ಹೊಂಗಸಂದ್ರ ವ್ಯಕ್ತಿಯಿಂದ ಮತ್ತೆ 5 ಜನರಿಗೆ ಕೊರೊನಾ ಸೋಂಕು
ಬೆಂಗಳೂರು, ಏಪ್ರಿಲ್ 24: ಹೊಂಗಸಂದ್ರದಲ್ಲಿ ಹೊಸದಾಗಿ ಐದು ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಬಿಹಾರ ಮೂಲದ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದವರಲ್ಲಿ ಮತ್ತೆ ಐದು ಜನರಿಗೆ ಕೊವಿಡ್ ಸೋಂಕು ಖಚಿತವಾಗಿದ್ದು, ಹೊಂಗಸಂದ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15ಕ್ಕೆ ಏರಿದೆ.
ಮೊದಲು ಬಿಹಾರ ಮೂಲದ ವ್ಯಕ್ತಿಗೆ ಸೋಂಕು ಖಚಿತವಾಗಿತ್ತು. ನಂತರ ಆತನ ಜೊತೆ ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕದಲ್ಲಿದ್ದ ಸುಮಾರು 188 ಮಂದಿಯನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ.

ಈ ಪೈಕಿ ಮೊದಲ ವರದಿಯಲ್ಲಿ ನಿನ್ನೆ 9 ಜನರಿಗೆ ಸೋಂಕು ದೃಢಪಟ್ಟಿತ್ತು. ಇಂದು ಎರಡನೇ ವರದಿ ಬಂದಿದ್ದು, ಹೊಸದಾಗಿ 5 ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಒಬ್ಬ ವ್ಯಕ್ತಿಯಿಂದ 14 ಮಂದಿಗೆ ಸೋಂಕು ತಗುಲಿರುವುದು ಈಗ ಹೊಂಗಸಂದ್ರ ವಾರ್ಡ್ ಜನರಿಗೆ ಸಹಜವಾಗಿ ಆತಂಕ ಹೆಚ್ಚಿಸಿದೆ.
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 18 ಹೊಸ #Covid19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 463ಕ್ಕೆ ಏರಿದೆ. #ಮನೆಯಲ್ಲೇಇರಿ pic.twitter.com/4y9s76xEVE
— B Sriramulu (@sriramulubjp) April 24, 2020
ಕರ್ನಾಟಕದಲ್ಲಿಂದು ಒಂದೇ ದಿನದಲ್ಲಿ ಹೊಸದಾಗಿ 18 ಜನರಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರಿನ ಪಾದರಾಯನಪುರ 5, ಬೆಂಗಳೂರಿನ ಹೊಂಗಸಂದ್ರ 5, ಬೆಂಗಳೂರು ನಗರ 1, ಬೆಳಗಾವಿ ಜಿಲ್ಲೆ ರಾಯಭಾಗ್‌ನ 2, ತುಮಕೂರು 1, ಚಿಕ್ಕಬಳ್ಳಾಪುರದಲ್ಲಿ 1 ಬಾಗಲಕೋಟೆ ಜಿಲ್ಲೆ ಮುಧೋಳ 1, ಜಮಖಂಡಿ 1, ವಿಜಯಪುರದಲ್ಲಿ ಒಬ್ಬ ಸೋಂಕಿತರು ಒಳಗೊಂಡಿದ್ದಾರೆ.
ರಾಜ್ಯದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 463ಕ್ಕೆ ಏರಿಕೆಯಾಗಿದೆ. ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ಈವರೆಗೂ ಪಾದರಾಯನಪುರ ವಾರ್ಡ್‌ನಲ್ಲಿ 25 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ.












Click it and Unblock the Notifications