ಮನೆ ಮಾಲೀಕನಿಂದ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಸಾವು
ಬೆಂಗಳೂರು, ಆಗಸ್ಟ್ 26 : ರಾಜಧಾನಿಯಲ್ಲಿ ಮತ್ತೊಂದು ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ಬೆಂಗಳೂರಿನ ತಲಘಟ್ಟಪುರದಲ್ಲಿ ಅತ್ಯಾಚಾರಕ್ಕೊಳಗಾಗಿದ್ದ 4 ವರ್ಷದ ಬಾಲಕಿ ಇಂದು (ಶುಕ್ರವಾರ) ಬೆಳಗ್ಗೆ ಬಾಲಕಿ ಸಾವನಪ್ಪಿದ್ದಾಳೆ.
ಆಗಸ್ಟ್ 17ರಂದು ಬಾಲಕಿಯ ತಾಯಿ ಕೆಲಸಕ್ಕೆ ಹೋಗಿದ್ದಾಗ ಮನೆಯ ಮಾಲೀಕನೇ ಅತ್ಯಾಚಾರ ನಡೆಸಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಯನ್ನು ಕೋರಮಂಗಲದಲ್ಲಿರುವ ಸೇಂಟ್ ಜಾನ್ಸ್ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಬಾಲಕಿ ಸಾವನಪ್ಪಿದ್ದಾಳೆ.

ಬಾಲಿಕಯನ್ನು ಮೊದಲು ಜಯನಗರದ ರಾಜೀವ್ ಗಾಂಧಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ, ಆಕೆಯನ್ನು ವೈದ್ಯರು ದಾಖಲಿಸಿಕೊಳ್ಳಲಿಲ್ಲ ಬಾಲಿಕಿಯ ಎಂದು ಪೋಷಕರು ಆರೋಪಸಿದ್ದಾರೆ.












Click it and Unblock the Notifications