರು, ಮಾರ್ಚ್ 5: ನಗರದ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿದ್ದವರಿಗೆ ಕೊರೊನಾ ಇಲ್ಲ ಎಂದು ದೃಢಪಟ್ಟಿದೆ.

ಇದುವರೆಗೂ ದೇಶದಲ್ಲಿ 30 ಪ್ರಕರಣಗಳು ದಾಖಲಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಇನ್ನು ಸೋಂಕು ದೃಢಪಟ್ಟಿದ್ದ ತೆಲಂಗಾಣ ಟೆಕ್ಕಿ ಬೆಂಗಳೂರಿನಲ್ಲಿದ್ದು ಹೋಗಿದ್ದ ಹಿನ್ನೆಲೆ ರಾಜ್ಯದಲ್ಲಿ ಈ ಬಗ್ಗೆ ಕಟ್ಟೆಚ್ಚರವಹಿಸಲಾಗಿದೆ.

ಇನ್ನು ನಿನ್ನೆ ಒಂದೇ ದಿನಕ್ಕೆ ಸುಮಾರು 153 ಜನರ ತಪಾಸಣೆ ಮಾಡಲಾಗಿದ್ದು, ಯಾರಲ್ಲೂ ಈ ಸೋಂಕಿನ ಲಕ್ಷಣ ಕಂಡು ಬಂದಿಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

5 People With Suspected Symptoms Admitted Bengaluru Tested Nagative

ಕೊರೋನಾ ಸೋಂಕು ಶಂಕೆ ಹಿನ್ನೆಲೆ ರಾಜೀವ್​ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದ ಐವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಅವರಿಗೆ ಯಾವುದೇ ಸೊಂಕು ಇಲ್ಲ ಎಂಬ ಕುರಿತು ವರದಿಯಾಗಿದೆ. ಈ ಹಿನ್ನೆಲೆ ವಿಶೇಷ ವಾರ್ಡ್​​ನಿಂದ ಶಂಕಿತರನ್ನು ಡಿಸ್ಚಾರ್ಜ್​ ಮಾಡಲಾಗಿದೆ.

ಈ ಕುರಿತು ಮಾತನಾಡಿದ ಆಸ್ಪತ್ರೆ ವೈದ್ಯಾಧಿಕಾರಿಗಳು, ಶಂಕಿತರನ್ನು ಪ್ರತ್ಯೇಕವಾಗಿ ಸುದೀರ್ಘ ತಪಾಸಣೆಗೆ ಒಳಪಡಿಸಲಾಗಿದೆ. ಸದ್ಯ ಅವರಲ್ಲಿ ಯಾವುದೇ ರೋಗದ ಸೋಂಕು ಕಂಡು ಬಂದಿಲ್ಲ ಎಂದಿದ್ದಾರೆ. ಇದರಲ್ಲಿ ಇಬ್ಬರು ಇತ್ತೀಚೆಗಷ್ಟೇ ಸೌದಿ ಅರೇಬಿಯಾ ಹಾಗೂ ಜಪಾನ್​ನಿಂದ ರಾಜ್ಯಕ್ಕೆ ಮರಳಿದ್ದರು.

ತೆಲಂಗಾಣ ಮತ್ತು ದೆಹಲಿ ಸೋಂಕಿತರನ್ನು ನಿರಂತರ ತಪಾಣೆಗೆ ಒಳಪಡಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+