ರದ್ದಾಗಲಿದೆ 5,918 ಬೆಂಗಳೂರಿಗರ ಲೈಸೆನ್ಸ್‌ಗಳು

ಬೆಂಗಳೂರು, ಜು.9: ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ 5,918 ಮಂದಿ ಚಾಲಕರ ಪರವಾನಗಿ ಪತ್ರಗಳನ್ನು ಅನರ್ಹ‌ಗೊಳಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಕಳುಹಿಸಿ ಕೊಡಲಾಗಿದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಬಿಜೆಪಿಯ ಎಸ್.ಸುರೇಶ್‌ಕುಮಾರ್ ಅವರ ಪ್ರಶ್ನೆಗೆ ವಿಧಾನಸಭೆಯಲ್ಲಿ ಉತ್ತರ ನೀಡಿದ ಸಚಿವರು ಜೂನ್ ಅಂತ್ಯದವರೆಗೆ 5,918 ಮಂದಿ ಚಾಲಕರ ಪರವಾನಗಿ ಪತ್ರಗಳನ್ನು ಸಾರಿಗೆ ಇಲಾಖೆ ಗೆ ಕಳುಹಿಸಿದ್ದು ,ಈ ಪೈಕಿ ಈಗಾಗಲೇ 351 ಸವಾರರ ಡ್ರೈವಿಂಗ್‌ ಲೈಸೆನ್ಸ್ ಅನರ್ಹ‌ಗೊಳಿಸಿದೆ ಎಂದು ಮಾಹಿತಿ ನೀಡಿದರು.

 traffic violation
ನಗರದಲ್ಲಿ ಅಪಘಾತ ತಡೆಯಲು ಮೋಟಾರು ವಾಹನ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದ್ದು, ಸಂಚಾರಿ ನಿಯಮವನ್ನು ಪ್ರಥಮ ಬಾರಿಗೆ ಉಲ್ಲಂಘಿಸಿದ ಸಂದರ್ಭದಲ್ಲೇ ಚಾಲಕನ ಅಥವಾ ಸವಾರನ ಡ್ರೈವಿಂಗ್‌ ಲೈಸೆನ್ಸ್ ಅನರ್ಹಗೊಳಿಸಲು ಪ್ರಾದೇಶಿಕ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.[ಟ್ರಾಫಿಕ್‌ ಉಲ್ಲಂಘನೆ ಮಾಡುತ್ತಿರುವ ಸವಾರರ ವಿರುದ್ಧ ನೀವೇ ದೂರು ನೀಡಿ]

ಪಾದಚಾರಿ ರಸ್ತೆಯಲ್ಲಿ ವಾಹನ ಚಲಾಯಿಸುವುದು, ಅಪಾಯಕಾರಿ ಚಾಲನೆ, ಡ್ರ್ಯಾಗ್ ರೇಸಿಂಗ್, ವ್ಹೀಲಿಂಗ್,ಸಾರ್ವಜನಿಕ ಜೀವಕ್ಕೆ ಅಪಾಯ ವಾಗುವ ರೀತಿಯಲ್ಲಿ ವಾಹನ ಚಲಾಯಿಸುವವರ ಚಾಲಕರ ಲೈಸೆನ್ಸ್ ಅನರ್ಹಗೊಳಿಸಲು ಶಿಫಾರಸು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.[ಟ್ರಾಫಿಕ್‌ ಪೊಲೀಸರ ಕಷ್ಟ ತಿಳಿಯಬೇಕೆ? ವಿಡಿಯೋ ನೋಡಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+