ಬೆಂಗಳೂರಿನ ಕೊರೊನಾ ಸೋಂಕಿತರಲ್ಲಿ ಶೇ.42 ರಷ್ಟು ಯುವಕರು

ಬೆಂಗಳೂರು, ಏಪ್ರಿಲ್ 1: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೀಡಿರುವ ಮಾ.30ರ ಅಂಕಿ ಅಂಶಗಳ ಪ್ರಕಾರ 39 ಮಂದಿಗೆ ಕೊರೊನಾ ತಗುಲಿದ್ದು ಅದರಲ್ಲಿ 16 ಮಂದಿ ಯುವಕರಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಬಿಬಿಎಂಪಿ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. 39 ಸೋಂಕಿತ ಪ್ರಕರಣಗಳಲ್ಲಿ 1 ಮಹಿಳೆ, 20 ಪುರುಷರಿದ್ದಾರೆ. ಇದರಲ್ಲಿ 10 ವರ್ಷದೊಳಗಿನ ಒಂದು ಮಗು ಕೂಡ ಸೇರಿದೆ.
ಇನ್ನುಳಿದವರು 23 ಮಂದಿಯು 30 ವರ್ಷದಿಂದ 70 ವರ್ಷದವರಾಗಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ಎಂಟು ವಲಯಗಳಲ್ಲಿ ಅತಿ ಹೆಚ್ಚು 12 ಸೋಂಕು ಪ್ರಕರಣಗಳು ಪೂರ್ವ ವಲಯದಲ್ಲಿ ಕಂಡು ಬಂದಿದೆ.ಸೋಂಕು ದೃಢಪಟ್ಟ ವ್ಯಕ್ತಿಯೊಂದಿಗೆ ಪ್ರಾಥಮಿಕ ಹಾಗೂ ಪರೋಕ್ಷ ಸಂಬಂಧ ಹೊಂದಿದ್ದ 14,910 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಅದರಲ್ಲಿ ಮಾರ್ಚ್ 31ರವರೆಗೆ 10248 ಮಂದಿಯ ಹೋಮ್ ಕ್ವಾರಂಟೈನ್ ಅವಧಿ ಮುಗಿದಿದೆ.

42 Percent Of Youths Are Infected From Coronovirus In Bengaluru

ನಗರದಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ ಮಾರ್ಚ್ 8 ರಂದು ಪತ್ತೆಯಾಗಿತ್ತು. ಅದಾದ ಬಳಿಕ ಪ್ರತಿದಿನ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಆದರೆ ಮಾರ್ಚ್ 27 ರಿಂದ ಮಾ.30ರವರೆಗೆ ಯಾವುದೇ ಸೋಂಕು ಕಂಡುಬಂದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉಳಿದಂತೆ ದಕ್ಷಿಣ ವಲಯಗಳಲ್ಲಿ 8, ಮಹದೇವಪುರದಲ್ಲಿ 7, ಬೊಮ್ಮನಹಳ್ಳಿಯಲ್ಲಿ 6, ಪಶ್ಚಿಮ 4, ಆರ್ಆರ್‌ನಗರ ಹಾಗೂ ಯಲಹಂಕ ವಲಯದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+